ರಾ​ಮನ ಬಗ್ಗೆ ಅವಹೇಳನ : ಪರಿಸ್ಥಿತಿ ಸಂಪೂರ್ಣ ಉದ್ವಿಗ್ನ

Kannadaprabha News   | Asianet News
Published : Aug 20, 2020, 07:02 AM ISTUpdated : Aug 20, 2020, 09:00 AM IST
ರಾ​ಮನ ಬಗ್ಗೆ ಅವಹೇಳನ : ಪರಿಸ್ಥಿತಿ ಸಂಪೂರ್ಣ ಉದ್ವಿಗ್ನ

ಸಾರಾಂಶ

ಶ್ರೀ ರಾಮನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದನ್ನು ಖಂಡಿಸಿ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಆಗ್ರಹಿಸಿ ಪೋಸ್ಟ್ ಹಾಕಲಾಗಿದೆ.

ರಾಯಚೂರು (ಆ.20): ಶ್ರೀರಾಮ ದೇವರ ಕುರಿತು ಸಾಮಾಜಿಕ ಜಾಲ​ತಾ​ಣ​ದಲ್ಲಿ ಅವ​ಹೇಳನಕಾರಿ ಪೋಸ್ಟ್‌ ಹಾಕಿರುವುದನ್ನು ಖಂಡಿ​ಸಿ, ಆರೋ​ಪಿ​ಯನ್ನು ಬಂಧಿ​ಸು​ವಂತೆ ಆಗ್ರ​ಹಿ​ಸಿ ಶ್ರೀರಾಮ ಸೇನೆಯ ನೂರಾರು ಕಾರ್ಯಕರ್ತರು ದೇವ​ದು​ರ್ಗ ಠಾಣೆ ಎದು​ರು ಪ್ರತಿ​ಭ​ಟನೆ ನಡೆ​ಸಿದ ಘಟನೆ ಬುಧ​ವಾರ ರಾತ್ರಿ ನಡೆ​ದಿ​ದೆ.

ರಾಮ ಮಂದಿರ ಕೆಡವಿ ಮತ್ತೆ ಮಸೀದಿ ನಿರ್ಮಿಸುತ್ತೇವೆ; ಎಚ್ಚರಿಕೆ ನೀಡಿದ ಮುಸ್ಲಿಂ ಮೌಲ್ವಿ!...

ಜಹೀರ್‌ ಎಂಬಾತ ಫೇಸ್‌ಬುಕ್‌ನಲ್ಲಿ ಶ್ರೀರಾಮ ದೇವರ ಕುರಿತು ಅವಹೇಳನಕಾರಿ ಪೋಸ್ಟ್‌ ಹಾಕಿದ್ದು ಅದು ಭಾರೀ ವೈರಲ್‌ ಆಗಿದೆ. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಶ್ರೀರಾಮ ಸೇನೆ ಕಾರ್ಯಕರ್ತರು ತಡರಾತ್ರಿ ಠಾಣೆ ಮುಂದೆ ಜಮಾಯಿಸಿ ಆರೋಪಿಯನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ. 

ಇದ​ರಿಂದ ಠಾಣೆ ಮುಂದೆ ಕೆಲ​ಕಾಲ ಉದ್ವಿಗ್ನ ವಾತಾ​ವ​ರಣ ನಿರ್ಮಾ​ಣ​ವಾ​ಗಿ​ತ್ತು. ಸ್ಥಳಕ್ಕೆ ಹೆಚ್ಚು​ವರಿ ಪೊಲೀ​ಸ​ರನ್ನು ಕರೆ​ಸ​ಲಾ​ಗಿ​ದೆ.

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!