'ಯಡಿಯೂರಪ್ಪ ಸರ್ಕಾರ ದಿವಾಳಿ ಹಂತದಲ್ಲಿದೆ'

By Kannadaprabha News  |  First Published Apr 25, 2021, 2:25 PM IST

ಕೋವಿಡ್‌ ಹತೋಟಿಯಲ್ಲಿ ಸರ್ಕಾರ ವಿಫಲ| ವಿಜಯಪುರ ಜಿಲ್ಲೆಯಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳು ಇದ್ದರೂ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ| ಜನರು ಸರ್ಕಾರ ವರ್ತನೆಗೆ ಬೇಸತ್ತು ಹೋಗಿದ್ದಾರೆ: ಶ್ರೀಶೈಲ ಮುಳಜಿ| 


ದೇವರಹಿಪ್ಪರಗಿ(ಏ.25): ಕೊರೋನಾ ಹತೋಟಿ ತರುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಈ ಸರ್ಕಾರ ದಿವಾಳಿ ಹಂತದಲ್ಲಿದೆ ಎಂದು ಕರವೇ ರಾಜ್ಯ ಸಂಚಾಲಕ, ನ್ಯಾಯವಾದಿ ಶ್ರೀಶೈಲ ಮುಳಜಿ ಗಂಭೀರ ಆರೋಪ ಮಾಡಿದ್ದಾರೆ.

ಶನಿವಾರ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲೆಯಲ್ಲಿ ಸುಸಜ್ಜಿತ ಸರ್ಕಾರಿ ಆಸ್ಪತ್ರೆಗಳು ಇದ್ದರೂ ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲ. ಜಿಲ್ಲೆಯಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ. ಎರಡು ದಿನದಲ್ಲಿ ಜಿಲ್ಲಾಸ್ಪತ್ರೆಯಲ್ಲಿ ಬೆಡ್‌ಗಳು ಸಿಗದೆ ಆಸ್ಪತ್ರೆ ಹೊರಗಡೆ ಸಾವನ್ನಪ್ಪಿದ್ದಾರೆ. ಇಂಡಿಯಲ್ಲಿ ಸರ್ಕಾರಿ ಆಸ್ಪತ್ರೆ ಕಾರ್ಯನಿರ್ವಹಿಸದೆ ತಮ್ಮ ತಮ್ಮ ಆಸ್ಪತ್ರೆಯನ್ನು ತೆಗೆದು ಬಡವರಿಂದ ಹಣ ಲೂಟಿ ಮಾಡುತ್ತಿದ್ದಾರೆ. ದೇವರ ಹಿಪ್ಪರಗಿಯಲ್ಲಿ ತಾಲೂಕು ಆಡಳಿತ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಜನರು ಸರ್ಕಾರ ವರ್ತನೆಗೆ ಬೇಸತ್ತು ಹೋಗಿದ್ದಾರೆ. ಇದೇ ರೀತಿ ಸರ್ಕಾರ ಬೇಜವ್ದಾರಿ ಮಾಡಿದರೆ ಜನರ ಶಾಪ ತಟ್ಟುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Latest Videos

undefined

MB ಪಾಟೀಲ್‌ ನೇತೃತ್ವದ ಆಸ್ಪತ್ರೆಯಲ್ಲಿ ಕೋವಿಡ್‌ ಚಿಕಿತ್ಸಾ ಶುಲ್ಕ ಶೇ.70 ಇಳಿಕೆ

ಇಂತಹ ಸರ್ಕಾರದ ನಿಷ್ಕಾಳಜಿ ಸಮಯದಲ್ಲಿ ವಿಜಯಪುರದ ಬಿ.ಎಲ್‌.ಡಿ.ಇ ಆಸ್ಪತ್ರೆಯ ಅಧ್ಯಕ್ಷ, ಬಬಲೇಶ್ವರ ಶಾಸಕ ಎಂ.ಬಿ. ಪಾಟೀಲರು ತಮ್ಮ ಆಸ್ಪತ್ರೆಯಲ್ಲಿ 500 ಬೆಡ್‌ಗಳು ಹೆಚ್ಚು ಮಾಡುವುದರ ಮುಖಾಂತರ ಮತ್ತು ಶುಲ್ಕವನ್ನು ಶೇ. 70ರಷ್ಟು ಕಡಿಮೆ ಮಾಡುವುದರ ಮುಖಾಂತರ ಮಾನವೀಯತೆ ಮೆರೆದಿದ್ದಾರೆ. ಜಿಲ್ಲೆಯಲ್ಲಿ ನಿಮ್ಮಂತಹ ನಾಯಕರು ಯುವಕರಿಗೆ ಪ್ರೇರಣೆ ಆಗಿದ್ದೀರಿ ಹಾಗೂ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

click me!