ನೇತ್ರದಾನಕ್ಕೆ ಮುಂದಾದ ಗದಗ ಜಿಲ್ಲಾಧಿಕಾರಿ ವೈಶಾಲಿ: ಐ ಡೊನೇಷನ್‌ಗೆ ರಿಜಿಸ್ಟ್ರೇಷನ್

Published : Aug 31, 2023, 11:59 PM IST
ನೇತ್ರದಾನಕ್ಕೆ ಮುಂದಾದ ಗದಗ ಜಿಲ್ಲಾಧಿಕಾರಿ ವೈಶಾಲಿ: ಐ ಡೊನೇಷನ್‌ಗೆ ರಿಜಿಸ್ಟ್ರೇಷನ್

ಸಾರಾಂಶ

ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿ ನೋಂದಣಿ ಮಾಡಿಕೊಂಡು, ತಮ್ಮ ಒಪ್ಪಿಗೆ ಪತ್ರವನ್ನು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ.ರಾಜೇಂದ್ರ ಬಸರಿಗಿಡದ ಅವರಿಗೆ ಹಸ್ತಾಂತರಿಸಿದ್ದಾರೆ. 

ಗದಗ (ಆ.31): ಜಿಲ್ಲಾಧಿಕಾರಿ ವೈಶಾಲಿ.ಎಂ.ಎಲ್ ಅವರು ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿ ನೋಂದಣಿ ಮಾಡಿಕೊಂಡು, ತಮ್ಮ ಒಪ್ಪಿಗೆ ಪತ್ರವನ್ನು ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಅವರಿಗೆ ಹಸ್ತಾಂತರಿಸಿದ್ದಾರೆ. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರದಂದು ಜರುಗಿದ ಈ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್ ಅವರು ನೀತ್ರದಾನ ಒಪ್ಪಿಗೆ ಪತ್ರ ನೀಡಿದ್ರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಧಿಕಾರಿ ವೈಶಾಲಿ ಎಂಎಲ್, ಅವಕಾಶ ಸಿಕ್ಕಾಗ ನೇತ್ರದಾನ ಮಾಡಬೇಕು ಅದುಕೊಂಡಿದ್ದೆ. 

ಆದ್ರೆ, ಅವಕಾಶ ಸಿಕ್ಕಿರಲಿಲ್ಲ. ಈಗ ಅಧಿಕಾರಿ ಕೇಳಿದಾಕ್ಷಣ ನೋಂದಣಿ ಮಾಡಿದ್ದೇನೆ ಅಂತಾ ಹೇಳಿದ್ದಾರೆ. ಆಗಸ್ಟ್ 25 ರಿಂದ ಸೆಪ್ಟೆಂಬರ್ 08 ರವರೆಗೆ ಜಿಲ್ಲೆಯಲ್ಲಿ 38 ನೇ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಅಂಧತ್ವ ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಜಿಲ್ಲೆಯ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ನೇತ್ರದಾನ ನೋಂದಣಿ ಶಿಬಿರ ಆಯೋಜಿಸಲಾಗಿದೆ ಅಂತೆಯೂ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ರು.

ಸಾಂಸ್ಕೃತಿಕ ಪುನರುತ್ಥಾನಕ್ಕಾಗಿ ಪ್ರೋತ್ಸಾಹ: ಜನಮನ ಸೆಳೆದ ಸಂಸ್ಕೃತ ವಿಜ್ಞಾನ ಪ್ರದರ್ಶಿನಿ

ಕಾರ್ಯಕ್ರಮ ಅನುಷ್ಠಾನ ಅಧಿಕಾರಿ ಡಾ. ರಾಜೇಂದ್ರ ಬಸರಿಗಿಡದ ಅವರು ಮಾತ್ನಾಡಿ, ನೇತ್ರದಾನ ಮಾಡುವುದು ಮರಣಾ ನಂತರ.. ನಮ್ಮ ನೇತ್ರಗಳು ಸದಾ ಜಿವಂತವಾಗಿರಲು ಜಿಲ್ಲೆಯ ಎಲ್ಲರೂ ನೇತ್ರದಾನಕ್ಕೆ ನೋಂದಣೆ ಮಾಡಬೇಕೆಂದು ತಿಳಿಸಿದರು. ಅಂದಾಜು 1.25 ಲಕ್ಷ ಜನರು ಕಾರ್ನಿಯಾ ಸಂಬಂದಿ ಅಂಧತ್ವ ದಿಂದ ಬಳಲುತ್ತಿದ್ದಾರೆ, ದಾನಕ್ಕಾಗಿ ಕಾಯುತ್ತಿರುತ್ತಾರೆ. ಒಬ್ಬ ವ್ಯಕ್ತಿ ದಾನ ಮಾಡಿದ ನೇತ್ರಗಳು ಇಬ್ಬರು ಕಾರ್ನಿಯಾ ಅಂಧರಿಗೆ ದೃಷ್ಟಿ ಮರಳಿ ನೀಡುತ್ತದೆ ಎಂದರು.

ಸಮೀಪದ ಸರಕಾರಿ ಆಸ್ಪತ್ರೆಗಳಲ್ಲಿ ಅಥವಾ ದಿನದ  24/7 ಉಚಿತ ಸಹಾಯವಾಣೆ 104 ಅಥವಾ ರಾಷ್ಟ್ರೀಯ ಸಹಾಯವಾಣೆ 1800-11-4770ಕ್ಕೆ ಕರೆ ಮಾಡಿ ನೇತ್ರದಾನ ನೋಂದಣಿ ಮಾಡಿಕೊಳ್ಳಬಹುದು.   ವೆಬ್‍ಸೈಟ್‍ನಲ್ಲಿ ನೋಂದಣಿ  (https://www.jeevasarthakathe.karnataka.gov.in)  ಮೂಲಕ ಸುಲಭವಾಗಿ ನೋಂದಣಿ ಮಾಡಬಹುದಾಗಿದೆ.

ಕರಾವಳಿಯಲ್ಲಿ ಮತ್ತೆ ಧರ್ಮ‌ ದಂಗಲ್: ದಲಿತ ಮುಖಂಡನಿಂದ ಹಿಂದೂ ದೇವರ ವಿರುದ್ಧ ಸೊಂಟದ ಕೆಳಗಿನ ಭಾಷಾ ಪ್ರಯೋಗ!

ತಾಲೂಕ ಆಸ್ಪತ್ರೆ  ನೇತ್ರ ತಜ್ಞರಾದ ಡಾ. ಪ್ರೀತಿ ಬಿರಾದರ ಮಾತನಾಡಿ ನೇತ್ರಧಾನ ನೋಂದಣೆ ಮತ್ತು ವಿತರಣೆ ಉಚಿತ ಸೇವೆ ನೇತ್ರ ಸಂಗ್ರಹಣೆಗೆ ಬೇಕಾಗುವ ಸಮಯ ಕೇವಲ 20 ನಿಮಿಷಗಳು ನೇತ್ರ ಸಂಗ್ರಹಣೆಯ ನಂತರ ಮೃತರ ಮುಖ ವಿಕಾರವಾಗುವುದಿಲ್ಲ ಎಂದು ತಿಳಿಸಿದರು..  ಜಿಲ್ಲಾಧಿಕಾರಿಗಳೇ ಮುಂದೆನಿಂತು ನೇತ್ರದಾನ ನೋಂದಣಿ ಮಾಡಿರೋದು ಇತರ ಅಧಿಕಾರಿಗಳು ಹಾಗೂ ಇತರರಿಗೆ ಮಾದರಿಯಾಗಿದೆ.

PREV
Read more Articles on
click me!

Recommended Stories

ನೊಂದವರಿಗೆ ನ್ಯಾಯ ಕೊಡಿಸುವಲ್ಲಿ ರಾಜ್ಯ ಮೊದಲ ಸ್ಥಾನ: ಗೃಹಸಚಿವ ಪರಮೇಶ್ವರ್
ಬೆಂಗಳೂರು: ನಗರದಲ್ಲಿ 1000ಕ್ಕೂ ಅಧಿಕ ಅಪಾಯಕಾರಿ ಮರ ಪತ್ತೆ!