ನಾನೂ ರಾಜೀನಾಮೆಗೆ ಮನಸ್ಸು ಮಾಡಿದ್ದೆ : ಒಪ್ಪಿಕೊಂಡ ಜೆಡಿಎಸ್ ಶಾಸಕ

By Web DeskFirst Published Aug 23, 2019, 2:47 PM IST
Highlights

ನಾನೂ ಕೂಡ ದೋಸ್ತಿ ಸರ್ಕಾರ ಬೀಳುತ್ತಿದ್ದಂತೆ ರಾಜೀನಾಮೆ ನೀಡಲು ನಿರ್ಧರಿಸಿದ್ದೆ ಎಂದು. ಆದರೆ ಅಂದಿನ ಆ ನಿರ್ಧಾರ ತಪ್ಪಾಗಿತ್ತೆಂದು ಈಗ ಎನಿಸುತ್ತಿದೆ ಎಂದು ಜೆಡಿಎಸ್ ಶಾಸಕರೋರ್ವರು ಹೇಳಿದ್ದಾರೆ. 

ಮಂಡ್ಯ  [ಆ.23]:  ರಾಜ್ಯದಲ್ಲಿ 17 ಮಂದಿ ಅತೃಪ್ತರಾಗಿ ರಾಜೀನಾಮೆ ನೀಡಿದ್ದು, ಬಳಿಕ ಅನರ್ಹರಾದರು. ಅವರ ಮಾತು ಕೇಳದ್ದರೆ ನಾನು ರಾಜೀನಾಮೆ ನೀಡಬೇಕಿತ್ತು ಎಂದು ಜೆಡಿಎಸ್ ಶಾಸಕರೋರ್ವರು ಹೇಳಿದ್ದಾರೆ. 

ಮಂಡ್ಯದಲ್ಲಿ ಮಾತನಾಡಿದ ನಾಗಮಂಗಲ ಕ್ಷೇತ್ರದ ಶಾಸಕ ಸುರೇಶ್ ಗೌಡ ಅಂದು ನಮಗೂ ರಾಜೀನಾಮೆ ನೀಡಿದರೆ ಚೆನ್ನಾಗಿರುತ್ತಿತ್ತು ಎನಿಸಿತ್ತು. ಆದರೆ ಈಗ ಆತ್ಮಾವಲೋಕನ ಮಾಡಿಕೊಂಡಿದ್ದು, ರಾಜೀನಾಮೆ ನೀಡದಿರುವುದೇ ಸರಿ ಎನಿಸುತ್ತಿದೆ ಎಂದರು. 

ಈ ಮೂಲಕ ತಾವೂ ರಾಜೀನಾಮೆ ನೀಡಲು ಮನಸ್ಸು ಮಾಡಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡರು. ಮೈತ್ರಿ ಸರ್ಕಾರ ಬಿದ್ದ ಮೇಲೆ ಹಲವು ಶಾಸಕರು ರಾಜೀನಾಮೆ ತೀರ್ಮಾನ ಮಾಡಿದ್ದರು. ಅನರ್ಹಗೊಂಡವರ ಪರಿಸ್ಥಿತಿ ನೋಡಿದರೆ ರಾಜೀನಾಮೆ ನೀಡದರಿವುದೇ ಸರಿ ಎನಿಸುತ್ತಿದೆ. ಜನಕೊಟ್ಟ ಅಧಿಕಾರವನ್ನು ಅದೇ ಪಕ್ಷದಲ್ಲಿದ್ದು ಪೂರ್ಣಗೊಳಿಸುವುದು ಗೌರವ ಎಂದು ನನಗನಿಸುತ್ತಿದೆ ಎಂದರು.

ಅನರ್ಹಗೊಂಡ ಒಂದು ಗಂಟೆಯೊಳಗೆ ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ಕೊಡಿಸುತ್ತಾರೆ ಎಂದು ರಾಜೀನಾಮೆ ನೀಡಿದ್ದ ಸ್ನೇಹಿತರು ನನಗೆ ಹೇಳಿದ್ದರು. ಆದ 24ದಿನ ಆದರೂ ತಡೆಯಾಜ್ಞೆ ಸಿಕ್ಕಿಲ್ಲ ಎಂದು ಸುರೇಶ್ ಗೌಡ ಹೇಳಿದರು. 

ರಾಜ್ಯ ರಾಜಕೀಯದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

6ತಿಂಗಳಲ್ಲಿ ಬರುವ ಸಾರ್ವತ್ರಿಕ ಚುನಾವಣೆಗೆ ಅವರೆಲ್ಲರೂ ಕಾಯುತ್ತಿದ್ದಾರೆ.  ಮಧ್ಯಂತರ ಚುನಾವಣೆ ಕೆಲವೇ ದಿನಗಳಲ್ಲಿ ಬರಲಿದೆ. ನಮ್ಮ ವರಿಷ್ಠರು ಚುನಾವಣೆಗೆ ತಯಾರಾಗುವಂತೆ ನಮಗೆ ಹೇಳಿದ್ದಾರೆ. ಕಾಂಗ್ರೆಸ್ ಜೊತೆ ಮೈತ್ರಿ ಬೇಡ ಎಂದು ನಮ್ಮ ವರಿಷ್ಠರಿಗೆ ಹೇಳಿದ್ದೆ. ಈಗ ನಮ್ಮ ನಾಯಕರಿಗೆ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿದ್ದು ತಪ್ಪು ಎನ್ನಿಸಿದೆ ಎಂದು ಸುರೇಶ್ ಗೌಡ ಹೇಳಿದರು.

click me!