ಕೊಡಗಿನಲ್ಲಿ ಸುರಿದ ಭಾರಿ ಮಳೆಯಿಂದ ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಭೂ ಕುಸಿತವಾಗಿದ್ದು, ಇಲ್ಲಿರುವ ಸೇತುವೆಯೊಂದಕ್ಕೂ ಹಾನಿಯಾಗಿದೆ.
ಮಡಿಕೇರಿ (ಆ.20): ಆ.5ರ ಮಧ್ಯರಾತ್ರಿ ತಲಕಾವೇರಿಯಲ್ಲಿ ಇತ್ತೀಚೆಗೆ ಭೂಕುಸಿತ ಉಂಟಾಗಿದ್ದ ಹಿನ್ನೆಲೆಯಲ್ಲಿ ಚೇರಂಗಾಲ ಗ್ರಾಮದಲ್ಲಿ ಸೇತುವೆಗೆ ಹಾನಿಯಾಗಿದೆ.
ತಲಕಾವೇರಿಯಿಂದ 4 ಕಿ.ಮೀ. ದೂರದಲ್ಲಿರುವ ಚೇರಂಗಾಲದಲ್ಲಿ ಭೂಕುಸಿತದಿಂದ ಅಪಾರ ಪ್ರಮಾಣದಲ್ಲಿ ನೀರು ಹಾಗೂ ಮರಗಳ ದಿಮ್ಮಿಗಳು ಹರಿದು ಬಂದು ಸೇತುವೆ ತುಂಡಾಗಿದೆ.
ಕೆಆರ್‌ಎಸ್ ಜಲಾಶಯ ಸಂಪೂರ್ಣ ಭರ್ತಿ...
ಸದ್ಯಕ್ಕೆ ಮರದ ದಿಮ್ಮಿ ಬಳಸಿ ಕಾಲು ಸೇತುವೆ ನಿರ್ಮಿಸಲಾಗಿದೆ. ಕಾಲ್ನಡಿಗೆಯಲ್ಲೇ ಹೊರ ಊರಿನ ಸಂಪರ್ಕ ಕಂಡುಕೊಳ್ಳುವಂತಾಗಿದೆ.
ವಾಹನಗಳ ಓಡಾಟ ಬಂದ್ ಆಗಿದೆ. ಭತ್ತದ ಗದ್ದೆ, ತೋಟಗಳಲ್ಲಿ ಮಣ್ಣಿನ ರಾಶಿ ತುಂಬಿಕೊಂಡಿದ್ದು ಜನರು ತೀರಾ ಸಂಕಷ್ಟಎದುರಿಸುತ್ತಿದ್ದಾರೆ.