ಮಂಗಳೂರು ಏರ್‌ಪೋರ್ಟ್‌ಗೆ ಮತ್ತೆ ಆದಿತ್ಯ, ಕೃತ್ಯವೆಸಗಿದ ಸ್ಥಳ ಮಹಜರು

By Suvarna NewsFirst Published Jan 24, 2020, 1:53 PM IST
Highlights

ಮಂಗಳೂರು ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಲು ಮಂಗಳೂರು ಬಾಂಬರ್ ಆದಿತ್ಯ ರಾವ್‌ನನ್ನು ಕರೆದೊಯ್ದಿದ್ದಾರೆ. ಆದಿತ್ಯರಾವ್‌ ಕೃತ್ಯ ನಡೆಸುವ ಸಂದರ್ಭ ಓಡಾಡಿದ ಸ್ಥಳ, ಏರ್‌ಪೋರ್ಟ್, ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೂ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.

ಮಂಗಳೂರು(ಜ.24): ಮಂಗಳೂರು ಬಾಂಬ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳ ಮಹಜರು ನಡೆಸಲು ಮಂಗಳೂರು ಬಾಂಬರ್ ಆದಿತ್ಯ ರಾವ್‌ನನ್ನು ಕರೆದೊಯ್ದಿದ್ದಾರೆ. ಆದಿತ್ಯರಾವ್‌ ಕೃತ್ಯ ನಡೆಸುವ ಸಂದರ್ಭ ಓಡಾಡಿದ ಸ್ಥಳ. ಏರ್‌ಪೋರ್ಟ್, ಉಳಿದುಕೊಂಡಿದ್ದ ಹೋಟೆಲ್‌ನಲ್ಲಿಯೂ ಪೊಲೀಸರು ಸ್ಥಳ ಮಹಜರು ನಡೆಸಲಿದ್ದಾರೆ.

"

ಇಂದು ಮಂಗಳೂರು ಏರ್ಪೋರ್ಟ್ ಗೆ ಮತ್ತೆ ಬಾಂಬರ್ ಬಂದಿದ್ದು, ಬಾಂಬ್ ಇಟ್ಟ ಜಾಗಕ್ಕೆ ಆದಿತ್ಯ ಬಾಂಬರ್ ರಾವ್‌ನನ್ನು ಪೊಲೀಸರು ಕರೆದೊಯ್ದಿದ್ದಾರೆ. ಇಂದಿನಿಂದ ಆದಿತ್ಯ ರಾವ್‌ನನ್ನು ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಎರಡು ದಿನ ಸ್ಫೋಟಕದ ಪಕ್ಕದಲ್ಲೇ ಮಲಗಿದ್ದ ಆದಿತ್ಯ!

ಉಳಿದುಕೊಂಡಿದ್ದ ಹೋಟೆಲ್, ಕೆಲಸ ಮಾಡಿದ್ದ ಜಾಗಗಳು, ಬಾಂಬ್ ತಯಾರಿಕೆಗೆ ಬೇಕಾದ ಕಚ್ಚಾ ವಸ್ತು ಖರೀದಿಸಿದ ಜಾಗ ಹೀಗೆ ಎಲ್ಲಾ ಕಡೆಗಳಲ್ಲು ಬಾಂಬರ್ ಕರೆದೊಯ್ದಿದಿದ್ದಾರೆ. ನಿನ್ನೆಯಿಂದ ಪಣಂಬೂರು ಎಸಿಪಿ ಕಚೇರಿಯಲ್ಲಿರುವ ಆದಿತ್ಯ ರಾವ್‌ನನ್ನು ಬಂಧನದಲ್ಲಿರಿಸಲಾಗಿತ್ತು.

ಎಸಿಪಿ ಬೆಳ್ಳಿಯಪ್ಪ ತಂಡದಿಂದ ಬಾಂಬರ್ ವಿಚಾರಣೆ ನಡೆದಿದ್ದು, ವಿಚಾರಣೆ ವೇಳೆ ಸಾಕಷ್ಟು ಆತಂಕಕಾರಿ ವಿಚಾರಗಳನ್ನು ಆದಿತ್ಯ ರಾವ್ ಬಾಯ್ಬಿಟ್ಟಿದ್ದಾನೆ. ನಿನ್ನೆ ಕೋರ್ಟ್‌ಗೆ ಹಾಜರು ಪಡಿಸಿ 10 ದಿನ ಕಸ್ಟಡಿಗೆ ತೆಗೆದುಕೊಂಡಿದ್ದರು.

ಬಾಂಬ್ ತಯಾರಿ ಬಗ್ಗೆ ರಿಸರ್ಚ್ ಮಾಡಿದ್ದ ಆದಿತ್ಯ, ಟೆಕ್ನಿಕಲಿ ಎಕ್ಸ್‌ಪರ್ಟ್

ಏರ್ಪೋರ್ಟ್ ನ ಹೊರಭಾಗದಲ್ಲಿನ ವಿಶ್ರಾಂತಿ ಚೇರ್‌ನಲ್ಲಿ ಬಾಂಬ್ ಬ್ಯಾಗ್ ಇಟ್ಟಿದ್ದ ಆರೋಪಿ ಆದಿತ್ಯ ತಾನು ನಡೆಸಿದ ಕೃತ್ಯದ ಬಗ್ಗೆ ವಿವರಣೆ ನೀಡಿದ್ದಾನೆ. ಎರಡನೇ ಚೇರ್ ನಲ್ಲಿ ಬಾಂಬ್ ಇಟ್ಟಿರೋದಾಗಿ ತೋರಿಸಿದ ಆದಿತ್ಯ ತನಿಖಾಧಿಕಾರಿ ಕೆ.ಯು.ಬೆಳ್ಳಿಯಪ್ಪರಿಗೆ ಘಟನೆಯನ್ನು ವಿವರಿಸಿದ್ದಾನೆ. ಅಂದು ಯಾವ ರೀತಿ ಹೋದ, ಬಂದು ಹೇಗೆ ಬಾಂಬ್ ಇಟ್ಟ, ಬಾಂಬ್ ಇಟ್ಟ ಜಾಗ ಯಾವುದು, ಎಷ್ಟೊತ್ತಲ್ಲಿ ಬಾಂಬ್ ಇಟ್ಟು ತೆರಳಿದ ಈ ಎಲ್ಲ ವಿಚಾರಗಳನ್ನು ಆದಿತ್ಯ ತಿಳಿಸಿದ್ದಾನೆ.

ಸಲೂನ್‌ನಲ್ಲಿಯೂ ಮಹಜರು ನಡೆಸಲಾಗಿದೆ. ಸಲೂನ್ ಬಳಿ ಕರೆದುಕೊಂಡ ಬಂದಾಗ ತುಳುವಿನಲ್ಲಿಯೇ ಆದಿತ್ಯ ತನಿಕಾಧಿಕಾರಿ ಮುಂದೆ ಘಟನೆ ವಿವರಿಸಿದ್ದಾನೆ. ನಂತರ ಮತ್ತೆ ಆದಿತ್ಯನನ್ನು ಎಸಿಪಿ ಕಚೇರಿಗೆ ಕರೆ ತರಲಾಗಿದೆ.

ಬಾಂಬ್ ಇಟ್ಟಿದ್ದಕ್ಕೆ ಕಾರಣ ಕೊಟ್ಟ ಆದಿತ್ಯ ರಾವ್, ಉತ್ತರಕ್ಕೆ ಪೊಲೀಸರೇ ಶಾಕ್‌

click me!