ಇಲ್ಲಿರೋ ಸಮಸ್ಯೆಗಳೆಲ್ಲಾ ಕಣ್ಣಿಗೆ ಬೀಳೋಕೆ ಡಿಸಿ ಮೇಡಂ ಏನು ಸ್ಕೂಟಿಯಲ್ಲಿ ಓಡಾಡ್ತಾರಾ ಹೀಗೆಂದು ಇಲ್ಲಿನ ನಾಗರಿಕರು ಪ್ರಶ್ನೆ ಮಾಡ್ತಿದ್ದಾರೆ.
ಚಿತ್ರದುರ್ಗ [ಜ.19]: ಶಾಸಕ ತಿಪ್ಪಾರೆಡ್ಡಿ ಡೈಲಿ ಕಾಂಕ್ರಿಟ್ ರಸ್ತೆ ಉದ್ಘಾಟನೆ ಮಾಡ್ತಾರೆ, ನಗರಸಭೆ ಕಮಿಷನರ್‌ಗೆ ಕಸ ಎತ್ತೋದೆ ಸಾಕಾಗಿದೆ, ಆಡಳಿತಾಧಿಕಾರಿ ಡಿಸಿ ಮೇಡಂ ಕಾರ್‌ನಲ್ಲಿ ಓಡಾಡ್ತಾರೆ, ಅವರೊಮ್ಮೆ ಸ್ಕೂಟಿಯಲ್ಲಿ ಅಡ್ಡಾಡಿ ನೋಡಲಿ, ದುರ್ಗದ ರಸ್ತೆಗಳು ಹೆಂಗಿವೆ ಅಂತ ಅರ್ಥ ಆಗುತ್ತೆ?
ಚಿತ್ರದುರ್ಗದ ನಾಗರಿಕರ ಈ ಮಿಲಿಯನ್ ಡಾಲರ್ ಪ್ರಶ್ನೆಗೆ ಕಳೆದ ಒಂದು ದಶಕದಿಂದಲೂ ಉತ್ತರ ಸಿಕ್ಕಿಲ್ಲ. ನಗರದಲ್ಲಿ ನೂರಾರು ಕೋಟಿ ರುಪಾಯಿ ರಸ್ತೆ ಕಾಮಗಾರಿ ನಡೆಯುತ್ತಿವೆ ಎಂಬ ಸುದ್ದಿ ಪತ್ರಿಕೆಗಳಲ್ಲಿ ಓದಿ, ಓದಿ ಸಾಕಾಗಿರುವ ಜನ ಪ್ರಮುಖ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳ ಯಾರು ಮುಚ್ತಾರೆ ಎಂಬ ಪ್ರಶ್ನೆಗೆ ಇದುವರೆಗೂ ಉತ್ತರಗಳ ಪಡೆದುಕೊಂಡಿಲ್ಲ.
ಚಿತ್ರದುರ್ಗ ನಗರದ ಒಳ ಭಾಗದ ರಸ್ತೆಗಳ ಕಾಂಕ್ರಿಟ್ ಕಾಮಗಾರಿಗಳು ಭರದಿಂದ ಸಾಗಿದ್ದು, ಪ್ರಮುಖ ರಸ್ತೆಗಳ ದುಸ್ಥಿತಿಯಂತೂ ಹೇಳತೀರ
ದಾಗಿದೆ. ಒಂದೂ ಒಳ್ಳೆ ರಸ್ತೆಗಳು ಕಾಣಿಸುತ್ತಿಲ್ಲ.ಪ್ರವಾಸಿ ಮಂದಿರದಿಂದ ಗಾಂಧಿ ವೃತ್ತ, ನಂತರ ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ಹಾಗೂ ಸಂಗಮೇಶ್ವರ ಸ್ಟೋರ್ಸ್‌ನಿಂದ ರಾಷ್ಟ್ರೀಯ ಹೆದ್ದಾರಿ ನಾಲ್ಕರವರೆಗಿನ ಜೆಸಿಆರ್ ರಸ್ತೆ ಬರೀ ಗುಂಡಿಗಳಿಂದ ತುಂಬಿ ಹೋಗಿದೆ.
ನಿಮ್ಮ ಕೈಲಿ ಬಡವರ ಕೆಲ್ಸ ಮಾಡಲು ಆಗುತ್ತಾ, ಇಲ್ಲ ನಾನೇ ಮಾಡ್ಲಾ : ಡಿಸಿ ಗರಂ...
ಯಾರಿಗ್ಹೇಳಾನಾ ನಮ್ಮ ಪ್ರಾಬ್ಲಮ್ಮು:ಈ ರಸ್ತೆಗಳಲ್ಲಿ ನಿತ್ಯ ಕನಿಷ್ಠ 50 ಮಂದಿ ದ್ವಿಚಕ್ರ ವಾಹನ ಚಾಲಕರು ಬಿದ್ದು, ಎದ್ದು ಹೋಗುತ್ತಿದ್ದಾರೆ. ವಯಸ್ಸಾದ ಕೆಲ ವರು ನಡು ಮುರಿದುಕೊಂಡು ಆಸ್ಪತ್ರೆ ಹಾದಿ ತುಳಿ ದಿದ್ದಾರೆ. ಈ ಗೋಳನ್ನು ಎಲ್ಲೂ ಹೇಳಿಕೊಳ್ಳಲುಸಾಧ್ಯ ವಾಗದಂತಹ ಪರಿಸ್ಥಿತಿಯನ್ನು ದ್ವಿಚಕ್ರ ವಾಹನ ಚಾಲಕರು ಅನುಭವಿಸುತ್ತಿದ್ದಾರೆ.
ರೀಲ್ ಹೀರೋ ಅಲ್ಲ.. ಕೋಟೆ ಏರಿದ ಕೋತಿರಾಜನ ಬಾಯಿಂದ ಬಂದ ಒಂದೇ ಮಾತು!...
ನಗರದಲ್ಲಿ ಕೈಗೆತ್ತಿಕೊಂಡ ಒಳಚರಂಡಿ ಕಾಮಗಾರಿ ಯಿಂದಾಗಿ ಬಹುತೇಕ ರಸ್ತೆಗಳು ಹಾಳಾಗಿ ಹೋಗಿವೆ. ಕಾಮಗಾರಿ ಮುಗಿದ ನಂತರ ಗುಂಡಿಗಳ ಮುಚ್ಚಬೇಕೆಂಬ ನಿಬಂಧನೆಗಳಿದ್ದರೂ ಗುತ್ತಿಗೆದಾರರು ತಲೆಕೆಡಿಸಿಕೊಳ್ಳುತ್ತಿಲ್ಲ. ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಈ ಬಗ್ಗೆ ಹಲವಾರು ಬಾರಿ ಎಚ್ಚರಿಕೆ ಕೊಟ್ಟರೂ ಗುತ್ತಿಗೆದಾರರು ಜಪ್ಪಯ್ಯ ಎನ್ನುತ್ತಿಲ್ಲ. ‘‘ಯಾರಿಗ್ ಹೇಳೋಣ ನಮ್ಮ ಪ್ರಾಬ್ಲಮ್ಮು’’ ಎನ್ನುವ ಹಾಡಿನ ಸಾಲನ್ನು ನೆನಪಿಸುತ್ತಿದೆ ದ್ವಿಚಕ್ರ ವಾಹನ ಸವಾರರ ಪರಿಸ್ಥಿತಿ.
ಜೆಸಿಆರ್ ಬಡಾವಣೆಗೆ ಹೋಗುವ ಮಾರ್ಗದವಿ.ಪಿ.ಬಡಾವಣೆ ಮೊದಲ ತಿರುವಿನಲ್ಲಿ ಒಳಚರಂಡಿ ಚೇಂಬರ್ ಕುಸಿದು ನಾಲ್ಕು ದಿನಗಳಾಗಿದ್ದು, ಅದನ್ನು ಸರಿಪಡಿಸುವ ಕೆಲಸಗಳು ಆಗಿಲ್ಲ. ರಾತ್ರಿ ವೇಳೆ ಈ ಪ್ರದೇಶದಲ್ಲಿ ಬೀದಿ ದೀಪಗಳು ಇಲ್ಲದೇ ಇರುವುದರಿಂದ ಕತ್ತಲಲ್ಲಿ ಬರುವ ದ್ವಿಚಕ್ರ ವಾಹನ ಚಾಲಕರು ಈ ಗುಂಡಿಗೆ ವಾಹನಗಳ ಇಳಿಸಿ ನಿಯಂತ್ರಣ ತಪ್ಪಿ ಬೀಳುತ್ತಿದ್ದಾರೆ. ಹಗಲಲ್ಲೇ ಏಮಾರಿಸುವ ಈ ಗುಂಡಿಗಳು ರಾತ್ರಿ ವೇಳೆ ಇನ್ನಷ್ಟು ಅಪಾಯಕಾರಿಯಾಗಿ ಗೋಚರಿಸುತ್ತವೆ.
ಇದು ಆಗದ ಕೆಲಸ:ರಸ್ತೆಗಳ ಗುಂಡಿ ಮುಚ್ಚುವ ವಿಚಾರದಲ್ಲಿ ನಗರಸಭೆ ಅಧಿಕಾರಿಗಳು ತಮ್ಮ ಅಸಹಾಯಕತೆ ವ್ಯಕ್ತಪಡಿಸು ತ್ತಾರೆ. ಒಳಚರಂಡಿ ಕಾಮಗಾರಿ ಕೈಗೊಂಡ ಗುತ್ತಿಗೆದಾ ರರು ಈ ಕೆಲಸ ಮಾಡಬೇಕು. ಇದು ನಮ್ಮ ಕೈಲಿಆಗದ ಕೆಲಸ. ಗುತ್ತಿಗೆದಾರರಿಗೆ ಹೇಳಿ ಸಾಕಾಗಿದೆ. ಪ್ರಮುಖ ರಸ್ತೆಗಳ ಸಿಮೆಂಟ್ ಕಾಂಕ್ರಿಟ್ ಮಾಡಲು ಟೆಂಡರ್ ಕರೆಯಲಾಗಿದೆ. ಸ್ವಲ್ಪ ದಿನದಲ್ಲಿ ಎಲ್ಲವನ್ನೂ ಅಗೆಯಲಾಗುತ್ತದೆ ಎಂಬ ಸಮಜಾಯಿಷಿ ನೀಡುತ್ತಾರೆ. ಅಲ್ಲಿವರೆಗಾದರೂ ಈಗುಂಡಿ ಗಳ ಮುಚ್ಚಬಾರದೆ ಎಂದರೆ ಅದಕ್ಕೆ ಉತ್ತರಗಳಿಲ್ಲ.