ಕಾಂಗ್ರೆಸ್ ಸೇರಲು ಸಿದ್ದರಾದ ಶಾಸಕ : ಪಕ್ಷೇತರವಾಗಿ ಚುನಾವಣೆ ಗೆಲ್ಲಲಿ ಎಂದು ಸವಾಲ್

By Kannadaprabha News  |  First Published Dec 9, 2022, 5:26 AM IST

ಗುಬ್ಬಿ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಪಕ್ಷೇತರವಾಗಿ ಬಂದು ಚುನಾವಣೆ ಗೆಲ್ಲಲಿ ಎಂದು ಕಾಂಗ್ರೆಸ್‌ ಮುಖಂಡ ಜಿಎಸ್‌ ಪ್ರಸನ್ನ ಕುಮಾರ್‌ ಓಪನ್‌ ಚಾಲೆಂಜ್‌ ಹಾಕಿದರು.


ಗುಬ್ಬಿ (ಡಿ. 09) : ಗುಬ್ಬಿ ಶಾಸಕ ಎಸ್‌.ಆರ್‌ ಶ್ರೀನಿವಾಸ್‌ ಪಕ್ಷೇತರವಾಗಿ ಬಂದು ಚುನಾವಣೆ ಗೆಲ್ಲಲಿ ಎಂದು ಕಾಂಗ್ರೆಸ್‌ ಮುಖಂಡ ಜಿಎಸ್‌ ಪ್ರಸನ್ನ ಕುಮಾರ್‌ ಓಪನ್‌ ಚಾಲೆಂಜ್‌ ಹಾಕಿದರು.

(Congress)  ಕಚೇರಿಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಸೋಲಿನ ಭಯಕ್ಕೆ ನಾವು ಕಟ್ಟಿಬೆಳೆಸಿರುವಂತಹ ಪಕ್ಷಕ್ಕೆ ಆಗಮಿಸಲು ಹೊರಟಿದ್ದಾರೆ. ಕೇವಲ 12 ಸಾವಿರ ಗೂಡು ಎಂದು ಕಾಂಗ್ರೆಸ್‌ ಪಕ್ಷವನ್ನು ಜರಿದಿರುವರು (MLA)  ಪಕ್ಷಕ್ಕೆ ಬರುವುದಕ್ಕೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದ್ದಾರೆ.

Tap to resize

Latest Videos

20 ವರ್ಷದಲ್ಲಿ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮಾನ ಇಲ್ಲದ ಮೌಲ್ಯವು ಇಲ್ಲದ ರಾಜಕಾರಣಿ ಪಕ್ಷ ಹಾಳು ಮಾಡುವುದು ಬೇಡ, ಸಾವಿರಾರು ಎಕರೆ ಭೂಮಿಯನ್ನು ಇವರ ಹಿಂಬಾಲಕರು ಕೊಳ್ಳೆ ಹೊಡೆದಿದ್ದಾರೆ. ಜನರ ಮುಂದೆ ಕಾನೂನು ಶಿಕ್ಷೆ ಆಗಲಿ ಎಂದು ಹೇಳುವವರು ಇವರೇ, ಅವರನ್ನು ರಕ್ಷಿಸುತ್ತಿರುವವರು ಇವರೇ. 20 ವರ್ಷದಲ್ಲಿ ಇವರ ಅಭಿವೃದ್ಧಿಯ ಶ್ವೇತ ಪತ್ರವನ್ನು ಹೊರಡಿಸಲಿ, ಅದನ್ನು ಬಿಟ್ಟು ರಾಜ್ಯದ ಹಾಗೂ ಜಿಲ್ಲೆಯ ಕಾಂಗ್ರೆಸ್‌ ಮುಖಂಡರು ಈ ಬಗ್ಗೆ ಚಿಂತಿಸಬೇಕಾಗಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬರಬೇಕಾದರೂ ಸ್ವಂತ ಶಕ್ತಿಯಿಂದ ಗೆದ್ದು ಬಂದಿಲ್ಲ. ಜೆಡಿಎಸ್‌ ಪಕ್ಷದಲ್ಲಿ ಗೆಲ್ಲುವಾಗ ದೇವೇಗೌಡರ, ಕುಮಾರಸ್ವಾಮಿ ಅವರ ಹೆಸರಿನ ಮೇಲೆ ಗೆದ್ದಿರುವುದು ಬಿಟ್ಟರೆ

ನಿಮ್ಮ ಶಕ್ತಿ ಯಾವುದಿದೆ, ಪಕ್ಷದಿಂದ ಎಲ್ಲಾ ರೀತಿಯ ಸ್ಥಾನಮಾನ ನೀಡಿದ ದೇವೇಗೌಡರನ್ನ, ಕುಮಾರಸ್ವಾಮಿ ಅವರನ್ನ ಹಿರಿಯರಾದ ಸಂಸದರ ಬಗ್ಗೆ ಬಸವರಾಜುರನ್ನು ಬಾಯಿಗೆ ಬಂದಂತೆ ಮಾತನಾಡುವ ಶಾಸಕರಿಂದ ಅಭಿವೃದ್ಧಿ ಹೇಗೆ ಸಾಧ್ಯವಾಗುತ್ತದೆ. ನನ್ನನ್ನು ಇಂಡಿಪೆಂಡೆಂಟ್‌ ಆಗಿ ನಿಂತು ಗೆಲ್ಲಲಿ ಎಂದು ಹೇಳುವ ನೀವು ತಾಕತ್ತಿದ್ದರೆ, ಈ ಬಾರಿ ಇಂಡಿಪೆಂಡೆಂಟ್‌ ಆಗಿ ಬನ್ನಿ, ಆಗ ನಿಮ್ಮನ್ನು ಗಂಡುಗಲಿ ಎನ್ನುವೆ ಎಂದು ಶಾಸಕ ಶ್ರೀನಿವಾಸ್‌ ವಿರುದ್ಧ ಕಿಡಿ ಕಾರಿದರು.

ಮುಖಂಡ ಹೊನ್ನಗಿರಿಗೌಡ ಮಾತನಾಡಿ, ಇವರು ಕಾಂಗ್ರೆಸ್ಸಿಗೆ ಬರುವುದಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬರಲಿ. ಒಮ್ಮೆ ಕಾಂಗ್ರೆಸ್‌, ಒಮ್ಮೆ ಬಿಜೆಪಿ, ನಾನು, ಜೆಡಿಎಸ್‌ ನಲ್ಲೆ ಇದ್ದೇನೆ ಎನ್ನುವ ಮಾತು ಆಡುತ್ತಲೇ ಇಡೀ ತಾಲೂಕಿನಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ. ರಾಜಕೀಯ ಆಟ ಬಿಟ್ಟು, ಎಲ್ಲಿಗೆ ಹೋಗುತ್ತೇನೆ ಎಂಬುದನ್ನು ನಿರ್ಧರಿಸಿ, ಕಾಂಗ್ರೆಸಿಗೆ ಬಂದೇ ಬರುತ್ತೇನೆ ಎಂದರೆ ಬರಲಿ ನಾವ್ಯಾರು ಬೇಡ ಎನ್ನುವುದಿಲ್ಲ . ಆಮೇಲೆ ನಾವು ನಮ್ಮ ಪಕ್ಷ ಏನು ಎಂದು ತಿಳಿಯುತ್ತದೆ.

ಹಲವು ವರ್ಷಗಳ ಕಾಲ ಪಕ್ಷ ಕಟ್ಟಿಬೆಳೆಸಿದವರಿಗೆ ಅನ್ಯಾಯವಾಗುತ್ತಿದ್ದು, ಇವರೇನಾದರೂ ಪಕ್ಷಕ್ಕೆ ಬಂದರೆ ಬಂಡಾಯ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಿಲ್ಲುವುದು ಖಂಡಿತ. ಹಲವು ವರ್ಷ ಪಕ್ಷ ಕಟ್ಟಿಬೆಳೆಸಿರುವಂತಹ ನಮ್ಮಲ್ಲಿ ಯಾರಿಗಾದರೂ ಟಿಕೆಟ್‌ ನೀಡಿದರೆ ಅವರಿಗೆ ಕೆಲಸ ಮಾಡಿ, ಕಾಂಗ್ರೆಸ್‌ ಪಕ್ಷ ಉಳಿಸುತ್ತೇವೆ. ಇಲ್ಲದೆ ಹೋದರೆ ಬಂದವರು ಮುಂದೆ ಅವರೇ ಅನುಭವಿಸುತ್ತಾರೆ ಎಂದರು

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನರಸಿಂಹಯ್ಯ, ಮುಖಂಡರಾದ ಚಿಕ್ಕರಂಗೇಗೌಡ, ಎಂವಿ ಶ್ರೀನಿವಾಸ್‌, ಭಾಗ್ಯಮ್ಮ, ಹೇಮಂತ್‌, ಶಿವನಂದ ಇದ್ದರು.

  ಶಾಸಕ ಶ್ರೀನಿವಾಸ್‌ ಪಕ್ಷೇತರವಾಗಿ ಚುನಾವಣೆ ಗೆಲ್ಲಲಿ

-ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್‌ ಮುಖಂಡ ಪ್ರಸನ್ನ ಕುಮಾರ್‌ ಸವಾಲು

20 ವರ್ಷದಲ್ಲಿ ತಾಲೂಕಿನಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಮಾನ ಇಲ್ಲದ ಮೌಲ್ಯವು ಇಲ್ಲದ ರಾಜಕಾರಣಿ ಪಕ್ಷ ಹಾಳು ಮಾಡುವುದು ಬೇಡ

ಪಕ್ಷೇತರ ಅಭ್ಯರ್ಥಿಯಾಗಿ ಗೆದ್ದು ಬರಬೇಕಾದರೂ ಸ್ವಂತ ಶಕ್ತಿಯಿಂದ ಗೆದ್ದು ಬಂದಿಲ್ಲ. ಜೆಡಿಎಸ್‌ ಪಕ್ಷದಲ್ಲಿ ಗೆಲ್ಲುವಾಗ ದೇವೇಗೌಡರ, ಕುಮಾರಸ್ವಾಮಿ ಅವರ ಹೆಸರಿನ ಮೇಲೆ ಗೆದ್ದಿರುವುದು

ಶಾಸಕ ಶ್ರೀನಿವಾಸ್‌ ವಿರುದ್ಧ ಕಿಡಿ

click me!