ಬೆಂ. ಗ್ರಾಮಾಂತರ: ಪೊಲೀಸರ ದಾಳಿ, ಭಾರೀ ಪ್ರಮಾಣದ ರಕ್ತ ಚಂದನ ವಶ

By Kannadaprabha NewsFirst Published Aug 23, 2019, 3:06 PM IST
Highlights

ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕಿನಲ್ಲಿ ಪೊಲೀಸರು ದಿಢೀರ್ ದಾಳಿ ನಡೆಸಿ 580 ಕೆಜಿಯಷ್ಟು ರಕ್ಷ ಚಂದನವನ್ನು ವಶಪಡಿಸಿಕೊಂಡಿದ್ದಾರೆ. ಬುಧವಾರವಷ್ಟೇ ಇಬ್ಬರು ಗಾಂಜಾ ಕಳ್ಳರನ್ನು ಬಂಧಿಸಿದ್ದ ಸೂಲಿಬೆಲೆ ಪೊಲೀಸರು ಅಂದು ಸಂಜೆಯೇ ಸುಮಾರು 23 ಲಕ್ಷದಷ್ಟುಬೆಲೆ ಬಾಳುವ ರಕ್ತ ಚಂದನವನ್ನು ವಶಪಡಿಕೊಂಡು ಗಮನಸೆಳೆದಿದ್ದಾರೆ.

ಬೆಂ. ಗ್ರಾಮಾಂತರ(ಆ.23): ಹೊಸಕೋಟೆ ತಾಲೂಕಿನ ಸೂಲಿಬೆಲೆ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ಕಟ್ಟಿಗೇನಹಳ್ಳಿಯ ಮನೆಯೊಂದರ ಮೇಲೆ ದಾಳಿ ಮಾಡಿ, 580 ಕೆಜಿ ರಕ್ತ ಚಂದನವನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಇಬ್ಬರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಸರ್ಜಾಪುರ ಸಾಧಿಕ್‌, ಕಟ್ಟಿಗೇನಹಳ್ಳಿ ನಿಜಾಂ ಬಂಧಿತರು. ಅಸ್ಲಾಂ ಹಾಗೂ ಹಮೀದ್‌ ತಲೆ ಮರೆಸಿಕೊಂಡಿದ್ದಾರೆ.

ಬುಧವಾರವಷ್ಟೇ ಇಬ್ಬರು ಗಾಂಜಾ ಕಳ್ಳರನ್ನು ಬಂಧಿಸಿದ್ದ ಸೂಲಿಬೆಲೆ ಪೊಲೀಸರು ಅಂದು ಸಂಜೆಯೇ ಸುಮಾರು 23 ಲಕ್ಷದಷ್ಟುಬೆಲೆ ಬಾಳುವ ರಕ್ತ ಚಂದನವನ್ನು ವಶಪಡಿಕೊಂಡು ಗಮನಸೆಳೆದಿದ್ದಾರೆ.

'ಕೈ' ಬಿಟ್ಟು ಕಮಲ ಹಿಡಿದ ನಾಯಕಗೆ ತಪ್ಪಿತು ಸಚಿವ ಸ್ಥಾನ, ಹೊರಬಿತ್ತು ಅಸಮಾಧಾನ..!

ಗಾಂಜಾ ಕಳ್ಳರನ್ನು ಬಂಧಿಸಿದ ಬೆನ್ನಲ್ಲೇ ಸಿಕ್ಕಿದ ಖಚಿತ ಮಾಹಿತಿಯನ್ನು ಆಧಾರಿಸಿ ಸೂಲಿಬೆಲೆ ಪೊಲೀಸ್‌ ಠಾಣೆ ಆರಕ್ಷಕ ಉಪನಿರೀಕ್ಷಕರ ಬಿ.ಎಂ. ಗೋವಿಂದ್‌ ಇಲಾಖೆಯ ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹೊಸಕೋಟೆ ತಾಲೂಕಿನ ಕಟ್ಟಿಗೇನಹಳ್ಳಿಯ ಮನೆಯೊಂದರ ಮೇಲೆ ದಾಳಿ ಮಾಡಿದರು. ಈ ವೇಳೆ ಅಕ್ರಮವಾಗಿ ಬಚ್ಚಿಟ್ಟಿದ್ದ 580 ಕೆಜಿ ರಕ್ತ ಚಂದನ ತುಂಡುಗಳು ಪತ್ತೆಯಾಗಿವೆ. ಸೂಲಿಬೆಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

click me!