ದಾವಣಗೆರೆ: ಅಡ್ಮಿಶನ್ ವೇಳೆ ಪೋಷಕರಿಂದ ಎಕ್ಸಾಂ..! ಶಿಕ್ಷೆಯಾಗುತ್ತೆ ಹುಷಾರ್

By Kannadaprabha News  |  First Published Aug 23, 2019, 2:47 PM IST

ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ವೇಳೆ ಮಕ್ಕಳ ಇಲ್ಲವೇ ಪೋಷಕರ ಪರೀಕ್ಷೆ ನಡೆಸುವಂತಿಲ್ಲ ಎಂದು ಬೆಂಗಳೂರಿನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ. ಶಂಕ್ರಪ್ಪ ಹೇಳಿದರು. ಅಡ್ಮಿಶನ್ ಸಂದರ್ಭದಲ್ಲಿ ಮಕ್ಕಳಿಗೂ, ಪೋಷಕರಿಗೂ ಪರೀಕ್ಷೆ ನಡೆಸಿ ಅದರ ಫಲಿತಾಂಶದ ಆಧಾರದಲ್ಲಿ ದಾಖಲಾತಿ ಮಾಡುವುದನ್ನು ಕಡ್ಡಾಯವಾಗಿ ನಿರ್ಬಂಧಿಸಲಾಗಿದೆ.


ದಾವಣಗೆರೆ(ಆ.23): ಸರ್ಕಾರಿ, ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ದಾಖಲಿಸಿಕೊಳ್ಳುವ ವೇಳೆ ಮಕ್ಕಳ ಇಲ್ಲವೇ ಪೋಷಕರ ಪರೀಕ್ಷೆ ನಡೆಸುವಂತಿಲ್ಲ ಎಂದು ಬೆಂಗಳೂರಿನ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಿ. ಶಂಕ್ರಪ್ಪ ಹೇಳಿದರು.

ಹೊನ್ನಾಳಿಯ ಸ್ಫೂರ್ತಿ ಸಂಸ್ಥೆ, ಪಂಚಾಯತ್‌ ರಾಜ್‌ ಇಲಾಖೆ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಬಸವನಹಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತೆರೆದ ಮನೆ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

Tap to resize

Latest Videos

ಅಡ್ಮಿಶನ್ ಟೈಂನಲ್ಲಿ ಎಕ್ಸಾಮ್ ಮಾಡಿದ್ರೆ ಶಿಕ್ಷೆ:

ಶಾಲೆಗಳಿಗೆ ದಾಖಲಿಸಿ ಕೊಳ್ಳುವಾಗ ಮಕ್ಕಳು-ಪೋಷಕರನ್ನು ಪರೀಕ್ಷೆಗೆ ಒಳಪಡಿಸುವುದು ಆರ್‌ಟಿಇ ಪ್ರಕಾರ ಶಿಕ್ಷಾರ್ಹ ಅಪರಾಧ. ಇಂಥ ಘಟನೆಗಳನ್ನು ತಕ್ಷಣ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಗಮನಕ್ಕೆ ತರಬೇಕು ಎಂದರು. ಶಿಕ್ಷಣ ಮಗುವಿನ ಮೂಲಭೂತ ಹಕ್ಕು. ಅದನ್ನು ಕಿತ್ತುಕೊಳ್ಳಲು ಯಾರೂ ಪ್ರಯತ್ನಿಸಬಾರದು. ಸರ್ಕಾರ ಮಗುವಿನ ಶಿಕ್ಷಣಕ್ಕಾಗಿ ಸಾಕಷ್ಟುಹಣ ಖರ್ಚು ಮಾಡುತ್ತಿದೆ ಅದು ಸದುಪಯೋಗವಾಗ ಬೇಕಾದರೆ, ಶಿಕ್ಷಕರು ಉತ್ತಮ ಶಿಕ್ಷಣ ನೀಡುವತ್ತ ಗಮನಹರಿಸಬೇಕು ಎಂದು ಹೇಳಿದರು.

ದಾವಣಗೆರೆ: ಪೊಲೀಸ್ ವರಿಷ್ಠಾಧಿಕಾರಿ ಸಮ್ಮುಖದಲ್ಲೇ ನಿಧಿಗಾಗಿ ಶೋಧ..!

ಶಾಲೆಯು ಸಾರ್ವಜನಿಕ ಆಸ್ತಿಯಾಗಿದ್ದು, ಅದರ ಸಂಪೂರ್ಣ ರಕ್ಷಣೆಯ ಹೊಣೆ ಗ್ರಾಮಸ್ಥರದ್ದೇ ಆಗಿದೆ. ಗ್ರಾಪಂ ಕೂಡಾ ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು. ಹಾಗಾಗಿ, ಗ್ರಾಪಂ ಜನಪ್ರತಿನಿಧಿಗಳು, ಶಿಕ್ಷಕರು, ಗ್ರಾಮಸ್ಥರು, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು, ಯವಕರನ್ನು ಒಳಗೊಂಡ ಶಾಲಾ ಸುರಕ್ಷತಾ ಸಮಿತಿ ರಚಿಸಿ ಶಾಲೆಯನ್ನು ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ಶಿಕ್ಷಣ ವ್ಯವಸ್ಥೆಯಲ್ಲಿ ರಾಜಕೀಯ ಬೇಡ:

ಮುಖಂಡ ಕೇಶವಮೂರ್ತಿ ಅವರು ಶಿಕ್ಷಣ ವ್ಯವಸ್ಥೆಯಲ್ಲಿ ಯಾರೂ ರಾಜಕೀಯ ಎಳೆದು ತರಬಾರದು ಎಂದರು. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಕಟಪೂರ್ವ ಸದಸ್ಯ ಕೆ.ಬಿ. ರೂಪಾನಾಯ್ಕ ಮಾತನಾಡಿ, ಗ್ರಾಮಸ್ಥರು ತಮ್ಮ ಶಾಲೆ ಎಂಬ ಪ್ರೀತಿ ಕಾಳಜಿ ಬೆಳೆಸಿಕೊಂಡಾಗ ಮಾತ್ರ ಶಾಲೆಗಳು ಬೆಳೆಯುತ್ತವೆ. ಶಾಲಾ ಕಾಂಪೌಂಡ್‌ ನಿರ್ಮಾಣಕ್ಕೆ ಖಾತ್ರಿ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸಿ, ಅನುದಾನ ಒದಗಿಸಬೇಕು. ಇದಕ್ಕೆ ಬೇಕಾದ ಎಲ್ಲಾ ಸಹಕಾರವನ್ನು ನೀಡಲಾಗುವುದು ಎಂದು ತಿಳಿಸಿದರು.

‘ಮಾತನಾಡಿದ್ರೆ ವಿವಾದ ಆಗುತ್ತೆ..ಕೇಸ್ ಬೀಳುತ್ತೆ.. ಈಗಾಗ್ಲೆ ಎರಡಿದೆ'

ಎಸ್‌ಡಿಎಂಸಿ ಅಧ್ಯಕ್ಷ ವೀರೇಶ್‌ಗೌಡ ಅಧ್ಯಕ್ಷತೆ ವಹಿಸಿದ್ದರು. ಬಸವನಹಳ್ಳಿ ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಮ್ಮ ದೊಡ್ಡೇಶಪ್ಪ, ಉಪಾಧ್ಯಕ್ಷ ಎಸ್‌. ರವಿಕುಮಾರ್‌, ಸದಸ್ಯ ಸಿದ್ದಪ್ಪ, ಬಿಇಒ ರಾಜೀವ್‌, ಕಸಬಾ ಇಸಿಒ ಮುದ್ದನಗೌಡ, ಬಿಆರ್‌ಪಿ ಪ್ರಸನ್ನಕುಮಾರ್‌, ಸಿಆರ್‌ಪಿ ವರದರಾಜ್‌, ಸುಜಾತ, ಎಚ್‌.ಸಿ. ಕೆಂಚಪ್ಪ ಇತರರು ಇದ್ದರು.

click me!