ಹಾಸನಕ್ಕೆ ನಾನು ಉಸ್ತುವಾರಿ ಸಚಿವನಾಗಿ ಹೋಗಿ ಸಂತ್ರಸ್ತರಿಗೆ ಕೇಸ್ ವಿಚಾರಣೆ ವೇಳೆ ನಿಮ್ಮ ಬೆಂಬಲಕ್ಕಿರುತ್ತೇವೆ ಎಂದು ಧೈರ್ಯ ಹೇಳಿದ ನಂತರ ಒಂದೊಂದೇ ಅಶ್ಲೀಲ ಕೇಸ್‌ಗಳು ಹೊರಬರುತ್ತಿವೆ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದರು.
ಬಾಗಲಕೋಟೆ (ಜೂ.23): ಹಾಸನದಲ್ಲಿ ನಡೆದಿರುವಂತಹ ಕೃತ್ಯಗಳು ಮಾನವ ಕುಲವೇ ತಲೆ ತಗ್ಗಿಸುವಂಥದ್ದಾಗಿವೆ. ಸಂತ್ರಸ್ತರಿಗೆ ಆಚೆ ಬಂದು ಹೇಳೋಕೆ ಧೈರ್ಯ ಇರಲಿಲ್ಲ. ಈಗ ನಾನು ಉಸ್ತುವಾರಿ ಆದ್ಮೇಲೆ ನಾನು ಧೈರ್ಯ ತುಂಬಿದ್ದೇನೆ. ನಿಮಗೆ ರಕ್ಷಣೆ ಕೊಡ್ತೀವಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆ ವೇಳೆ ನಿಮ್ಮ ಜೊತೆ ಇರ್ತೇವೆ ಎಂದು ಧೈರ್ಯ ತುಂಬಿದ ಪರಿಣಾಮ ಸಂತ್ರಸ್ತರು ಒಬ್ಬೊಬ್ರೆ ಆಚೆ ಬಂದು ಹೇಳ್ತಿದಾರೆ ಎಂದು ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಮಾಧ್ಯಮ ವರದಿಗಾರರು ಕೇಳಿದ ಹಾಸನ ಜಿಲ್ಲೆ ಬೇರೆ ವಿಷಯಕ್ಕೆ ಜಾಸ್ತಿ ಚರ್ಚೆ ಆಗ್ತಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಮಾನವ ಕುಲ ತಲೆ ತಗ್ಗಿಸುವ ಕೆಲಸ ಮಾಡಿರುವಂತಹದ್ದು. ಸಂತ್ರಸ್ತರಿಗೆ ಆಚೆ ಬಂದು ಹೇಳೋಕೆ ಧೈರ್ಯ ಇರಲಿಲ್ಲ. ಈಗ ನಾನು ಉಸ್ತುವಾರಿ ಆದ್ಮೇಲೆ ನಾನು ಧೈರ್ಯ ತುಂಬಿದ್ದೇನೆ. ನಿಮಗೆ ರಕ್ಷಣೆ ಕೊಡ್ತೀವಿ, ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸುವ ಪ್ರಕ್ರಿಯೆ ವೇಳೆ ನಿಮ್ಮ ಜೊತೆ ಇರ್ತೇವೆ ಎಂದಿದ್ದೇವೆ. ಇಂತಹ ಧೈರ್ಯ ತುಂಬಿದ ಪರಿಣಾಮ ಸಂತ್ರಸ್ತರು ಒಬ್ಬೊಬ್ರೆ ಆಚೆ ಬಂದು ಹೇಳ್ತಿದಾರೆ. ಈ ಪ್ರಕರಣಗಳು ನಿನ್ನೆ ಮೊನ್ನೆ ನಡೆದುದ್ದಲ್ಲ. ಬಹಳಷ್ಟು ವರ್ಷಗಳಿಂದಲೂ ನಿರಂತರವಾಗಿ ನಡೆದುಕೊಂಡು ಬಂದಿರೋದು. ಆಗ ಸಂತ್ರಸ್ತರಿಗೆ ಧೈರ್ಯ ಇರಲಿಲ್ಲ. ಈಗ ಧೈರ್ಯವಾಗಿ ಮುಂದೆ ಬರ್ತಿದಾರೆ. ಕಾನೂನು ತನ್ನ ಕೆಲಸ ಮಾಡುತ್ತದೆ ಎಂದು ಹೇಳಿದರು.
undefined
ಅಸಹಜ ಲೈಂಗಿಕ ದೌರ್ಜನ್ಯ ಆರೋಪ: ರಾತ್ರಿಯಿಡಿ ಸೂರಜ್ ರೇವಣ್ಣ ವಿಚಾರಣೆ ನಡೆಸಿದ ಪೊಲೀಸರು
ಅಸಹಜ ಲೈಂಗಿಕ ಪ್ರಕರಣದಡಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಬಂಧನ ವಿಚಾರದ ಬಗ್ಗೆ ಮಾತನಾಡಿ, ಇದು 377 ನಲ್ಲಿದೆ. ಕಾನೂನಾತ್ಮಕ ಏನು ಕ್ರಿಯೆ ನಡೆಯಬೇಕೋ ಅದು ನಡೆಯುತ್ತದೆ. ಯಾರದೇ ಹಸ್ತಕ್ಷೇಪ, ಒತ್ತಡ ಹಾಕೋಕೆ ನಾವು ಬಿಡಲ್ಲ. ತನಿಖಾಧಿಕಾರಿಗಳು ತನಿಖೆ ಮಾಡ್ತಾರೆ. ಸರ್ಕಾರದ ಮೇಲಾಗಲಿ, ಎಸ್ಐಟಿ, ಅಧಿಕಾರಿಗಳ ಮೇಲಾಗಲಿ ನಾವು ಒತ್ತಡ ಮಾಡಲ್ಲ. ತನಿಖಾಧಿಕಾರಿಗಳು ಸರ್ವ ಸ್ವತಂತ್ರರಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಬೇಕೆಂಬುದು ನಮ್ಮದು ಅಭಿಲಾಸೆ ಇದೆ ಎಂದು ತಿಳಿಸಿದರು.
ಸೂರಜ್ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣನ ಅಶ್ಲೀಲ ಸಂಬಂಧಿತ ಪ್ರಕರಣಗಳಿಂದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಇಳಿ ವಯಸ್ಸಿನಲ್ಲಿ ಎಷ್ಟು ಆಘಾತ, ನೋವು ತರ್ತಿರಬಹುದು. ಇದೊಂದು ದುರದೃಷ್ಟಕರ, ಇಳಿ ವಯಸ್ಸಿನಲ್ಲಿ ಮಾನಸಿಕವಾಗಿ ಈ ರೀತಿ ಹಿಂಸೆ ಅನುಭವಿಸುತ್ತಿದ್ದಾರೆ. ಯಾರೇ ಆಗಲಿ, ಹಿರಿಯರಾದವರಿಗೆ ಮಾನಸಿಕವಾಗಿ ಹಿಂಸೆ ಕೊಟ್ಟ ಹಾಗೆ ಆಗುತ್ತದೆ ಎಂದು ಹೇಳಿದರು.
ಅಸಹಜ ಲೈಂಗಿಕ ದೌರ್ಜನ್ಯ ಪ್ರಕರಣ; ಸಾಕ್ಷಿ ಕೊಡಲು ಬಂದು ಪೊಲೀಸರಿಗೆ ತಾನಾಗಿಯೇ ಸಿಕ್ಕಿಬಿದ್ದ ಸೂರಜ್ ರೇವಣ್ಣ!
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ಬಗ್ಗೆ ಕೈ ಶಾಸಕರ ಅಪಸ್ವರ ವಿಚಾರದ ಬಗ್ಗೆ ಮಾತನಾಡಿ, ಗ್ಯಾರಂಟಿ ಯೋಜನೆಗಳ ಅಪಸ್ವರ ಎಲ್ಲವೂ ಮಾಧ್ಯಮಗಳ ಸೃಷ್ಟಿಯಾಗಿದೆ.ಗ್ಯಾರಂಟಿ ನಿಲ್ಲಿಸಿ ಬಿಡ್ತಾರೆ, ಕ್ಯಾಬಿನೆಟ್ ನಲ್ಲಿ ಚರ್ಚೆ ಆಗಿದೆ, ಶಾಸಕರು ಚರ್ಚೆ ಮಾಡ್ತಿರೋದು ನಿಮ್ಮ ಸೃಷ್ಟಿ. ಯಾರೊಬ್ಬರೂ ಗ್ಯಾರಂಟಿ ನಿಲ್ಲಿಸಬೇಕೆಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಗ್ಯಾರಂಟಿ ನಿಲ್ಲಿಸಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಾವು ಗ್ಯಾರಂಟಿ ಮುಂದುವರೆಸುವ ಮೂಲಕ ಬಡವರಿಗೆ ನೀಡಿದ ಸೌಲಭ್ಯಗಳನ್ನು ಸಮರ್ಪಕವಾಗಿ ಪೂರೈಸುತ್ತೇವೆ. ಗ್ಯಾರಂಟಿ ಯೋಜನೆಗಳು ಕುಂಠಿತವೂ ಆಗಲ್ಲ, ಕಡಿತವೂ ಆಗಲ್ಲ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಸ್ಪಷ್ಟಪಡಿಸಿದರು.