ಕಾಣೆಯಾಗಿದ್ದ ಅಂಧ ನಾಯಿ ಹುಡುಕಿದ ಪೊಲೀಸರು: 6 ದಿನಗಳ ಬಳಿಕ ಮಾಲೀಕರ ಮಡಿಲು ಸೇರಿದ ಶ್ವಾನ..!

Published : Sep 01, 2023, 06:04 AM IST
ಕಾಣೆಯಾಗಿದ್ದ ಅಂಧ ನಾಯಿ ಹುಡುಕಿದ ಪೊಲೀಸರು: 6 ದಿನಗಳ ಬಳಿಕ ಮಾಲೀಕರ ಮಡಿಲು ಸೇರಿದ ಶ್ವಾನ..!

ಸಾರಾಂಶ

ಇನ್ಫೆಂಟ್ರಿ ರಸ್ತೆಯ ನಿವಾಸಿ ರಮ್ಯಾ ಎಂಬುವವರ 14 ವರ್ಷದ ‘ರಾಲ್ಫ್‌’ ಹೆಸರಿನ ಸಾಕು ಶ್ವಾನವೊಂದು ಆ.22ರಂದು ಮನೆಯಿಂದ ನಾಪತ್ತೆಯಾಗಿತ್ತು. ಕುಟುಂಬದ ಸದಸ್ಯನಂತಿದ್ದ ಪ್ರೀತಿಯ ರಾಲ್ಫ್‌ ಏಕಾಏಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ರಮ್ಯಾ ಅವರ ಕುಟುಂಬ ಕಂಗಾಲಾಗಿತ್ತು

ಬೆಂಗಳೂರು(ಸೆ.01):  ಇದ್ದಕ್ಕಿದ್ದಂತೆ ಮನೆಯಿಂದ ಕಾಣೆಯಾದ ಅಂಧ ಸಾಕು ಶ್ವಾನವೊಂದು ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರ ಕರ್ತವ್ಯ ನಿಷ್ಠೆ ಹಾಗೂ ಶ್ರಮದ ಫಲವಾಗಿ ಆರು ದಿನಗಳ ಬಳಿಕ ಸುರಕ್ಷಿತವಾಗಿ ಮಾಲೀಕರ ಮಡಿಲು ಸೇರಿದೆ.

ಇನ್ಫೆಂಟ್ರಿ ರಸ್ತೆಯ ನಿವಾಸಿ ರಮ್ಯಾ ಎಂಬುವವರ 14 ವರ್ಷದ ‘ರಾಲ್ಫ್‌’ ಹೆಸರಿನ ಸಾಕು ಶ್ವಾನವೊಂದು ಆ.22ರಂದು ಮನೆಯಿಂದ ನಾಪತ್ತೆಯಾಗಿತ್ತು. ಕುಟುಂಬದ ಸದಸ್ಯನಂತಿದ್ದ ಪ್ರೀತಿಯ ರಾಲ್ಫ್‌ ಏಕಾಏಕಿ ನಾಪತ್ತೆಯಾದ ಹಿನ್ನೆಲೆಯಲ್ಲಿ ರಮ್ಯಾ ಅವರ ಕುಟುಂಬ ಕಂಗಾಲಾಗಿತ್ತು. ಈ ಬಗ್ಗೆ ಮಾಹಿತಿ ಪಡೆದ ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರು 75ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾಗಳ ಪರಿಶೀಲನೆ ಬಳಿಕ ಸಿಕ್ಕಿ ಸುಳಿವಿನ ಮೇರೆಗೆ ರಾಲ್ಫ್‌’ ಅನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಾಲೀಕರ ಸುಪರ್ದಿಗೆ ಒಪ್ಪಿಸಿದ್ದಾರೆ. ಆರು ದಿನಗಳ ಕಾಲ ರಾಲ್ಫ್‌’ ಇಲ್ಲದೆ ಕುಗ್ಗಿದ್ದ ರಮ್ಯಾ ಅವರ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

ಪೊಲೀಸ್ ಇಲಾಖೆ ಸೇರಿದ ಮುದ್ದಿನ ನಾಯಿ ಮರಿ, ಹೆಸರು ಸೂಚಿಸಲು ಸಾರ್ವಜನಿಕರಲ್ಲಿ ಮನವಿ!

ನಾಪತ್ತೆ ಹೇಗೆ?:

ರಾಲ್ಫ್‌  ವಯೋಸಹಜವಾಗಿ ಎರಡು ಕಣ್ಣುಗಳ ದೃಷ್ಟಿಕಳೆದುಕೊಂಡಿದೆ. ಆ.22ರಂದು ಮನೆಯ ಕೆಲಸದವರು ಗೇಟ್‌ ಸರಿಯಾಗಿ ಹಾಕದ ಪರಿಣಾಮ ರಾಲ್ಫ್‌ ಗೇಟ್‌ನಿಂದ ರಸ್ತೆಗೆ ಬಂದಿದೆ. ಇದನ್ನು ನೋಡಿದ ಆಟೋ ಚಾಲಕನೊಬ್ಬ ರಾಲ್‌್ಫನನ್ನು ಎತ್ತಿಕೊಂಡು ಆಟೋದಲ್ಲಿ ಕೂರಿಸಿಕೊಂಡು ಕಾವಲ್‌ ಬೈರಸಂದ್ರಗೆ ಸಾಗಿಸಿದ್ದಾನೆ. ರಾಲ್ಫ್‌ಗೆ ಎರಡೂ ಕಣ್ಣು ಕಾಣದ ಹಿನ್ನೆಲೆಯಲ್ಲಿ ಅದನ್ನು ಮತ್ತೊಬ್ಬ ಯುವಕನಿಗೆ ಕೊಟ್ಟು ತೆರಳಿದ್ದಾನೆ. ಆ ಯುವಕ ರಾಲ್ಪ್‌ನನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಆದರೆ, ರಾಲ್ಫ್‌ ಹೊಸ ಜಾಗಕ್ಕೆ ಹೊಂದಿಕೊಳ್ಳಲಾಗದೆ ಒದ್ದಾಡಲು ಶುರು ಮಾಡಿದೆ. ಇದರಿಂದ ವಿಚಲಿತನಾದ ಯುವಕ ರಾಲ್ಫ್‌ನನ್ನು ಕಾವಲ್‌ ಬೈರಸಂದ್ರದ ಸ್ಮಶಾನದ ಬಳಿ ಬಿಟ್ಟು ಹೋಗಿದ್ದಾನೆ. ಸ್ಮಶಾನದ ಬಳಿ ಕಂಗಾಲಾಗಿದ್ದ ಕುಳಿತ್ತಿದ್ದ ರಾಲ್ಫ್‌ನನ್ನು ನೋಡಿದ ಇಬ್ಬರು ಹುಡುಗರು ಅದನ್ನು ಎತ್ತಿಕೊಂಡು ಮನೆಗೆ ತೆರಳಿದ್ದರು.

ನಾಯಿ ಕಾಣದೆ ಕಂಗಾಲು

ಮತ್ತೊಂದೆಡೆ ಪ್ರೀತಿಯ ಶ್ವಾನ ರಾಲ್ಫ್‌ ನಾಪತ್ತೆಯಾದ ಮಾರನೇ ದಿನವೇ ರಮ್ಯಾ ಅವರ ಪುತ್ರ ರಿಷಬ್‌ ಚೌಧರಿ ಲಂಡನ್‌ನಿಂದ ಬೆಂಗಳೂರಿಗೆ ಬಂದಿದ್ದಾರೆ. ಮನೆಯಲ್ಲಿ ಪ್ರೀತಿಯ ರಾಲ್ಫ್‌ ನಾಪತ್ತೆಯಾಗಿರುವ ವಿಚಾರ ತಿಳಿದು ಬೇಸರಗೊಂಡಿದ್ದಾರೆ. ಬಳಿಕ ತಾಯಿ ರಮ್ಯಾ ಹಾಗೂ ರಿಷಬ್‌ ಜೊತೆಯಾಗಿ ಇನ್ಫಾಂಟ್ರಿ ರಸ್ತೆ, ಶಿವಾಜಿನಗರ, ಕನ್ನಿಂಗ್‌ಹ್ಯಾಮ್‌ ರೋಡ್‌, ಕ್ವೀನ್ಸ್‌ ರೋಡ್‌ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ಹುಡುಕಾಡಿದ್ದಾರೆ. ಎಲ್ಲಿಯೂ ರಾಲ್ಫ್‌ನ ಸುಳಿವು ಪತ್ತೆಯಾಗಿಲ್ಲ.

ಪೊಲೀಸರಿಂದ ತೀವ್ರ ಶೋಧ

ಈ ನಡುವೆ ರಾಲ್‌್ಫ ನಾಪತ್ತೆಯಾಗಿರುವ ಬಗ್ಗೆ ಕಮರ್ಷಿಯಲ್‌ ಸ್ಟ್ರೀಟ್‌ ಪೊಲೀಸ್‌ ಠಾಣೆಗೆ ಮಾಹಿತಿ ನೀಡಿದ್ದಾರೆ. ರಮ್ಯಾ ಅವರ ಕುಟುಂಬ ಒದ್ದಾಟ ಕಂಡ ಪೊಲೀಸರು, ರಾಲ್ಫ್‌ ಹುಡುಕಿ ಸುರಕ್ಷಿತವಾಗಿ ಮಾಲಿಕರ ಸುಪರ್ದಿಗೆ ಒಪ್ಪಿಸುವ ದೃಢ ಸಂಕಲ್ಪದೊಂದಿಗೆ ಹುಡುಕಾಟ ಆರಂಭಿಸಿದ್ದಾರೆ. ರಾಲ್ಫ್‌  ನಾಪತ್ತೆಯಾದ ಸ್ಥಳದಿಂದ ಶುರು ಮಾಡಿ ನಗರದ ವಿವಿಧೆಡೆ ಸುಮಾರು 75ಕ್ಕೂ ಅಧಿಕ ಸಿಸಿಟಿವಿ ಕ್ಯಾಮರಾ ಪರಿಶೀಲನೆ ಮಾಡಿದ್ದಾರೆ. ಈ ವೇಳೆ ಆಟೋ ಚಾಲಕನೊಬ್ಬ ರಾಲ್ಫ್‌ ನನ್ನು ಕರೆದುಕೊಂಡು ಹೋಗಿರುವ ಸುಳಿವು ಸಿಕ್ಕಿದೆ.

ಮುದ್ದು ಮಾಡ್ತಾ ಹೊತ್ಕೊಂಡೆ ಹೋದ್ರು: ನಾಯಿಮರಿ ಪತ್ತೆಗೆ ಪೋಸ್ಟರ್: ಭಾರಿ ಮೊತ್ತದ ಬಹುಮಾನ

ಆ ಆಟೋರಿಕ್ಷಾದ ನೋಂದಣಿ ಸಂಖ್ಯೆ ಆಧರಿಸಿ ಆ ಚಾಲಕನನ್ನು ಕಾವಲ್‌ ಬೈರಸಂದ್ರದಲ್ಲಿ ಪತ್ತೆಹಚ್ಚಿದ್ದಾರೆ. ಬಳಿಕ ಆತನನ್ನು ವಿಚಾರಣೆ ಮಾಡಿದಾಗ ಮತ್ತೊಬ್ಬ ಯುವಕನಿಗೆ ಕೊಟ್ಟಿದ್ದಾಗಿ ಹೇಳಿದ್ದಾನೆ. ಆ ಯುವಕನನ್ನು ಪತ್ತೆ ಮಾಡಿ ವಿಚಾರಣೆ ಮಾಡಿದಾಗ ಸ್ಮಶಾನದ ಬಳಿ ಬಿಟ್ಟಿದ್ದಾಗಿ ಮಾಹಿತಿ ನೀಡಿದ್ದಾನೆ.

ಸ್ಮಶಾನದ ಬಳಿ ತೆರಳಿ ಪರಿಶೀಲನೆ ಮಾಡಿದಾಗ ಇಬ್ಬರು ಹುಡುಗರು ಎತ್ತಿಕೊಂಡು ಹೋಗಿರುವ ವಿಚಾರ ಗೊತ್ತಾಗಿದೆ. ಸುಮಾರು ಆರು ದಿನಗಳ ಕಾಲ ಸತತ ಪರಿಶ್ರಮದ ಫಲವಾಗಿ ರಾಲ್ಫ್‌ನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಮಾಲಿಕರ ಸುಪರ್ದಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಮರ್ಷಿಯಲ್‌ ಸ್ಟ್ರೀಟ್‌ ಠಾಣೆ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

PREV
Read more Articles on
click me!

Recommended Stories

'ಕುಡುಕರ ಲಿವರ್‌ಗೆ ಸರ್ಕಾರದ ಗ್ಯಾರಂಟಿ ಕೊಡಿ..' ಅಬಕಾರಿ ಆದಾಯ ಹೆಚ್ಚಿಸಲು ಖತರ್ನಾಕ್‌ ಐಡಿಯಾ ಕೊಟ್ಟ ಬಿಜೆಪಿ MLC
ನೆಲಮಂಗಲದಲ್ಲಿ ಹಸುವಿನ ಕತ್ತು ಕೊಯ್ದು ವಿಕೃತಿ ಮೆರೆದ ಕಳ್ಳರು; ಬೆಚ್ಚಿಬಿದ್ದ ಗ್ರಾಮಸ್ಥರು