ಬೆಂಗಳೂರು: ಎದುರುಮನೆ ಹುಡುಗಿ ನೋಡೋಕೆ ಸುರಸುಂದರಾಂಗಿ, ಮನೆ ಮುಂದಿನ ರಂಗೋಲಿ ಕಂಡ್ರೆ ಉರಿದುಬೀಳ್ತಾಳೆ!

By Sathish Kumar KH  |  First Published Mar 31, 2024, 3:09 PM IST

ಬೆಂಗಳೂರಿನ ಅಪಾರ್ಟ್‌ಮೆಂಟ್‌ನ ಎದುರು ಮನೆಯಲ್ಲಿರುವ ಯುವತಿ ನೋಡೋಕೆ ಮಾತ್ರ ಸುರಸುಂದರಾಂಗಿ. ಆದರೆ, ಮನೆ ಎದುರಿನ ರಂಗೋಲಿ ಕಂಡರೆ ಉರಿದುಬಿದ್ದು, ಅಳಿಸಿ ಹಾಕ್ತಾಳೆ..


ಬೆಂಗಳೂರು (ಮಾ.31): ಬೆಂಗಳೂರಿನ ಅಪಾರ್ಟ್‌ಮೆಂಟ್‌ನಲ್ಲಿ ಪರಸ್ಪರ ಎದುರುಡೆ ಮನೆಯವರ ನಡುವೆ ನಡೆಯುತ್ತಿರುವ ಕಲಹವಿದು. ಎದುರು ಮನೆಯ ಯುವತಿಗೆ ತಮ್ಮ ಪಕ್ಕದ ಮನೆಯವರು ರಂಗೋಲಿ ಹಾಕಿದರೆ, ಅದನ್ನು ಕಾಲಿನಿಂದ ಅಳಿಸಿ ಹಾಕುತ್ತಾಳೆ. ಬಾಗಿಲ ಬಳಿ ತುಳಸಿ ಗಿಡ ಇಟ್ಟರೆ, ಚಪ್ಪಲಿ ಸ್ಟಾಂಡ್ ಇಟ್ಟರೆ ಅದನ್ನು ಬೀಳಿಸಿ ಚೆಲ್ಲಾಪಿಲ್ಲಿ ಮಾಡುತ್ತಾಳೆ. ಇದರಿಂದ ನಾವು ಹೆಂಗೆ ಬದುಕೋದು ಅಂತ ಪಕ್ಕದ ಮನೆಯವರು ಗೋಳಾಡುತ್ತಿದ್ದಾರೆ. 

ಇಲ್ಲಿ ನೋಡಿ.. ಮನೆ ಮುಂದೆ ಹಾಕಿರುವ ರಂಗೋಲಿ ಅಳಿಸಿ ಹಾಕ್ತಿರೋ ಯುವತಿ ಕಾಣ್ತಿದ್ದಾಳೆ ಅಲ್ವಾ ಆಕೆ ನೋಡೋಕೆ ಮಾತ್ರ ಸಾಫ್ಟ್‌. ಆದ್ರೆ, ಇವರಿಗೆ ರಂಗೋಲಿ ಕಂಡ್ರೆ ಅದೇನಾಗುತ್ತೋ ಗೊತ್ತಿಲ್ಲ, ಮೈಯೆಲ್ಲೆಲ್ಲಾ ಇರುವೆ ಬಿಟ್ಕೊಂಡಂಗೆ ಆಡ್ತಾರೆ ಎಂದು ಎದುರು ಮನೆಯವರು ಆರೋಪ ಮಾಡ್ತಿದ್ದಾರೆ. ಮೂಲ ಕರ್ನಾಟಕದ ನಿವಾಸಿಗಳು ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ ಖರೀದಿ ಮಾಡಿ ಅಲ್ಲಿ ವಾಸವಾಗಿದ್ದಾರೆ. ಇವರ ಪಕ್ಕದ ಮನೆಯನ್ನು ಉತ್ತರ ಭಾರತದ ಮಹಿಳೆ ಖರೀದಿ ಮಾಡಿದ್ದಾಳೆ. ಕನ್ನಡಿಗರ ಕುಟುಂಬವು ಹಿಂದೂ ಸಂಪ್ರದಾಯದಂತೆ ಮನೆಯ ಮುಂದೆ ರಂಗೋಲಿ ಹಾಕಿ, ಗಂಧದ ಕಡ್ಡಿ (ಅಗರಬತ್ತಿ) ಬೆಳಗಿದರೆ ಸಾಕು ಎದುರು ಮನೆಯ ಯುವತಿಗೆ ಎಲ್ಲಿಲ್ಲದ ಸಿಟ್ಟು ಬರುತ್ತದೆ. ಇವರು ಬಾಗಿಲು ಮುಚ್ಚುತ್ತಿದ್ದಂತೆ ಹೊರಗೆ ಬರುವ ಯುವತಿ ರಂಗೋಲಿಯನ್ನು ಕೆಡಿಸಿ, ಮನೆಯ ಮುಂದಿನ ಶೂ ರ್‍ಯಾಕ್ ಅನ್ನು ಬೀಳಿಸಿ ಚೆಲ್ಲಾಪಿಲ್ಲಿ ಮಾಡಿ ಹೋಗಿಬಿಡುತ್ತಾಳೆ. ಇನ್ನು ಕನ್ನಡ ಕುಟುಂಬದವರು ಪ್ರಶ್ನೆ ಮಾಡಿದರೆ, ಕೆಟ್ಟ ಪದಗಳಿಂದ ನಿಂದನೆ ಮಾಡುತ್ತಾಳಂತೆ..

Tap to resize

Latest Videos

undefined

ಶಿವಮೊಗ್ಗದ ಸಾಫ್ಟ್‌ವೇರ್ ಇಂಜಿನಿಯರ್ ಸೊಸೆಗೆ ಮಕ್ಕಳಾಗಿಲ್ಲವೆಂದು ಕಿರುಕುಳ; ಕಾಟ ತಾಳಲಾರದೇ ನೇಣಿಗೆ ಶರಣಾದ್ಲು!

ಈ ಘಟನೆ ನಡೆದಿರುವುದು ಬೊಮ್ಮನಹಳ್ಳಿಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ. ಇನ್ನು ಎದುರುಮನೆ ಯುವತಿಯ ಕಿರುಕುಳ ತಾಳಲಾರದೇ ಈಕೆಯನ್ನು ರೆಡ್‌ ಹ್ಯಾಂಡ್‌ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಬೇಕು ಎಂದು ಸಿಸಿಟಿವಿ ಕ್ಯಾಮರಾ ಹಾಕಿಸುತ್ತಾರೆ. ನಂತರ, ಎದುರುಮನೆ ಯುವತಿಯೇ ರಂಗೋಲಿ ಕೆಡಿಸುತ್ತಿರುವ ಕುರಿತ ಸಿಸಿಟಿವಿ ಫೂಟೇಜ್‌ ಸಮೇತವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಡುತ್ತಾರೆ. ಇಷ್ಟಾದರೂ ಆಕೆ ಮಾತ್ರ ಯಾವುದಕ್ಕೂ ಹೆದರುವುದಿಲ್ಲ. ಇನ್ನು ಪೊಲೀಸರು ಮನೆಯ ಮುಂದಿನ ರಂಗೋಲಿ ಹಾಕುವ ವಿಚಾರದ ಗಲಾಟೆ (ಮನೆ ಮನೆ ರಾಮಾಯಣ) ಬಗೆಹರಿಸಲು ಹೋಗಬೇಕಾ..? ಒಂದೆರಡು ದಿನ ಕಿತ್ತಾಡ್ಕೊಂಡು ಸುಮ್ಮನಾಗುತ್ತಾರೆ ಎಂದು ನಿರ್ಲಕ್ಷ್ಯ ಮಾಡಿದ್ದಾರೆ.

ಆದರೆ, ಎರಡೂ ಮನೆಯವರ ಜಗಳ ಇನ್ನೂ ಅತಿರೇಕಕ್ಕೆ ಹೋಗಿದೆ. ಆಗ ಪೊಲೀಸರು ಬಂದು ಯುವತಿಗೆ ಪ್ರಶ್ನೆ ಮಾಡಿದ್ದಕ್ಕೆ ಎದುರು ಮನೆಯವರ ವಿರುದ್ಧ ಜಗಳ ಆರಂಭಿಸಿ ಕೆಟ್ಟ ಪದಗಳಿಂದ ನಿಂದಿಸಿದ್ದಾರಂತೆ. ಪ್ರತಿದಿನ ಈಕೆಯೊಂದಿಗೆ ಜಗಳ ಮಾಡಲಾಗುತ್ತಿಲ್ಲ ಮಾನಸಿಕವಾಗಿ ಹಿಂಸೆಯಾಗುತ್ತಿದೆ ಎಂದು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್‌ ಮಾಡಿದ್ದಾರೆ.

ರಾಜಕೀಯ ನಾಯಕನ ಹೆಂಡತಿಗೆ ಇಬ್ಬಿಬ್ಬರು ಬಾಯ್ ಫ್ರೆಂಡ್ಸ್‌; ಅನೈತಿಕ ಸಂಬಂಧಕ್ಕಾಗಿ ಗಂಡನನ್ನೇ ಕೊಂದುಬಿಟ್ಟಳು!

ಇದರಿಂದ ಎಚ್ಚೆತ್ತುಕೊಂಡ ಪೊಲೀಸರು ಅಪಾರ್ಟ್‌ಮೆಂಟ್‌ಗೆ ಹೋಗಿ ವಿಚಾರಣೆ ಮಾಡಿದರೆ, ಎದುರುಮನೆ ಯುವತಿ ಕೂಡ ಕೌಂಟರ್ ಎಫ್‌ಐಆರ್ ದಾಖಲಿಸಿ ತನ್ನ ಮೇಲೆ ದೂರು ಕೊಟ್ಟವರನ್ನೇ ಜೈಲಿಗಟ್ಟಲು ಮುಂದಾಗಿದ್ದಾಳೆ. ಇದರಿಂದ ಕನ್ನಡದ ಕುಟುಂಬದವರಿಗೆ ಪೊಲೀಸ್ ನೋಟಿಸ್ ತಲುಪಿದಾಕ್ಷಣ ಬೇಲ್‌ ಪಡೆದುಕೊಂಡಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಯುವತಿ ಅಪಾರ್ಟ್‌ಮೆಂಟ್‌ನಲ್ಲಿ ಸಾರ್ವಜನಿಕ ಆಸ್ತಿಗೆ ಹಾನಿ ಮಾಡುತ್ತಿದ್ದಾರೆ ಎಂದು ಕನ್ನಡದ ಕುಟುಂಬದವರ ಮೇಲೆ ಮತ್ತೊಂದು ದೂರು ದಾಖಲಿಸಿದ್ದಾರೆ. ಇದರಿಂದ ಬೇಸತ್ತ ಅಂಕಲ್, ಆಂಟಿ ಮಾತ್ರ ಇದನ್ನು ಕೋರ್ಟ್‌ನಲ್ಲಿ ನೋಡಿಕೊಳ್ಳೋಣ ಎಂದು ಸವಾಲು ಹಾಕಿ ಸುಮ್ಮನಾಗಿದ್ದಾರೆ.

click me!