ಚಿಕ್ಕಮಗಳೂರು: ಬಿಸಿಲು ಝಳ, ಚುನಾವಣಾ ಕಾವು ಜನರು ಸುಸ್ತೋ ಸುಸ್ತು!

By Ravi JanekalFirst Published Mar 31, 2024, 9:51 PM IST
Highlights

ಸದಾ ತಂಪೆರೆಯೋ ಗಾಳಿ, ಹಚ್ಚ-ಹಸಿರಿನಿಂದ ಕಂಗೊಳಿಸೋ ಹಸಿರ ತವರು ಕಾಫಿನಾಡಲ್ಲಿ ಮನೆಮಾಡಬೇಕೆಂದು ಅದೆಷ್ಟೋ ಪ್ರವಾಸಿಗರ ಬಯಕೆ. ಆದ್ರೆ, ಚಿಕ್ಕಮಗಳೂರಿನ ಸದ್ಯದ ಹವಾಮಾನ ಕೇಳಿದ್ರೆ, ಮನೆ ಮಾಡೋದಿರ್ಲಿ, ಇತ್ತ ತಲೆ ಹಾಕಿಯೂ ಮಲಗೊಲ್ಲ. ಯಾಕಂದ್ರೆ, ಕೂಲ್ ಸಿಟಿ ಎಂಬ ಖ್ಯಾತಿಗೆ ಒಳಗಾಗಿದ್ದ ಕಾಫಿನಾಡು ವರ್ಷ ಕಳೆದಂತೆ ಕಾದ ಕಾವಲಿಯಂತಾಗ್ತಿದೆ.

ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು 

ಚಿಕ್ಕಮಗಳೂರು (ಮಾ.31) : ಸದಾ ತಂಪೆರೆಯೋ ಗಾಳಿ, ಹಚ್ಚ-ಹಸಿರಿನಿಂದ ಕಂಗೊಳಿಸೋ ಹಸಿರ ತವರು ಕಾಫಿನಾಡಲ್ಲಿ ಮನೆಮಾಡಬೇಕೆಂದು ಅದೆಷ್ಟೋ ಪ್ರವಾಸಿಗರ ಬಯಕೆ. ಆದ್ರೆ, ಚಿಕ್ಕಮಗಳೂರಿನ ಸದ್ಯದ ಹವಾಮಾನ ಕೇಳಿದ್ರೆ, ಮನೆ ಮಾಡೋದಿರ್ಲಿ, ಇತ್ತ ತಲೆ ಹಾಕಿಯೂ ಮಲಗೊಲ್ಲ. ಯಾಕಂದ್ರೆ, ಕೂಲ್ ಸಿಟಿ ಎಂಬ ಖ್ಯಾತಿಗೆ ಒಳಗಾಗಿದ್ದ ಕಾಫಿನಾಡು ವರ್ಷ ಕಳೆದಂತೆ ಕಾದ ಕಾವಲಿಯಂತಾಗ್ತಿದೆ. ನೂರಾರು ವರ್ಷಗಳಿಂದ ತಣ್ಣನೆಯ ಗಾಳಿಯಲ್ಲಿ ನಾವ್ ಸೇಫ್ ಅಂತಿದ್ದ ಮಲೆನಾಡಿಗರಲ್ಲೂ ಬೆವರು ಹರಿಯುತ್ತಿದೆ. ಈ ಬಾರಿಯ ಮಿತಿ-ಮೀರಿದ ಬಿಸಿಲಿನ ಝಳಕ್ಕೆ ಮಲೆನಾಡಿಗರು , ಚುನಾವಣೆಯ ಪ್ರಚಾರಕ್ಕೆ ತೆರಳುವ ಮುಂದಿ ಸುಸ್ತೋ-ಸುಸ್ತು ಎನ್ನುವ ಪರಿಸ್ಥಿತಿ ಉದ್ಬವವಾಗಿದೆ. 

ಬಿಸಿಲು ಝಳಕ್ಕೆ ಜನರು ತತ್ತರ : 

ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಬಿಸಿಲು ಝಳ ಹೆಚ್ಚಳವಾಗುತ್ತಿದೆ. ಒಂದಡೆ ಚುನಾವಣೆಯ ಕಾವುನಿಂದ ಸಭೆ, ಸಮಾರಂಭಗಳಲ್ಲಿ , ಪ್ರಚಾರಕ್ಕೆ ಹೋಗುವ ಜನರು ಸಾಕಪ್ಪ ಸಾಕು ಎನ್ನುವ ಸ್ಥಿತಿ ಇದೆ. ವರ್ಷದಿಂದ ವರ್ಷಕ್ಕೆ ಕಾಫಿನಾಡು ಕಾದ ಕವಾಲಿಯಂತಾಗ್ತಿದ್ದು, ಸೂರ್ಯ ಕಾಫಿನಾಡಿಗೆ ಹತ್ತಿರವಾಗ್ತಿದ್ದಾನೇನೋ ಅನ್ಸ್ತಿದೆ. ಯಾಕಂದ್ರೆ, ಈ ಬಾರಿ ಹಿಂದೆಂದೂ ಕಾಣದಂತ ಬಿಸಿಲಿನ ತಾಪ ಹೆಚ್ಚಾಗಿದೆ. ಕನಿಷ್ಠ 22ರಿಂದ ಗರಿಷ್ಠ 26, 28, 32ವರೆಗಿದ್ದ ಬಿಸಿಲಿನ ತಾಪ ಈ ಬಾರಿ 34, 36ರ ಗಡಿ ಮುಟ್ಟಿದೆ.ಒಂದಡೆ ಚುನಾವಣೆಯ ಕಾವು ಆದ್ರೆ ಮತ್ತೋಂದಡೆ ಬಿಸಿಲಿನ ಝಳ ರಾಜಕಾರಣಿಗಳಿಗೆ ಸಾಕಪ್ಪ ಸಾಕು ಎನ್ನುವಷ್ಟರ ಮಟ್ಟಿಗೆ  ಆಗಿದೆ. 

ಮಲೆನಾಡಿನ ಭಾಗದಲ್ಲೂ ಮಿತಿ ಮೀರಿದ ಕಾವು : 

ಜಿಲ್ಲೆಯ ಮಲೆನಾಡು ಭಾಗವಾಗಿರೋ ಕೊಪ್ಪ, ಶೃಂಗೇರಿ, ಎನ್.ಆರ್.ಪುರ, ಮೂಡಿಗೆರೆಯ ಪರಿಸ್ಥಿತಿಯೂ ಚಿಕ್ಕಮಗಳೂರಿಗಿಂತ ಭಿನ್ನವಾಗಿಲ್ಲ. ಇನ್ನು ಜಿಲ್ಲೆಯ ಬಯಲುಸೀಮೆ ಪ್ರದೇಶಗಳಾಗಿರೋ ಕಡೂರು, ತರೀಕೆರೆಯ ಪರಿಸ್ಥಿತಿಯಂತು ಮತ್ತಷ್ಟು ಶೋಚನಿಯ. ನಾಳೆ ಮಳೆ ಬರ್ಬೋದು ಅಂತ ಜನ ಆಕಾಶ ನೋಡ್ತಿದ್ರೆ ಮರುದಿನ ಮತ್ತದೇ ರಣಬಿಸಲು. ಮಿತಿ-ಮೀರಿದ ಬಿಸಿಲಿನ ಝಳಕ್ಕೆ ಮಲೆನಾಡಿಗರು, ರಾಜಕಾರಣಿಗಳು  ಸುಸ್ತೋ-ಸುಸ್ತು ಆಗಿದ್ದಾರೆ. 

 

ಸೂಕ್ತ ದಾಖಲೆ ಇಲ್ಲದೇ ಸಾಗಿಸುತ್ತಿದ್ದ ₹4.21ಕೋಟಿ ಮೌಲ್ಯದ ಚಿನ್ನಾಭರಣ ವಶಕ್ಕೆ

ಒಂದಡೆ ಲೋಕಸಭಾ ಚುನಾವಣೆಯ ಕಾವು ಅದ್ರೆ ಮತ್ತೊಂದಡೆ ಬಿಸಿಲಿನ ಝಳ ಚುನಾವಣೆಯ ಪ್ರಚಾರಕ್ಕೆ ತೆರಳು ಮಂದಿಗೆ ಸಾಕಪ್ಪ ಸಾಕು ಎನ್ನುವಷ್ಟಮಟ್ಟಿಗೆ ಹೆಚ್ಚಳವಾಗಿದೆ. ಸಭೆ, ಸಮಾರಂಭಗಳಲ್ಲಿ, ಮನೆ ಮನೆಗೆ ತೆರಳಿ ಪ್ರಚಾರ ಮಾಡುವ ಮಂದಿಗೆ ಬಿಸಿಲಿನ ಧಗೆ ತೀವ್ರ ತಲೆನೋವು ಆಗಿದೆ ಪರಿಣಾಮಿಸಿದೆ. ಒಟ್ಟಾರೆ ಮಲೆನಾಡಿನ ಭಾಗವಾದ ಚಿಕ್ಕಮಗಳೂರು ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಚುನಾವಣೆಯ ಕಾವು ಜಾಸ್ತಿ ಆಗುತ್ತಿದೆ. ಇನ್ನೊಂದಡೆ ಬಿಸಿಲಿನ ಧಗೆಯೂ ಹೆಚ್ಚಾಗುತ್ತಿದೆ. ಜನರು ಮಾತ್ರ ಚುನಾವಣೆಯಲ್ಲಿ ಮತ ಕೇಳುವ ರಾಜಕಾರಣಿಗಳ ಬವಣೆ, ಬಿಸಿಲಿನ ಧಗೆ ಹತ್ತಿರದಿಂದ ನೋಡಿ ಸುಸ್ತು ಆಗುತ್ತಿದ್ದಾರೆ.

click me!