* ಸುಪ್ರಭಾತ ಹಾಗೂ ಓಂಕಾರ ಮೊಳಗಿಸುವಂತೆ ದೇವಸ್ಥಾನದ ಕಮಿಟಿಯವರಿಗೆ ಮನವಿ
* ಸುಪ್ರೀಂಕೋರ್ಟ್ ಆದೇಶ ಉಲ್ಲಂಘಿಸುತ್ತಿರುವ ಮಸೀದಿಗಳು
* ಮೇ.9 ರಿಂದ ಬೆಳಿಗ್ಗೆ 5 ಗಂಟೆಯಿಂದಲೇ ಸುಪ್ರಭಾತ ಹಾಕುವಂತೆ ಮನವಿ
ಧಾರವಾಡ(ಮೇ.05): ಧಾರವಾಡ(Dharwad) ನಗರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್(Pramod Mutalik) ಅವರು ಮೇ.9 ನೇ ತಾರೀಖಿನಿಂದ ಬೆಳಿಗ್ಗೆ 5 ಗಂಟೆಗೆ ದೇವಸ್ಥಾನದಲ್ಲಿ ಸುಪ್ರಭಾತ(Suprabhata) ಹಾಗೂ ಓಂಕಾರ ಮೊಳಗಿಸುವಂತೆ ದೇವಸ್ಥಾನದ ಕಮಿಟಿಯವರಿಗೆ ಹಾಗೂ ಅರ್ಚಕರಿಗೆ ಮನವಿ ಸಲ್ಲಿಸಿದರು.
ಮಸೀದಿಗಳ(Masjid) ಮೇಲೆ ಇರುವ ಧ್ವನಿ ವರ್ಧಕಗಳಿಂದ(Mic) ಬರುವ ಶಬ್ದವನ್ನು ನಿಯಂತ್ರಿಸುವಂತೆ ಮುತಾಲಿಕ್ ಅವರು ಈ ಹಿಂದೆಯೇ ಶಬ್ದ ಮಾಲಿನ್ಯ ನಿಯಂತ್ರಣ ಮಂಡಳಿಗೆ(Noise Pollution Control Board) ಮನವಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೇ ಇಂತಿಷ್ಟೆ ಶಬ್ದ ಇರಬೇಕು ಎಂದು ಸುಪ್ರೀಂಕೋರ್ಟ್(Supreme Court) ಆದೇಶವಿದ್ದರೂ ಮಸೀದಿಗಳು ಅದನ್ನು ಉಲ್ಲಂಘಿಸುತ್ತಿವೆ. ಹೀಗಾಗಿ ಹಿಂದೂ ದೇವಾಲಯಗಳಲ್ಲೂ(Hindu Temples) ಸುಪ್ರಭಾತ ಹಾಗೂ ಓಂಕಾರ ನಾದ ಮೊಳಗಿಸುವಂತೆ ಅಭಿಯಾನವನ್ನು ಆರಂಭಿಸಿದ್ದಾರೆ.
ಮಸೀದಿ ಮೈಕ್ ತೆರವಿಗೆ ಶ್ರೀರಾಮ ಸೇನೆ ಡೆಡ್‌ಲೈನ್: ಸಂಘರ್ಷದ ವಾರ್ನಿಂಗ್!
ಧಾರವಾಡದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿದ ಮುತಾಲಿಕ್, ಮೇ.9 ರಿಂದ ಬೆಳಿಗ್ಗೆ 5 ಗಂಟೆಯಿಂದಲೇ ಸುಪ್ರಭಾತ ಹಾಕುವಂತೆ ಮನವಿ ಮಾಡಿದರು. ಧಾರವಾಡದ ದತ್ತಾತ್ರೇಯ ದೇವಸ್ಥಾನ, ಲೈನ್ ಬಜಾರ್ ಆಂಜನೇಯ ದೇವಸ್ಥಾನ, ಶಿವಾಲಯ, ಲಕ್ಷ್ಮೀನಾರಾಯಣ ದೇವಸ್ಥಾನ ಸೇರಿದಂತೆ ಅನೇಕ ದೇವಸ್ಥಾನಗಳಿಗೆ ತೆರಳಿದ ಮುತಾಲಿಕ್ ಅವರು ಧ್ವನಿವರ್ಧಕಗಳಿಂದ ಓಂಕಾರ ನಾದ ಮೊಳಗುವಂತೆ ಮಾಡಬೇಕು ಎಂದು ಮನವಿ ಮಾಡಿದರು.
ಆಜಾನ್ ವಿರುದ್ದದ ನಮ್ಮ ಸುಪ್ರಭಾತ ತಡೆದರೆ ಸಂಘರ್ಷ: ಮುತಾಲಿಕ್ ಎಚ್ಚರಿಕೆ
ಮಂಗಳೂರು: ಆಜಾನ್ ಮೈಕ್ ಗಳನ್ನು ತೆರವುಗೊಳಿಸಲು ಸರ್ಕಾರಕ್ಕೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೀಡಿದ್ದ ಗಡುವು ಮುಕ್ತಾಯವಾಗಿದ್ದು, ಮೇ.9ರಿಂದ ರಾಜ್ಯದ ಸಾವಿರಕ್ಕೂ ಅಧಿಕ ಹಿಂದೂ ಧಾರ್ಮಿಕ ಕೇಂದ್ರಗಳಲ್ಲಿ ಆಜಾನ್ ವಿರುದ್ದ ಸುಪ್ರಭಾತ, ಮಂತ್ರಘೋಷ ಮೊಳಗಿಸಲಾಗುವುದು. ಇದನ್ನು ಸರ್ಕಾರ ತಡೆಯಲು ಮುಂದಾದರೆ ಸಂಘರ್ಷ ನಡೆಯಲಿದೆ ಎಂದು ಪ್ರಮೋದ್ ಮುತಾಲಿಕ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು.
ಕೇರಳಕ್ಕೆ ಹೋಗಿ ಹೋರಾಡುತ್ತೇನೆಂದ ಮುತಾಲಿಕ್
ಮಂಗಳೂರಿನಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಶ್ರೀರಾಮ ಸೇನೆ ಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿಕೆ ನೀಡಿದ್ದಾರೆ. ಸುಪ್ರೀಂ ಕೋರ್ಟ್ ಕಾನೂನು ಉತ್ತರ ಪ್ರದೇಶ ಮತ್ತು ಕರ್ನಾಟಕ್ಕೆ ಒಂದೇ. ಮುಖ್ಯಮಂತ್ರಿ ಯೋಗಿ ಮಸೀದಿ ಮೈಕ್ ಕೆಳಗಿಳಿಸ್ತಾರೆ ಅಂದ್ರೆ ಕರ್ನಾಟಕದ ಕಾನೂನು ಪಾಲಕರು ನೀವೇನ್ ಮಾಡ್ತಾ ಇದೀರಿ ಇಲ್ಲಿಯ ತನಕ ಹೋರಾಟ, ಮನವಿ, ದೂರು ಎಲ್ಲವೂ ಆಯ್ತು. ಆದ್ರೆ ನೋಟೀಸ್ ಕೊಡೋ ನಾಟಕ ಮಾಡಿ ನಿಲ್ಲಿಸಲಾಗಿದೆ. ಹೀಗಾಗಿ ಮೇ.9ರಿಂದ ಒಂದು ಸಾವಿರ ದೇವಸ್ಥಾನ ಮತ್ತು ಮಠಗಳಲ್ಲಿ ನಡೆಯಲಿದೆ. ಬೆ.5ಗಂಟೆಗೆ ಪ್ರಾರ್ಥನೆ, ಸುಪ್ರಭಾತ ಮತ್ತು ಓಂಕಾರ ಹಾಕ್ತೇವೆ. ಇದು ಸರ್ಕಾರ ಮತ್ತು ಮುಸ್ಲಿಂ ಸಮಾಜದ ವಿರುದ್ದ ನಮ್ಮ ಹೋರಾಟ. ಮುಸ್ಲಿಂ ಸಮಾಜದ ಉದ್ದಟತನ ಮತ್ತು ಸೊಕ್ಕಿನ ವರ್ತನೆ ಸರಿಯಲ್ಲ. ಅಜಾನ್, ಪ್ರಾರ್ಥನೆಗೆ ನಮ್ಮ ವಿರೋಧವಿಲ್ಲ, ಶಬ್ದಕ್ಕೆ ನಮ್ಮ ವಿರೋಧ. ಸದ್ಯ ನಮಗೂ ಕಾನೂನು ಉಲ್ಲಂಘನೆ ಒಂದೇ ಉಳಿದಿರೋ ದಾರಿ. ನಮ್ಮ ಪ್ರಾರ್ಥನೆಗೆ ಅಡ್ಡಿ ಪಡಿಸಿದ್ರೆ ಸಂಘರ್ಷ ನಡೆಯುತ್ತದೆ. ನಮ್ಮ ಮೇಲೆ ಕೇಸ್ ಹಾಕುವ ಮೊದಲು ಮುಸ್ಲಿಮ್ ಸಮಾಜದ ಮೇಲೆ ಕೇಸ್ ಹಾಕಿ. ಮೊದಲು ಮುಸ್ಲಿಮರ ಮೈಕ್ ಇಳಿಸಿ ನಮ್ಮ ದೇವಸ್ಥಾನಕ್ಕೆ ಬನ್ನಿ ಅಂತ ಸರ್ಕಾರಕ್ಕೆ ಹೇಳ್ತೇನೆ ಅಂತ ತಿಳಿಸಿದ್ದರು.