ಕೂಲಿ ಕೆಲಸ ಮಾಡುವವನು 10 ರೂಪಾಯಿ ಕೊಡುತ್ತಿದ್ದಾನೆ, ಅವನು ಅಕೌಂಟ್ ಕೇಳಲಿ. ದುಡ್ಡು ಕೊಡಲ್ಲ ಅಂತಾ ಹೇಳುವವರು ಅಕೌಂಟ್ ಕೇಳೊದಕ್ಕೆ ಇವರಾರಯರು?| ಸಂವಿಧಾನಬದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕೊಟ್ಟಂಥ ತೀರ್ಪು ಇದಾಗಿದೆ, ಸುಪ್ರೀಂ ತೀರ್ಪಿಗೆ ಅಪಮಾನ ಮಾಡಿದ ವಕೀಲ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ ಎಂದ ಈಶ್ವರಪ್ಪ|
ಯಾದಗಿರಿ(ಫೆ.20): ಗೋವಿನ ಶಾಪದಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡರಲ್ಲದೆ, ಚಾಮುಂಡಿ ಕ್ಷೇತ್ರದಲ್ಲಿ ಸೋತರು. ರಾಮನ ವಿರುದ್ಧ ಮಾತನಾಡಿದರೆ ಕಾಂಗ್ರೆಸ್ ನೆಲದೊಳಗೇ ಹೋಗಿಬಿಡುತ್ತದೆ ಎಂದು ಸಚಿವ ಈಶ್ವರಪ್ಪ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಸಂಜೆ ಯಾದಗಿರಿಗೆ ಆಗಮಿಸಿದ್ದ ಅವರು, ಮಾಧ್ಯಮಗಳೊಂದಿಗೆ ಮಾತನಾಡುತ್ತ, ರಾಮನನ್ನು ಟೀಕೆ ಮಾಡಿದರೆ ದೊಡ್ಡವನಾಗುತ್ತೇನೆ ಅನ್ನೋ ಭ್ರಮೆಯಲ್ಲಿ ಸಿದ್ದರಾಮಯ್ಯಇದ್ದಂತಿದೆ ಎಂದು ಟೀಕಿಸಿದರು. ದೇಶದ್ರೋಹದ ವಿಚಾರದಲ್ಲಿ ಸಿದ್ದರಾಮಯ್ಯ ಹಾಗೂ ಪಿಎಫ್‌ಐ ತಾ ಮುಂದೆ ನಾ ಮುಂದೆ ಎನ್ನುವಂತಿದೆ ಎಂದ ಈಶ್ವರಪ್ಪ, ಸಿದ್ದರಾಮಯ್ಯ ಹಾಗೂ ಪಿಎಫ್‌ಐ ಸ್ಪರ್ಧಾತ್ಮಕವಾಗಿ ಫೈಟಿಂಗ್ ಮಾಡುತ್ತ ಮುಂದೆ ಸಾಗಿದೆ. ಇವರೆಲ್ಲ ರಾಮ ಮಂದಿರ ನಿಧಿ ಸಂಗ್ರಹಣೆಯ ಅಕೌಂಟ್ ಕೇಳಿದ್ದಾರೆ ಎಂದು ಕಟುವಾಗಿ ಟೀಕಿಸಿದ ಅವರು, ಕೂಲಿ ಕೆಲಸ ಮಾಡುವವನು 10 ರೂಪಾಯಿ ಕೊಡುತ್ತಿದ್ದಾನೆ, ಅವನು ಅಕೌಂಟ್ ಕೇಳಲಿ. ದುಡ್ಡು ಕೊಡಲ್ಲ ಅಂತಾ ಹೇಳುವವರು ಅಕೌಂಟ್ ಕೇಳೊದಕ್ಕೆ ಇವರಾರಯರು ಎಂದು ಪ್ರಶ್ನಿಸಿದರು.
undefined
ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆ: ವಿದ್ಯಾರ್ಥಿಗಳ ಅಭ್ಯಾಸ ಕುಂಠಿತ
ಅಯೋಧ್ಯೆ ವಿವಾದಿತ ಜಾಗ ಅಂತಾರೆ, ಇವರಿಗೆ ಸುಪ್ರೀಂ ಕೋರ್ಟ್ ಮೇಲೆ ಗೌರವ ಇಲ್ವಾ ? ಎಂದು ವಿಪಕ್ಷಗಳ ಟೀಕೆಗೆ ಪ್ರಶ್ನಿಸಿದ ಅವರು, ಸಂವಿಧಾನ ಅರೆದು ಕುಡಿದ ಹಾಗೆ ಮಾತನಾಡುತ್ತಾರೆ, ಡಾ. ಅಂಬೇಡ್ಕರ್ ಬಿಟ್ಟರೆ ನಾನೇ ತಿಳಿವಳಿಕಸ್ಥ ಅಂತಾ ಹೇಳ್ತಾರೆ, ಸಂವಿಧಾನಬದ್ಧವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಕೊಟ್ಟಂಥ ತೀರ್ಪು ಇದಾಗಿದೆ, ಸುಪ್ರೀಂ ತೀರ್ಪಿಗೆ ಅಪಮಾನ ಮಾಡಿದ ವಕೀಲ ಸಿದ್ದರಾಮಯ್ಯ ಈ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಿಎಂ ವಿರುದ್ಧ ಗುಟುರು ಹಾಕಿದರು.