ಫೆ. 22 ರಿಂದ ಈ 3 ತರಗತಿಗಳು ಪುನರಾರಂಭ : ಸಿದ್ಧತೆಗೆ ಸೂಚನೆ

By Kannadaprabha News  |  First Published Feb 20, 2021, 1:01 PM IST

ಕೊರೋನಾ ಮಹಾಮಾರಿ ಹಿನ್ನೆಲೆಯಲ್ಲಿ ಮುಚ್ಚಲಾಗಿದ್ದ ಶಾಲೆಗಳನ್ನು ಇದೀಗ ಮತ್ತೊಮ್ಮೆ ತೆರಯಲಾಗುತ್ತಿದೆ. ಇದೀಗ  ಈ ಮೂರು ತರಗತಿಗಳನ್ನು ತೆರೆಯಲು ಸರ್ಕಾರ ಸೂಚನೆ ನೀಡಿದ್ದು ಸಿದ್ಧತೆ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. 


ಕೋಲಾರ (ಫೆ.20): ಸರ್ಕಾರದ ಸೂಚನೆಯಂತೆ ಫೆ.22 ರಿಂದ ಸರ್ಕಾರಿ,ಅನುದಾನಿತ,ಅನುದಾನರಹಿತ ಶಾಲೆಗಳಲ್ಲಿ ಎಲ್ಲಾ ದಿನವೂ 6ರಿಂದ 8ನೇ ತರಗತಿ ವಿದ್ಯಾರ್ಥಿಳಿಗೆ ಪೂರ್ಣಪ್ರಮಾಣದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸರ್ಕಾರ ಸೂಚಿಸಿದ್ದು, ಅದರಂತೆ ಕ್ರಮ ಕೈಗೊಳ್ಳಿ ಎಂದು ಶಾಲೆಗಳ ಮುಖ್ಯಶಿಕ್ಷಕರು, ಆಡಳಿತ ಮಂಡಳಿಗಳಿಗೆ ಡಿಡಿಪಿಐ ಕೃಷ್ಣಮೂರ್ತಿ ಸೂಚನೆ ನೀಡಿದ್ದಾರೆ.

ಶಿಕ್ಷಣ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಆರೋಗ್ಯ ಇಲಾಖೆಯ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿ ಸದಸ್ಯರು, ವಿವಿಧ ಇಲಾಖೆಗಳ ಅಧಿಕಾರಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಜಿಲ್ಲೆಯಲ್ಲಿ 6ರಿಂದ 8ನೇ ತರಗತಿಗೆ ಪೂರ್ಣಾವಧಿ ಶಾಲೆ ನಡೆಸಲು ಸೂಚಿಸಲಾಗಿದೆ ಮತ್ತು ಈಗಾಗಲೇ 9,10ನೇ ತರಗತಿಗೆ ಪೂರ್ಣಾವಧಿ ಶಾಲೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

Latest Videos

undefined

ಶಾಲೆ ಪ್ರಾರಂಭಕ್ಕೆ ರಾಜ್ಯ ಸರ್ಕಾರ ಅಧಿಕೃತ ಆದೇಶ: ಇಲ್ಲಿದೆ ಸಂಪೂರ್ಣ ಮಾಹಿತಿ

ಫೆ.22 ರಿಂದ 6,7ಮತ್ತು 8 ತರಗತಿಯ ಶಾಲೆಗಳು ಜಿಲ್ಲೆಯಲ್ಲಿ ಪೂರ್ಣಾವಧಿ ಶಾಲೆ ನಡೆಸಲು ಸೂಚಿಸಿರುವ ಡಿಡಿಪಿಐ ಅವರು, ಕೋವಿಡ್‌ ಸುರಕ್ಷತಾ ಕ್ರಮಗಳನ್ನು ತಪ್ಪದೇ ಅನುಸರಿಸಲು ಸೂಚಿಸಿದ್ದಾರೆ.

click me!