ಶಿವಮೊಗ್ಗ: ಅಕ್ರಮವಾಗಿ ಸಂಗ್ರಹಿಸಿದ್ದ 168 ಕ್ವಿಂಟಾಲ್ ಪಡಿತರ ಅಕ್ಕಿ ವಶ

By Girish Goudar  |  First Published Nov 22, 2022, 11:02 AM IST

ಶಿವಮೊಗ್ಗದ ಗಾಡಿಕೊಪ್ಪದ ಗೋಡೌನ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ ಪಡಿತರ ಅಕ್ಕಿ ಜಪ್ತಿ


ಶಿವಮೊಗ್ಗ(ನ.22):  ಗೋಡೌನ್‌ನಲ್ಲಿ ಅಕ್ರಮವಾಗಿ ಸಂಗ್ರಹಿಸಿದ್ದ 168 ಕ್ವಿಂಟಾಲ್ ಪಡಿತರ ಅಕ್ಕಿಯನ್ನ ಪೊಲೀಸರು ವಶಪಡಿಸಿಕೊಂಡ ಘಟನೆ ಶಿವಮೊಗ್ಗದ ಗಾಡಿಕೊಪ್ಪದಲ್ಲಿ ಇಂದು(ಮಂಗಳವಾರ) ನಡೆದಿದೆ. ಅಕ್ರಮವಾಗಿ ಸಂಗ್ರಹಿಸಿ ಕಾಳಸಂತೆಯಲ್ಲಿ ಅಕ್ಕಿ  ಮಾರಾಟ ಮಾಡಲು ಮುಂದಾಗಿದ್ದ ಅರು ಮಂದಿಯನ್ನ ಬಂಧಿಸಲಾಗಿದೆ. 3.70 ಲಕ್ಷ ರೂ. ಮೌಲ್ಯದ 168 ಕ್ವಿಂಟಾಲ್ ಅಕ್ಕಿ, ಎರಡು ಕ್ಯಾಂಟರ್, ಮೂರು ಯಂತ್ರಗಳನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ. 

ಶಿವಮೊಗ್ಗದ ಕಸ್ತೂರಬಾ ರಸ್ತೆಯ ಕಾರ್ತಿಕೇಯನ್ ಅಲಿಯಾಸ್ ಕಾರ್ತಿಕ್ (53), ಕಾಚಿನಕಟ್ಟೆಯ ಗೋಪಿ (23), ಸೀತಾರಾಮ (40), ಮತ್ತಿಘಟ್ಟದ ಕಾಂತರಾಜ (32), ನ್ಯೂ ಮಂಡ್ಲಿಯ ಯುವರಾಜ (28), ಭದ್ರಾವತಿ ತಾಲೂಕಿನ ದೇವರ ನರಸೀಪುರದ ಶ್ರೀನಿಧಿ (20) ಬಂಧಿತ ಆರೋಪಿಗಳಾಗಿದ್ದಾರೆ. 

Tap to resize

Latest Videos

ಪೊಲೀಸರಿಂದ ಶಂಕಿತ ಉಗ್ರ ಶಾರೀಕ್‌ ಮನೆ ಸೇರಿ 4 ಮನೆಗಳ ತಪಾಸಣೆ

ಗಾಡಿಕೊಪ್ಪದಲ್ಲಿರುವ ಕಾರ್ತಿಕೇಯನ್ ಅವರ ಗೋಡೌನ್‌ನಲ್ಲಿ ಅಕ್ರಮವಾಗಿ ಪಡಿತರ ಅಕ್ಕಿ ಸಂಗ್ರಹಿಸಿದ್ದರು ಎಂಬ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಠಾಣೆ ಪೊಲೀಸರು ಹಾಗೂ ಆಹಾರ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. 

ದಾಳಿ ವೇಳೆ 338 ಚೀಲಗಳಲ್ಲಿದ್ದ ಅಕ್ಕಿ, ಎರಡು ಕ್ಯಾಂಟರ್, ಎರಡು ಎಲೆಕ್ಟ್ರಾನಿಕ್ ತೂಕದ ಯಂತ್ರ ಮತ್ತು ಒಂದು ಚೀಲಗಳನ್ನು ಹೊಲಿಗೆ ಯಂತ್ರವನ್ನ ಜಪ್ತಿ ಮಾಡಿಕೊಳ್ಳಲಾಗಿದೆ.  ಈ ಸಂಬಂಧ ತುಂಗಾನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 

click me!