ಮಂಗಳೂರಿನಲ್ಲಿ ಬಾಂಬ್‌ ಇಟ್ಟವರಿಗೆ ಶಿಕ್ಷೆ ಆಗಲೇಬೇಕು: ವಿಶ್ವ ಪ್ರಸನ್ನ ತೀರ್ಥರು

Suvarna News   | Asianet News
Published : Jan 24, 2020, 01:37 PM ISTUpdated : Jan 24, 2020, 01:39 PM IST
ಮಂಗಳೂರಿನಲ್ಲಿ ಬಾಂಬ್‌ ಇಟ್ಟವರಿಗೆ ಶಿಕ್ಷೆ ಆಗಲೇಬೇಕು: ವಿಶ್ವ ಪ್ರಸನ್ನ ತೀರ್ಥರು

ಸಾರಾಂಶ

ರಾಮಮಂದಿರ ನಿರ್ಮಾಣ ಆಗಬೇಕು ಎಂಬುವುದು ಶತ ಶತಮಾನದ ಕನಸು| ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಾಣ ‌ಮಾಡುವುದಕ್ಕೆ ಮುಕ್ತ ಅವಕಾಶ ‌ಮಾಡಿಕೊಟ್ಟಿದೆ| ಬಹುಬೇಗನೇ ರಾಮಮಂದಿರ ಆಗಬೇಕು ಎಂದ ವಿಶ್ವಪ್ರಸನ್ನ ತೀರ್ಥರು|

ರಾಯಚೂರು(ಜ.24): ಒಳಿತು ಮಾಡುವ ಜವಾಬ್ದಾರಿ ಎಲ್ಲರಿಗೂ ಇದೆ. ಸಮಾಜ ಅಂದ್ರೆ ನಾವು, ಪ್ರತಿಯೊಬ್ಬ ವ್ಯಕ್ತಿ ಸಮಾಜಕ್ಕೆ ಒಳಿತು ಮಾಡಬೇಕು. ಸಮಾಜಕ್ಕೆ ಕೆಡಕು ಮಾಡುವುದರಿಂದ ಯಾರಿಗೂ ಒಳಿತು ಆಗದು. ಯಾರು ಕೂಡ ಇಂತಹ ದುಷ್ಕೃತ್ಯಕ್ಕೆ ಕೈ ಹಾಕಬಾರದು ಎಂದು ಉಡುಪಿ ಮಠಾಧಿಪತಿ ವಿಶ್ವ ಪ್ರಸನ್ನ ತೀರ್ಥರು ಹೇಳಿದ್ದಾರೆ. 

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣದ ಸಂಬಂಧ ಶುಕ್ರವಾರ ನಗರದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಶ್ರೀಗಳು, ತಪ್ಪು ಮಾಡಿದವರಿಗೆ ತಕ್ಕ ಶಿಕ್ಷೆಯಾಗಲೇಬೇಕು. ಅಂದಾಗ ಯಾರು ಇಂತಹ ಕೃತ್ಯಕ್ಕೆ ಮುಂದಾಗಲ್ಲ ಎಂದು ತಿಳಿಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ರಾಮಮಂದಿರ ನಿರ್ಮಾಣ ವಿಚಾರದ ಬಗ್ಗೆ ಮಾತನಾಡಿದ ಅವರು, ರಾಮಮಂದಿರ ನಿರ್ಮಾಣ ಆಗಬೇಕು ಎಂಬುವುದು ಶತ ಶತಮಾನದ ಕನಸಾಗಿದೆ. ಸುಪ್ರೀಂ ಕೋರ್ಟ್ ರಾಮಮಂದಿರ ನಿರ್ಮಾಣ ‌ಮಾಡುವುದಕ್ಕೆ ಮುಕ್ತ ಅವಕಾಶ ‌ಮಾಡಿಕೊಟ್ಟಿದೆ. ಹಾಗಾಗಿ ಬಹುಬೇಗನೇ ರಾಮಮಂದಿರ ಆಗಬೇಕು ಎಂದ ವಿಶ್ವಪ್ರಸನ್ನ ತೀರ್ಥರು ಅಭಿಪ್ರಾಯಪಟ್ಟಿದ್ದಾರೆ. 
 

PREV
click me!

Recommended Stories

ಫೇಸ್‌ಬುಕ್‌ ಗೆಳತಿಗಾಗಿ ಮಡಿಕೇರಿಗೆ ಬಂದು ನರಕ ನೋಡಿದ ಮಂಡ್ಯದ ಹೈದ! ಬೆತ್ತಲೆಯಾಗಿ ಓಡೋಡಿ ಬಂದ!
ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ