ಮುಂಬರುವ ವಿಧಾನಸಭೆ ಚುನಾವಣೆಗೆ ನೀತಿಸಂಹಿತೆ ಪ್ರಕಟಣೆಯಾಗುವ ವಿಜಯಪುರ ಪೊಲೀಸರು ಅಲರ್ಟ್ ಆಗಿದ್ದಾರೆ. ಎಲ್ಲೆಡೆ ಚೆಕ್ ಪೋಸ್ಟ್ ನಿರ್ಮಿಸಿ ವಾಹನ ತಪಾಸಣೆ ಮಾಡುತ್ತಿರುವ ಹಿನ್ನೆಲೆ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಕುಕ್ಕರ್‌ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ವಿಜಯಪುರ (ಮಾ.26) : ಮುಂಬರುವ ವಿಧಾನಸಭೆ ಚುನಾವಣೆಗೆ ನೀತಿಸಂಹಿತೆ ಪ್ರಕಟಣೆಯಾಗುವ ವಿಜಯಪುರ ಪೊಲೀಸರು ಅಲರ್ಟ್ ಆಗಿದ್ದಾರೆ. ಎಲ್ಲೆಡೆ ಚೆಕ್ ಪೋಸ್ಟ್ ನಿರ್ಮಿಸಿ ವಾಹನ ತಪಾಸಣೆ ಮಾಡುತ್ತಿರುವ ಹಿನ್ನೆಲೆ ದಾಖಲೆ ಇಲ್ಲದೆ ಸಾಗಾಟ ಮಾಡುತ್ತಿದ್ದ ಕುಕ್ಕರ್‌ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿದ್ದಾರೆ.
ಸಿಂದಗಿ ತಾಲ್ಲೂಕಿನ ದೇವಣಗಾಂವ(Devanagav)ನಲ್ಲಿ ದಾಖಲೆ ಇಲ್ಲದೆ 90 ಕುಕ್ಕರ್(Coocker) ಸಾಗಿಸುತ್ತಿದ್ದ ವೇಳೆ ಪೊಲೀಸರು ವಾಹನ ತಪಾಸಣೆ ನಡೆಸುವಾಗ ಪತ್ತೆಯಾಗಿದೆ. ಕುಕ್ಕರ್ ಗಳನ್ನು ವಶಕ್ಕೆ ಪಡೆದಿರುವ ಪೊಲಿಸರು. ಸಿದ್ದು ಮಾಶ್ಯಾಳ ಎಂಬಾತ ದಾಖಲೆ ಇಲ್ಲದೆ ಕುಕ್ಕರ್ ಸಾಗಾಟ ಮಾಡುತ್ತಿದ್ದ.
ಕುಕ್ಕರ್, ಹಾಟ್ ಬಾಕ್ಸ್ ಆಯ್ತು ಈಗ ಧನಲಕ್ಷ್ಮೀ ಸರದಿ.. ಹೊರ ರಾಜ್ಯದಿಂದ ಬರ್ತಿದೆ ಕೋಟಿ ಕೋಟಿ ದುಡ್ಡು..!
ವಿಜಯಪುರದಿಂದ ಕಲಬುರಗಿ ಜಿಲ್ಲೆಯ ಅಪ್ಜಲಪೂರಕ್ಕೆ ಕೊಂಡೊಯ್ಯಲಾಗ್ತಿದ್ದ ಕುಕ್ಕರ್. ಈ ವೇಳೆ ಪೊಲೀಸರು ಅಡ್ಡಗಟ್ಟಿ ವಾಹನ ತಪಾಸಣೆ ನಡೆಸಿದ್ದಾರೆ. ಸೂಕ್ತ ದಾಖಲೆ ಇಲ್ಲದ ಕಾರಣ ಕುಕ್ಕರ್ ವಶಕ್ಕೆ ಪಡೆದ ಆಲಮೇಲ ಐಪಿಎಸ್ ಕುಮಾರ್ ಹಾಡಕರ್
ಸಂಬಂಧಪಟ್ಟ ವ್ಯಕ್ತಿಗೆ ನೋಟಿಸ್ ನೀಡಿರುವ ಪೊಲೀಸರು
ಧೂಳಖೇಡ: ದಾಖಲೆ ಇಲ್ಲದ .49 ಲಕ್ಷ ವಶ
ಚಡಚಣ : ಕರ್ನಾಟಕ-ಮಹಾರಾಷ್ಟ್ರ(Karnatkaa-maharashtra) ಗಡಿಯಲ್ಲಿ ಪೊಲಿಸರು ಕಟ್ಟೆಚ್ಚರವಾಗಿದ್ದಾರೆ.
ಆಯಾಕಟ್ಟಿನ ಮಾರ್ಗಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ಸಿಬ್ಬಂದಿ ನಿಯೋಜಿಸಲಾಗಿದೆ. ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳೂ ಸೇರಿದಂತೆ ನಾವು ಈ ಚೆಕ್ ಪೋಸ್ಟ್‌ಗಳ ಮೇಲೆ ದಿನದ 24 ಗಂಟೆ ನಿಗಾವಹಿಸಿ ಅಕ್ರಮ ಹಣ ಹಾಗೂ ಸಾಮಗ್ರಿ ಸಾಗಾಣಿಕೆಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದೆ ಎಂದು ಚಡಚಣ ಸಿಪಿಐ ಸಾಹೇಬಗೌಡ ಪಾಟೀಲ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಕರ್ನಾಟಕದೊಳಗೆ ಪ್ರವೇಶಿಸುವ ಪ್ರತಿ ವಾಹನಗಳನ್ನು ಗಡಿಯಲ್ಲಿ ತಪಾಸಣೆ ನಡೆಸಲಾಗುತ್ತಿದೆ.
ಶುಕ್ರವಾರ ಮಹಾರಾಷ್ಟ್ರದಿಂದ ಕರ್ನಾಟಕದ ಇಂಡಿ ಪಟ್ಟಣಕ್ಕೆ ಶನಿವಾರ ಬೆಳಗಿನ 2 ಗಂಟೆ ಕ್ಯಾಂಟರ್ ಮೂಲಕ ಸಾಗಿಸುತ್ತಿದ್ದ ಸುಮಾರು 49 ಲಕ್ಷ ರೂಪಾಯಿ ದಾಖಲೆ ಇಲ್ಲದ ಹಣವನ್ನು ಡಿವೈಎಸ್ಪಿ ನಂದರಡ್ಡಿ,ಸಿಪಿಐ ಸಾಹೇಬಗೌಡ ಪಾಟೀಲ ಹಾಗೂ ಝಳಕಿ ಪೊಲೀಸ್ಸಿಬ್ಬಂದಿ ತಪಾಸಣೆ ಸಮಯದಲ್ಲಿ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.
ಮತದಾರರಿಗೆ ಹಂಚಲು ತಂದಿದ್ದ ಕುಕ್ಕರ್ ವಶ: ಶೃಂಗೇರಿ ಶಾಸಕ ರಾಜೇಗೌಡಗೆ ಹಿನ್ನಡೆ
ಚಡಚಣ ಹಾಗೂ ಝಳಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 6 ಅಂತರಾಜ್ಯ ತಪಾಸಣಾ ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ಅಗತ್ಯ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ
ಈ ಪ್ರಕರಣ ಝಳಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.