Mangaluru Bomb Blast:ಅಧರ್ಮದಲ್ಲಿ ಬಂದವರಿಗೆ ಶಿಕ್ಷೆ ನೀಡಿದ ತುಳುನಾಡಿನ ಕಾರ್ಣಿಕ ಅವಳಿ ಪುರುಷರು!

By Gowthami KFirst Published Nov 22, 2022, 11:14 AM IST
Highlights

ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ನಂತರ ದೈವ ಪವಾಡದ ಸುದ್ದಿ ಕರಾವಳಿಯಲ್ಲಿ ಚರ್ಚೆಯಾಗ್ತಿದೆ. ಕುಕ್ಕರ್ ಬಾಂಬ್ ಸ್ಫೋಟ ಪ್ರಸಿದ್ಧ ಗರೋಡಿ ಕ್ಷೇತ್ರದ 200 ಮೀಟರ್‌ ದೂರದಲ್ಲಿ ನಡೆದಿತ್ತು. ಈ ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳುತ್ತಿದ್ದಾರೆ.

ಮಂಗಳೂರು (ನ.22): ಮಂಗಳೂರಿನಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟದ ನಂತರ ದೈವ ಪವಾಡದ ಸುದ್ದಿ ಕರಾವಳಿಯಲ್ಲಿ ವ್ಯಾಪಕ ಚರ್ಚೆಯಾಗ್ತಿದೆ. ಆಟೋ ರಿಕ್ಷಾದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಸಿದ್ಧ ಗರೋಡಿ ಕ್ಷೇತ್ರದ 200 ಮೀಟರ್‌ ದೂರದಲ್ಲಿ ನಡೆದಿತ್ತು. ಈ ದೊಡ್ಡ ಅನಾಹುತ ತಪ್ಪಿಸಿದ್ದೇ ಗರೋಡಿ ಕ್ಷೇತ್ರದ ಕಾರಣಿಕ ಶಕ್ತಿಗಳು ಎಂದು ಭಕ್ತರು ಹೇಳುತ್ತಿದ್ದಾರೆ. ಮಂಗಳೂರಿನ ಗರೋಡಿ ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲಿ ಕೋಟಿ-ಚೆನ್ನಯ್ಯ ಅವಳಿ ಮಹಾಪುರುಷ ಶಕ್ತಿಗಳು ನೆಲೆಯೂರಿದ್ದಾರೆ. ನವೆಂಬರ್ 19ರಂದು ನಡೆದ ಬಾಂಬ್ ಸ್ಫೋಟ ದೊಡ್ಡ ಮಟ್ಟದಲ್ಲಿ ನಡೆಯದಂತೆ ಅನಾಹುತ ತಪ್ಪಿಸಿದ್ದು ಇದೇ  ಶಕ್ತಿಗಳು ಎಂದು ಹೇಳಲಾಗುತ್ತಿದೆ. ಮಾನವ ಬಲವೊಂದಿದ್ದರೆ ಸಾಲದು ದೈವಬಲವೂ ಬೇಕು ಅನ್ನೋದಕ್ಕೆ ಇದೇ ಸಾಕ್ಷಿ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಪ್ರತಿ ದಿನ  ಬ್ರಹ್ಮಬೈದರ್ಕಳ ಕ್ಷೇತ್ರಕ್ಕೆ ಬಂದು ಆಟೋ ಚಾಲಕ ಪುರುಷೋತ್ತಮ್ ಕೈ ಮುಗಿಯುತ್ತಿದ್ದರು.  ಪ್ರತೀ ಆಟೋ ಚಾಲಕರು ಈ ಕ್ಷೇತ್ರದಲ್ಲಿ ಕೈಮುಗಿದು ದಿನ ಆರಂಭ ಮಾಡುತ್ತಿದ್ದರು. ಹೀಗಾಗಿ ಈ ಶಕ್ತಿಯೇ ದೊಡ್ಡ ಅನಾಹುತ ತಪ್ಪಿಸಿದೆ ಅನ್ನೋದು ಭಕ್ತರ ನಂಬಿಕೆ. ಮಾತ್ರವಲ್ಲ ದೊಡ್ಡ ಅನಾಹುತ ತಪ್ಪಿದ್ದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಿದ್ದ ಎಡಿಜಿಪಿ ಅಲೋಕ್ ಕುಮಾರ್.

ಮಂಗಳೂರು ಸ್ಫೋಟ: ಬಾಂಬ್‌ ಸರಿಯಾಗಿ ಫಿಟ್‌ ಆಗಿರಲಿಲ್ಲ, ಅರ್ಧಂಬರ್ಧ ಕಲಿತಿದ್ದ ಶಾರೀಕ್‌

ಶಾರೀಕ್‌ ಆತ್ಮಾಹುತಿ ಬಾಂಬರ್‌ ಇರಬಹುದು: ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದಲ್ಲಿ ಮೇಲ್ನೋಟಕ್ಕೆ ಶಾರೀಕ್‌ ಆತ್ಮಾಹುತಿ ಬಾಂಬರ್‌ ಅಂತ ಅನಿಸುತ್ತದೆ. ತನಿಖೆ ನಂತರ ಸತ್ಯಾಂಶ ಗೊತ್ತಾಗಲಿದೆ  ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಶಾರೀಕ್‌ ಹುಬ್ಬಳ್ಳಿಯಲ್ಲಿ ಸ್ವಲ್ಪ ದಿನ ಇದ್ದ. ಅಲ್ಲಿ ಆಧಾರ್‌ ಕಾರ್ಡ್‌ ಕಳವು ಮಾಡಿದ್ದ. ಮೈಸೂರಿನಲ್ಲೂ ಕೆಲಕಾಲ ವಾಸವಿದ್ದು, ಪೊಲೀಸರು ಅಲ್ಲೂ ದಾಳಿ ಮಾಡಿದ್ದಾರೆ. ಈ ಬಗ್ಗೆ ಎಲ್ಲ ಮಾಹಿತಿ ಇದೆ. ಸಮಗ್ರ ತನಿಖೆ ನಡೆಯುತ್ತಿದೆ. ತನಿಖೆ ನಂತರ ಸಂಪೂರ್ಣ ಮಾಹಿತಿ ಸಿಗಲಿದೆ. ಶಿವಮೊಗ್ಗ ತುಂಗಾನದಿಯಲ್ಲಿ ಟ್ರಯಲ್‌ ಬ್ಲಾಸ್ಟ್‌ ಹಾಗೂ ಮಂಗಳೂರು ಬ್ಲಾಸ್ಟ್‌ಗೂ ಲಿಂಕ್‌ ಇದೆ. ಹೀಗಾಗಿ ಎರಡರ ಬಗ್ಗೆಯೂ ಪೊಲೀಸರು ತನಿಖೆ ಮಾಡುತ್ತಾರೆ ಎಂದು ಹೇಳಿದರು.

ಮಂಗಳೂರು ಸ್ಫೋಟ ಪ್ರಕರಣ: ಮೈಸೂರಿನಲ್ಲಿ ಹೇಗಿದ್ದ ಗೊತ್ತಾ ಉಗ್ರ ಶಾರೀಕ್?

48 ಗಂಟೆಯೊಳಗೆ ಪ್ರಕರಣ ಭೇದಿಸಿದ್ದ ಪೊಲೀಸರು: ಮಂಗಳೂರು ನಗರದ ನಾಗುರಿ ಸಮೀಪ ನ.19ರಂದು ಸಂಜೆ ಚಲಿಸುತ್ತಿದ್ದ ಆಟೋದಲ್ಲಿ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣವನ್ನು 48 ಗಂಟೆಯೊಳಗೆ ಪೊಲೀಸ್‌ ಇಲಾಖೆ ಭೇದಿಸಿದೆ. ಸ್ಫೋಟ ನಡೆಸಿದ್ದು ಮಂಗಳೂರು ಉಗ್ರಪರ ಗೋಡೆ ಬರಹ ಬರೆದ ಹಾಗೂ ಶಿವಮೊಗ್ಗದ ತುಂಗಾ ನದಿ ತೀರದಲ್ಲಿ ಟ್ರಯಲ್‌ ಸ್ಫೋಟದ ಪ್ರಮುಖ ಆರೋಪಿ ತೀರ್ಥಹಳ್ಳಿಯ ಉಗ್ರ ಶಾರೀಕ್‌ (24) ಎನ್ನುವುದು ಸಾಬೀತಾಗಿದೆ.

ಮಂಗಳೂರಿನಲ್ಲಿ ಬಾಂಬ್ ಸ್ಫೋಟ, ಕೊಡಗಿನಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ತೀವ್ರ ಪರಿಶೀಲನೆ

ಈತನ ಮೈಸೂರು ಬಾಡಿಗೆ ರೂಮ್‌ನಿಂದ ಬಾಂಬ್‌ ತಯಾರಿಗೆ ಬಳಸುವ ಭಾರೀ ಪ್ರಮಾಣದ ಸಾಮಗ್ರಿಗಳನ್ನು ಪೊಲೀಸರು ವಶಪಡಿಸಿ ಮಂಗಳೂರಿಗೆ ತಂದಿದ್ದಾರೆ. ಉಗ್ರ ಸಂಘಟನೆಗಳೊಂದಿಗೆ ಈತನ ಲಿಂಕ್‌ ಇರುವ ಜಾಡು ಹಿಡಿದು ಪೊಲೀಸ್‌ ತಂಡಗಳು ಏಳು ಕಡೆ ಶೋಧ ಕಾರ್ಯ ನಡೆಸಿದ್ದು, ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ರಾಷ್ಟ್ರೀಯ ತನಿಖಾ ತಂಡಗಳ ಸಹಕಾರದಲ್ಲಿ ಹಲವು ಆಯಾಮಗಳಲ್ಲಿ ರಾಜ್ಯ- ಹೊರರಾಜ್ಯಗಳಲ್ಲಿ ಬಿರುಸಿನ ತನಿಖೆ ಮುಂದುವರಿದಿದೆ.

 

click me!