ಹೊಸಪೇಟೆ: ಸಮಯಪ್ರಜ್ಞೆಯಿಂದ ಪ್ರಯಾಣಿಕನ ಜೀವ ರಕ್ಷಿಸಿದ ಪೊಲೀಸ್: ವಿಡಿಯೋ ವೈರಲ್ !

By Ravi Janekal  |  First Published Mar 26, 2023, 3:05 PM IST

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೇ ಪೊಲೀಸ್ ಪೇದೆ ಸಂತೋಷ್ ರಾಠೋಡ್ ರಕ್ಷಿಸಿ  ಜೀವ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.


ವಿಜಯನಗರ (ಮಾ.26) : ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಪ್ರಯತ್ನಿಸಿ ರೈಲಿನ ಗಾಲಿಗೆ ಬೀಳುತ್ತಿದ್ದ ಪ್ರಯಾಣಿಕನನ್ನು ರೈಲ್ವೇ ಪೊಲೀಸ್ ಪೇದೆ ಸಂತೋಷ್ ರಾಠೋಡ್ ರಕ್ಷಿಸಿ  ಜೀವ ಉಳಿಸಿ ಸಮಯಪ್ರಜ್ಞೆ ಮೆರೆದಿದ್ದಾರೆ.

ಹೊಸಪೇಟೆ ರೈಲು ನಿಲ್ದಾಣ(Hospet railway station)ದಲ್ಲಿ   ನಡೆದಿರುವ ಘಟನೆಯಲ್ಲಿ ಪ್ಲಾಟ್‌ಫಾರಂ ಮೇಲೆ ನಿಂತಿದ್ದ ಪೊಲೀಸ್ ಪೇದೆ ರೈಲಿನ ಅಡಿಗೆ ಬೀಳುತ್ತಿದ್ದವನನ್ನು ಕೈ ಹಿಡಿದು ಮೇಲೆತ್ತಿ ರಕ್ಷಿಸಿದ್ದಾರೆ.

Latest Videos

undefined

ಈ ಕೆಟ್ಟ ಅಭ್ಯಾಸಗಳಿಂದ ನೀವು ಕೆಲಸ ಕಳೆದುಕೊಳ್ಳೋದು ಗ್ಯಾರಂಟಿ

ಗದಗ ಮೂಲದ ಯುವಕನೊಬ್ಬ ಹೊಸಪೇಟೆಯಿಂದ ತನ್ನೂರಿಗೆ ವಾಪಸ್ ಹೊರಟಿದ್ದ ವೇಳೆ, ರೈಲು ನಿಲ್ದಾಣದಲ್ಲಿ ಶೌಚಾಲಯದಲ್ಲಿ ಶೌಚಕ್ಕೆಂದು ಹೋದಾಗ 5 ರೂ. ಕೇಳಿದ್ದಾರೆ. ಶೌಚಾಲಯಕ್ಕೆ ಯಾಕೆ ಹಣ ಯಾಕೆ ಪಾವತಿಸಬೇಕೆಂದು ಅದೇ ವೇಳೆಗೆ ಬಂದು ನಿಂತಿದ್ದ ಬೆಳಗಾವಿ- ಸಿಕಂದರಾಬಾದ್ ರೈಲಿನಲ್ಲಿ ಶೌಚಕ್ಕೆ ತೆರಳಿದ್ದಾನೆ. 

ಶೌಚ ಮುಗಿಸಿ ಹೊರಗೆ ಬರುವ ವೇಳೆಗಾಗಲೇ ರೈಲು ವೇಗವಾಗಿ ಚಲಿಸುತ್ತಿದ್ದು, ಅದರಿಂದ ಇಳಿಯಲು ಹೋಗಿ ಸ್ವಲ್ಪದರಲ್ಲೇ ಕಾಲು ಜಾರಿ ರೈಲಿನ ಅಡಿಗೆ ಸಿಲುಕುತ್ತಿದ್ದ. ಇದೇ ವೇಳೆಗೆ ಅಲ್ಲಿಯೇ ಇದ್ದ ಪೊಲೀಸ್ ಪೇದೆ ಸಂತೋಷ್ ರಾಠೋಡ್(Santosh rathod police constable) ಪ್ರಯಾಣಿಕನ ಕೈ ಹಿಡಿದು ಮೇಲೆತ್ತಿದ್ದಾರೆ. ಜತೆಗಿದ್ದ ರೈಲ್ವೇ ಪೊಲೀಸ್ ಗುರುರಾಜ್ ಅವರು ಕೂಡ ಸಹಕರಿಸಿ ಜೀವ ಉಳಿಸಿದ್ದಾರೆ. 

ದೊಡ್ಡ ಅನಾಹುತದಿಂದ ಅಮ್ಮನ ರಕ್ಷಿಸಿದ ಪುಟಾಣಿ... ವಿಡಿಯೋ ವೈರಲ್

ಈ ವಿಡಿಯೋ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಕುರಿತು ರೈಲ್ವೇ ಇಲಾಖೆ ತನ್ನ ವೆಬ್ ಸೈಟ್ ನಲ್ಲಿ ವಿಡಿಯೋ ಅಪ್ಲೋಡ್ ಮಾಡಿದೆ.

click me!