ಮೈಸೂರು: ಹಳೆ ಕಟ್ಟಡಗಳ ಮೇಲೆ ನಿಂತು ಮೆರವಣಿಗೆ ನೋಡೋ ಹಾಗಿಲ್ಲ

By Kannadaprabha NewsFirst Published Oct 2, 2019, 10:54 AM IST
Highlights

ಹಳೆಯ ಕಟ್ಟಡಗಳ ಮೇಲೆ ನಿಂತು ದಸರಾ ನೋಡೋದನ್ನು ನಿಷೇಧಿಸಲಾಗಿದೆ. ಜಾತ್ರೆ, ಇತರ ಆಚರಣೆ ಸಂದರ್ಭದಲ್ಲಿ ಜನ ಹಳೆಯ ಕಟ್ಟಡಗಳ ಮೇಲೆ ಜಮಾಯಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಕಟ್ಟಡ ಕುಸಿಯುವ ಘಟನೆ ಹಲವು ಬಾರಿ ನಡೆದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂತಹದೊಂದು ಸೂಚನೆ ನೀಡಲಾಗಿದೆ.

ಮೈಸೂರು(ಅ.02): ಹಳೆಯ ಕಟ್ಟಡಗಳ ಮೇಲೆ ನಿಂತು ದಸರಾ ನೋಡೋದನ್ನು ನಿಷೇಧಿಸಲಾಗಿದೆ. ಜಾತ್ರೆ, ಇತರ ಆಚರಣೆ ಸಂದರ್ಭದಲ್ಲಿ ಜನ ಹಳೆಯ ಕಟ್ಟಡಗಳ ಮೇಲೆ ಜಮಾಯಿಸುತ್ತಾರೆ. ಅಂತಹ ಸಂದರ್ಭಗಳಲ್ಲಿ ಕಟ್ಟಡ ಕುಸಿಯುವ ಘಟನೆ ಹಲವು ಬಾರಿ ನಡೆದಿದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಇಂತಹದೊಂದು ಸೂಚನೆ ನೀಡಲಾಗಿದೆ.

ಅ.8 ರಂದು ಸಯ್ಯಾಜಿರಾವ್‌ ರಸ್ತೆಯ ಮೂಲಕ ಸಾಗುವ ದಸರಾ ಮೆರವಣಿಯ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಹಳೆಯ ಅಥವಾ ಶಿಥಿಲ ಕಟ್ಟಡಗಳ ಮೇಲೆ ನಿಂತು ನೋಡುವುದರಿಂದ ಹೆಚ್ಚಾಗಿ ಅನಾಹುತಗಳು ಸಂಭವಿಸುತ್ತವೆ.

ನೆರೆ ಪರಿಹಾರ ತರುವಲ್ಲಿ ‘ಪ್ರತಾಪ’ ತೋರಿಸಲಿ: ಸಂಸದಗೆ ಟಾಂಗ್..

ಹಾಗಾಗೀ ಕರ್ನಾಟಕ ಮುನಿಸಿಪಲ್ ಕಾಯಿದೆ 1976ರ ಅನುಚ್ಛೇಧ 322ರ ಅನ್ವಯ ಹಳೆಯ ಕಟ್ಟಡಗಳ ಮೇಲೆ ನಿಂತು ಜನರು ಮೆರವಣಿಗೆ ವೀಕ್ಷಣೆ ಮಾಡುವುದನ್ನು ನಿಷೇಧಿಸಲಾಗಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಆಯುಕ್ತ ತಿಳಿಸಿದ್ದಾರೆ.

5ರಂದು ಪೊಲೀಸ್‌ ಸಮೂಹ ವಾದ್ಯಮೇಳ:

ದಸರಾ ಮಹೋತ್ಸವ ಅಂಗವಾಗಿ ಕರ್ನಾಟಕ ರಾಜ್ಯ ಪೊಲೀಸ್‌ ವತಿಯಿಂದ ಸಮೂಹ ವಾದ್ಯಮೇಳ ಕಾರ್ಯಕ್ರಮವನ್ನು ಅ. 5 ರಂದು ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದೆ. ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಸಚಿವ ವಿ. ಸೋಮಣ್ಣ, ಪೊಲೀಸ್‌ ಮಹಾ ನಿರ್ದೇಶಕಿ ನೀಲಮಣಿ ಎನ್‌. ರಾಜು ಭಾಗವಹಿಸುವರು ಪೊಲೀಸ್‌ ಆಯುಕ್ತ ಕೆ.ಟಿ. ಬಾಲಕೃಷ್ಣ ಹೇಳಿದರು.

'ಅಧಿಕಾರಕ್ಕಾಗಿ ಸದನದಲ್ಲಿ ಮಲಗ್ತಾರೆ, ಪ್ರತಿಭಟಿಸ್ತಾರೆ, ಗಲಾಟೆ ಮಾಡ್ತಾರೆ, ಪರಿಹಾರ ತರೋಕೆ ಯಾಕ್ ಮಾಡಲ್ಲಾ..?

click me!