ಅಲೆವೂರು ಗ್ರಾಪಂ ವ್ಯಾಪ್ತಿಯ ಕೊಡಂಗಳ ಎಂಬಲ್ಲಿ ನದಿಯಲ್ಲಿ ಕೊರೋನಾ ಚಿಕಿತ್ಸೆಗೆ ವೈದ್ಯರು ಧರಿಸುವ ಪರ್ಸನಲ್ ಪ್ರೊಟೆಕ್ಷನ್ ಎಕ್ಯುಪ್‌ಮೆಂಟ್ (ಪಿಪಿಇ) ಉಡುಪು ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ. ಕೊರೋನಾ ವೈರಸ್ ಭೀತಿ ಹೆಚ್ಚಿರುವ ಸಂದರ್ಭದಲ್ಲಿ ಇದು ಇನ್ನಷ್ಟು ಆತಂಕ ಮೂಡಿಸಿದೆ.
ಉಡುಪಿ(ಏ.29): ಇಲ್ಲಿನ ಅಲೆವೂರು ಗ್ರಾಪಂ ವ್ಯಾಪ್ತಿಯ ಕೊಡಂಗಳ ಎಂಬಲ್ಲಿ ನದಿಯಲ್ಲಿ ಕೊರೋನಾ ಚಿಕಿತ್ಸೆಗೆ ವೈದ್ಯರು ಧರಿಸುವ ಪರ್ಸನಲ್ ಪ್ರೊಟೆಕ್ಷನ್ ಎಕ್ಯುಪ್‌ಮೆಂಟ್ (ಪಿಪಿಇ) ಉಡುಪು ಮಂಗಳವಾರ ಮಧ್ಯಾಹ್ನ ಪತ್ತೆಯಾಗಿದೆ. ಅದರೆ ರಾತ್ರಿವರೆಗೂ ಅದರ ಬಗ್ಗೆ ಯಾವುದೇ ಕ್ರಮ ನಡೆದಿಲ್ಲ.
ಈ ಪಿಪಿಇ ಪತ್ತೆಯಾಗಿರುವ ಬಗ್ಗೆ ಪಂಚಾಯಿತಿ ವತಿಯಿಂದ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ. ಆರೋಗ್ಯ ಇಲಾಖೆಯಿಂದ ಪೊಲೀಸ್ ದೂರು ನೀಡಲಾಗಿದೆ. ಇದೀಗ ಈ ಪಿಪಿಇ ಕೊರೋನಾ ಚಿಕಿತ್ಸೆಯಲ್ಲಿ ಮಾತ್ರ ಬಳಸುವಂತಹದ್ದಾಗಿರುವುದರಿಂದ, ಅಪಾಯಕಾರಿಯಾಗಿದೆ.
ಮೊಬೈಲ್ ನೋಡುತ್ತಾ ಕಾಡಾನೆಗೆ ಡಿಕ್ಕಿ ಹೊಡೆದ ಭೂಪ!
ಅದನ್ನು ಯಾವ ಆಸ್ಪತ್ರೆಯಲ್ಲಿ ಬಳಸಿದ್ದು, ಯಾರು ಅದನ್ನು ಇಲ್ಲಿಗೆ ತಂದು ಎಸೆದದವರು ಮತ್ತು ಯಾವ ಉದ್ದೇಶದಿಂದ ಎಸೆಯಲಾಗಿದೆ ಎಂಬ ಬಗ್ಗೆ ಪೊಲೀಸರಿಂದ ತನಿಖೆಯಾಗಬೇಕಾಗಿದೆ.
ಪಾದರಾಯನಪುರ ತಳ್ಳುಗಾಡಿ ತರಕಾರಿ ವ್ಯಾಪಾರಿಗೆ ಸೋಂಕು!
ಆದರೆ ಪೊಲೀಸರು ರಾತ್ರಿಯವರೆಗೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಪೊಲೀಸರ ತನಿಖೆಯ ನಂತರ ಈ ಪಿಪಿಇಯನ್ನು ಬಯೋಕೆಮಿಕಲ್ ವೇಸ್ವ್ ಮ್ಯಾನೇಜ್ಮೆಂಟ್ ನಿಯಮಗಳ ಪ್ರಕಾರ ನಾಶಮಾಡಬೇಕು, ಅದರ ವಿಧಾನಗಳನ್ನು ಪಂಚಾಯಿತಿಗೆ ನೀೕಡುವುದಕ್ಕೆ ಆರೋಗ್ಯ ಇಲಾಖೆ ಸಿದ್ಧವಾಗಿದೆ ಎಂದು ಕೊರೋನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ತಿಳಿಸಿದ್ದಾರೆ.