ರೈತರ ಪರಿಕರಗಳನ್ನು ಜಿಎಸ್‌ಟಿಯಿಂದ ಹೊರಗಿಡಬೇಕು

By Kannadaprabha News  |  First Published Dec 9, 2022, 5:19 AM IST

ಕೃಷಿ ಪರಿಕರಗಳನ್ನು ಜಿ.ಎಸ್‌.ಟಿಯಿಂದ ಹೊರಗಿಡಬೇಕು, ಕಿಸಾನ್‌ ಸನ್ಮಾನ್‌ ನಿಧಿ ಮೊತ್ತವನ್ನು ದ್ವಿಗುಣಗೊಳಿಸುವುದು ಹಾಗೂ ಕೃಷಿ ಖರ್ಚುನ್ನು ಗಣನೆಗೆ ತೆಗೆದುಕೊಂಡು, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಬೇಕು ಎಂದು ಒತ್ತಾಯಿಸಿ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಕಿಸಾನ್‌ ಸಂಘ ಬೃಹತ್‌ ರೈತರ ಘರ್ಜನಾ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ತಿಳಿಸಿದ್ದಾ


 ತುಮಕೂರು (ಡಿ.09): ಕೃಷಿ ಪರಿಕರಗಳನ್ನು ಜಿ.ಎಸ್‌.ಟಿಯಿಂದ ಹೊರಗಿಡಬೇಕು, ಕಿಸಾನ್‌ ಸನ್ಮಾನ್‌ ನಿಧಿ ಮೊತ್ತವನ್ನು ದ್ವಿಗುಣಗೊಳಿಸುವುದು ಹಾಗೂ ಕೃಷಿ ಖರ್ಚುನ್ನು ಗಣನೆಗೆ ತೆಗೆದುಕೊಂಡು, ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ನಿಗಧಿ ಪಡಿಸಬೇಕು ಎಂದು ಒತ್ತಾಯಿಸಿ 19 ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಭಾರತೀಯ ಕಿಸಾನ್‌ ಸಂಘ ಬೃಹತ್‌ ರೈತರ ಘರ್ಜನಾ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಿಸಾನ್‌ ಸಂಘ 1979 ರಿಂದಲೂ (Agriculture)  ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ (Price)  ನಿಗಧಿ ಪಡಿಸಬೇಕೆಂದು ಆಗ್ರಹಿಸಿ, ಹೋರಾಟ ನಡೆಸುತ್ತಾ ಬಂದಿದ್ದೇವೆ. ಆದರೆ, ಇದುವರೆಗೂ ಯಾವುದೇ ಸರಕಾರಗಳು ನಮ್ಮ ಮನವಿಗೆ ಸ್ಪಂದಿಸಿಲ್ಲ. ರೈತರು ಬೆಳೆಗೆ ವೆಚ್ಚದ ಆಧಾರದಲ್ಲಿ ಬೆಲೆ ನಿಗಧಿಪಡಿಸಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

Tap to resize

Latest Videos

ಕೃಷಿ ಪರಿಕರಗಳಾದ ಗೊಬ್ಬರ, ಹನಿನೀರಾವರಿ ಪೈಪುಗಳು, ಬಿತ್ತನೆ ಬೀಜ, ಕೃಷಿ ಕಾರ್ಮಿಕರ ಕೂಲಿ, ಮಿಷನರಿಗಳ ಬಾಡಿಗೆ ಸೇರಿದಂತೆ ಎಲ್ಲವೂ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ಸರಕಾರಗಳು ಅವೈಜ್ಞಾನಿಕ ಎಂ.ಎಸ್‌ಪಿಗೆ ಜೋತು ಬಿದ್ದು, ಭಿಕ್ಷೆಯ ರೀತಿ, ಒಂದಿಷ್ಟುರು. ಹೆಚ್ಚಿಸಿ, ರೈತರಿಗೆ ಅಪಮಾನ ಮಾಡುತ್ತಿವೆ. ರೈತರ ಬಗ್ಗೆ ಕಾಳಜಿ ಇದ್ದರೆ, ರೈತರು ವೆಚ್ಚ ಮಾಡುವ ಬೆಳೆಯ ಅಧಾರದಲ್ಲಿ ಬೆಲೆ ನಿಗಧಿಯಾದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಜಿಲ್ಲೆಯಲ್ಲಿ ಕೊಬ್ಬರಿ ಪ್ರಮುಖ ಬೆಳೆಯಾಗಿದ್ದು, ಇಂದು ಕ್ವಿಂಟಾಲ್‌ ಕೊಬ್ಬರಿ 11 ಸಾವಿರಕ್ಕೆ ಕುಸಿದಿದೆ. ಒಂದು ಕ್ವಿಂಟಾಲ್‌ ಕೊಬ್ಬರಿ ಬೆಳೆಯಲು 15000 ರು. ಖರ್ಚು ಬರುತ್ತದೆ. ಹಾಗಾಗಿ, ಕ್ವಿಂಟಾಲ್‌ ಕೊಬ್ಬರಿಗೆ ಕನಿಷ್ಠ 20000 ಸಾವಿರ ರು. ನಿಗಧಿಪಡಿಸಬೇಕು., 2018ರ ರೈತರ 2 ಲಕ್ಷ ರು. ಗಳವರೆಗಿನ ಸಾಲ ಮನ್ನಾ ಮಾಡಿದ್ದು, ಈ ಅವಧಿಯಲ್ಲಿ ಉಳಿಕೆ ರೈತರ ಸಾಲ ಮಾನ್ನಾ ಮಾಡಬೇಕೆಂಬುದು ನಮ್ಮ ಒತ್ತಾಯ.

ಪ್ರಧಾನಮಂತ್ರಿ ಫಸಲ್‌ ಭೀಮಾ ಯೋಜನೆ ಎಲ್ಲಾ ಋುತುಮಾನಗಳಲ್ಲಿಯೂ ಬೆಳೆಯುವ ಬೆಳೆಗಳಿಗೆ ವಿಸ್ತರಿಸಬೇಕು. ಹತ್ತಾರು ವರ್ಷಗಳಿಂದ ಸರಕಾರಿ ಭೂಮಿ ಉಳುಮೆ ಮಾಡುತ್ತಾ ಸರಕಾರದಿಂದ ಜಮೀನು ಮಂಜೂರಾಗಿರುವ ಕುಟುಂಬಗಳ ಹೆಸರಿಗೆ ಖಾತೆ ಮಾಡಿಕೊಡುವ ಜೊತೆಗೆ, ಪಹಣಿ, ಪೋಡಿ ಮಾಡಿಕೊಡಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ಎಲ್ಲಾ ಬೇಡಿಕೆ ಮುಂದಿಟ್ಟುಕೊಂಡು ಡಿಸೆಂಬರ್‌ 19ರಂದು ಬೃಹತ್‌ ರೈತ ಘರ್ಜನಾ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ. 25 ಲಕ್ಷಕ್ಕೂ ಅಧಿಕ ರೈತರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ. 500ಕ್ಕೂ ಹೆಚ್ಚು ರೈತರು ಪಾಲ್ಗೊಳ್ಳುವರು. ಈಗಾಗಲೇ ರೈಲ್ವೆ ಬುಕ್ಕಿಂಗ್‌ ಮಾಡಲಾಗಿದೆ ಎಂದು ವಿಜಯಕುಮಾರ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಭಾರತೀಯ ಕಿಸಾನ್‌ ಸಂಘದ ದಕ್ಷಿಣ ಪ್ರಾಂತ್ಯ ಕಾರ್ಯದರ್ಶಿ ಸುರೇಶ್‌,ಸದಸ್ಯರಾದ ಸಂತೋಷ ಹಾರೋಹಳ್ಳಿ,ಜಿಲ್ಲಾ ಕಾರ್ಯದರ್ಶಿ ಸಿ.ಎಸ್‌.ಗಂಗಾಧರಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಡಾ.ಮೋಹನ್‌, ಕೋಶಾಧ್ಯಕ್ಷ ಮಹಾಲಿಂಗಪ್ಪ, ಮಹಿಳಾ ಪ್ರಮುಖ ನವಿನಾ ಸದಾಶಿವಯ್ಯ ಇದ್ದರು.

-ಭಾರತೀಯ ಕಿಸಾನ್‌ ಸಂಘದ ಜಿಲ್ಲಾಧ್ಯಕ್ಷ ವಿಜಯಕುಮಾರ್‌ ಒತ್ತಾಯ

ಸಾಲ ನೀಡದ ಬ್ಯಾಂಕ್‌ಗಳು

ಬೆಳಗಾವಿ(ಡಿ.08): ಆಧುನಿಕ ಕೃಷಿ ಮಾಡಲು ಮತ್ತು ಇಳುವರಿ ಉತ್ಪಾದನೆಯನ್ನು ದ್ವಿಗುಣಗೊಳಿಸಲು ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ರೈತ ಸಮುದಾಯಕ್ಕೆ ಅನೇಕ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನುಷ್ಠಾನಗೊಳಿಸಿವೆ. ಆದರೆ, ಗ್ರಾಮೀಣ ಭಾಗದ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸಾಲ ನೀಡಲು ನಿರಾಕರಿಸುತ್ತಿರುವುದರಿಂದ ಸರ್ಕಾರದ ಯೋಜನೆಗಳು ರೈತರಿಗೆ ತಲುಪುತ್ತಿಲ್ಲ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಅತಿವೃಷ್ಟಿ, ಕೊರೋನಾ ವೈರಸ್‌ ಹಾವಳಿಯಿಂದಾಗಿ ರೈತರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದಾಗಿ ಬೆಳೆಗಳು ಕೈಗೆ ಬಾರದ ಹಿನ್ನೆಲೆಯಲ್ಲಿ ಸಾಲದ ಸುಳಿಯಲ್ಲಿ ಸಿಕ್ಕಿರುವ ರೈತರು, ಹೇಗಾದರೂ ಮಾಡಿ ಆರ್ಥಿಕವಾಗಿ ಸದೃಢರಾಗಬೇಕೆಂಬ ಆಶಾಭಾವನೆಯ ಜತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಮುಂದಾಗಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕ್‌ಗಳು ರೈತರಿಗೆ ಸರ್ಕಾರದ ಯೋಜನೆಗಳಿಗೆ ಸಾಲ ನೀಡಲು ಮುಂದೆ ಬರುತ್ತಿಲ್ಲ ಎಂದು ರೈತರು ಆರೋಪಿಸುತ್ತಿದ್ದಾರೆ. ಇದರಿಂದಾಗಿ ಒಂದು ಕಡೆ ಸರ್ಕಾರದ ಯೋಜನೆಗಳು ರೈತರನ್ನು ತಲುಪುವುದು ಕೂಡ ಕಷ್ಟವಾಗಿದೆ. ಜತೆಗೆ ರತೈರು ಯೋಜನೆಗಳಿಂದ ಹಿಂದೆ ಸರಿಯುವಂತಹ ನಿರ್ಧಾರ ತಳೆಯುವ ಸಾಧ್ಯತೆಗಳೂ ಇವೆ. ಇದೆಲ್ಲಕ್ಕಿಂತ ಮುಖ್ಯವಾಗಿ ರೈತರಿಗೆ ಸಿಗಬೇಕಾದ ಸಾಲ ಸೌಲಭ್ಯ ಸೂಕ್ತ ಸಮಯಕ್ಕೆ ಸಿಗದಿರುವುದು ಕೂಡ ಅವರನ್ನು ಮತ್ತಷ್ಟುಆತಂಕಕ್ಕೆ ತಳ್ಳಿದೆ.

ಮಾವು ಬೆಳೆಗಾರರಿಂದ ಶ್ರೀನಿವಾಸಪುರ ತಾಲೂಕಿನ ಪಟ್ಟಣ ಬಂದ್

ರೈತರು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದ ನಂತರ, ಅವರು ತೋಟಗಾರಿಕಾ ಇಲಾಖೆಯ ರಾಷ್ಟ್ರೀಯ ಆರೋಗ್ಯ ಮಿಷನ್‌ (ಎನ್‌ಎಚ್‌ಎಂ) ಅಡಿಯಲ್ಲಿ ಪಾಲಿಹೌಸ್‌ನಲ್ಲಿ ಕ್ಯಾಪ್ಸಿಕಂ ಸಂರಕ್ಷಿತ ಕೃಷಿಯನ್ನು ಪ್ರಾರಂಭಿಸಲು ಬ್ಯಾಂಕ್‌ ಸಾಲಕ್ಕೆ ಅರ್ಜಿ ಸಲ್ಲಿಸುತ್ತಿದ್ದಾರೆ. ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ರೈತರಿಗೆ ಶೇ.40 ರಿಂದ ಶೇ.50ರಷ್ಟುಸಹಾಯಧನ ಸಿಗುತ್ತದೆ. ಆದರೆ, ಬ್ಯಾಂಕ್‌ ಅಧಿಕಾರಿಗಳು ಬೆಳೆ ಸಾಲ ಹೊಂದಿರುವುದಾಗಿ ಹೇಳಿ ಸಾಲ ನೀಡಲು ನಿರಾಕರಿಸುತ್ತಿದ್ದಾರೆ ಎಂದು ರೈತರೇ ಆರೋಪಿಸುತ್ತಿದ್ದಾರೆ. ಇದು ರೈತರ ಜೀವನೋಪಾಯಕ್ಕೂ ಕತ್ತರಿ ಹಾಕುವಂತಾಗಿದೆ.

19ರಂದು ಬೃಹತ್‌ ರೈತ ಘರ್ಜನಾ ರಾರ‍ಯಲಿ

25 ಲಕ್ಷಕ್ಕೂ ಅಧಿಕ ರೈತರು ಭಾಗಿಯಾಗುವ ನಿರೀಕ್ಷೆ

click me!