ಗದಗ (ಜೂ.8) : ಚಲಿಸುತ್ತಿದ್ದ ರೈಲಿಗೆ ಸಿಕ್ಕು ಒದ್ದಾಡುತ್ತಿದ್ದ ಮಹಿಳೆಯನ್ನು ಗಮನಿಸಿದ ಪೊಲೀಸ್ ಪೇದೆಯೊಬ್ಬರು ರಕ್ಷಿಸಿದ ಘಟನೆ ಗದಗದಲ್ಲಿ ನಡೆದಿದೆ. ಗದಗ ರೈಲು ನಿಲ್ದಾಣದ ಮೂರನೇ ಪ್ಲಾಟ್ ಫಾರ್ಮ್ ನಲ್ಲಿ ಘಟನೆ ನಡೆದಿದ್ದು, ಘಟನೆಯ ದೃಶ್ಯ ಪ್ಲಾಟ್ ಫಾರ್ಮ್ ಗೆ ಅಳವಡಿಸಿದ್ದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಸೊಲ್ಲಾಪುರ ಮೂಲದ ಸಾಯಿರಾ ಎಂಬುವವರನ್ನು ಪೇದೆ ಅನ್ವರ್ ಬಾಷಾ ಕದಾಂಪುರ ರಕ್ಷಣೆ ಮಾಡಿ, ಅದೇ ಟ್ರೈನ್ ಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ.
ಅನ್ವರ ಬಾಷಾ ಎಂದಿನಂತೆ ಬೆಳಗ್ಗೆ ಪ್ಲಾಟ್ ಪಾರ್ಮ್ ಗಾರ್ಡ್ ಡ್ಯೂಟಿ ಮೇಲಿದ್ದರು.. ಸುಮಾರು 8 ಗಂಟೆ ಸುಮಾರಿಗೆ ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲು ಗದಗ ತಲುಪಿತ್ತು. ಹುಬ್ಬಳ್ಳಿಯಿಂದ ರೈಲು ಏರಿದ್ದ ಸಾಯಿರಾ, ಗದಗ ರೈಲು ನಿಲ್ದಾಣದಲ್ಲಿ ನೀರು ತುಂಬಿಕೊಳ್ಳಲು ಇಳಿದಿದ್ರು.. ನೀರು ತಿಂಬಿಕೊಳ್ಳುವಷ್ಟರಲ್ಲಿ ರೈಲು ಮೂವ್ ಆಗ್ತಿತ್ತು. ವೇಗದಲ್ಲಿ ವಾಪಾಸ್ ಬೋಗಿ ಹತ್ತುವಾಗ ಏಕಾ ಏಕಿ ಕಾಲು ಜಾರಿ ಸಾಯಿರಾ ಸಿಲುಕಿದ್ರು.. ಬೋಗಿ ಹಾಗೂ ಪ್ಲಾಟ್ ಫಾರ್ಮ್ ಮಧ್ಯ ಕಾಲು ಸಿಕ್ಕಿಹಾಕಿಕೊಂಡು ಕೆಲ ಸೆಕೆಂಡ್ ಸಾಯಿರಾ ಪರದಾಟ ನಡೆಸಿದ್ರು.
KOLARA; ಮಾಲೂರು ಶಾಸಕನ ಬರ್ತಡೇಯಲ್ಲಿ ಬಿರಿಯಾನಿಗಾಗಿ ಹೋರಾಟ!
ಪಕ್ಕದಲ್ಲೇ ಆಪತ್ಬಾಂಧವನಾಗಿ ನಿಂತಿದ್ದ ಆರಕ್ಷಕ!
ಅನ್ವರ್ ಅಣತಿ ದೂರದಲ್ಲೇ ನಿಂತಿದ್ರು. ಜನರ ಕಿರುಚಾಟ ಕೇಳಿ ಕಾರ್ಯಪ್ರವೃತ್ತರಾದ ಪೇದೆ ಸ್ಥಳಕ್ಕೆ ಧಾವಿಸಿದ್ರು. ಕೂಡ್ಲೆ ಮಹಿಳೆಯನ್ನ ಅನ್ವರ್ ಬಾಷಾ ಹೊರಗೆಳೆದರು. ಸ್ಥಳೀಯರ ಸಹಾಯದಿಂದ ಮಹಿಳೆಯನ್ನ ಮೇಲೆತ್ತಲಾಯ್ತು. ರೈಲು ಕೆಲ ನಿಮಿಷಗಳ ಕಾಲ ನಿಂತಿತ್ತು. ಸುರಕ್ಷಿತವಾಗಿ ಮಹಿಳೆಯನ್ನ ರಕ್ಷಸಿ ಅದೇ ರೈಲಿಗೆ ಕಳುಹಿಸಲಾಯ್ತು.
ಸೊಲ್ಲಾಪುರದಿಂದ ವಾಸ್ಕೊಗೆ ಸಂಬಂಧಿಕರ ಭೇಟಿಗೆ ಬಂದಿದ್ದ ಮಹಿಳೆ. ಅಣ್ಣ ಮಹೀಮ್ ಹಾಗೂ ಕುಟುಂಬದೊಂದಿಗೆ ಬಂದಿದ್ದ ಸಾಯಿರಾ, ವಾಸ್ಕೊದಲ್ಲಿನ ಕುಟುಂಬದ ಕಾರ್ಯಕ್ರಮಕ್ಕೆ ಹೋಗಿದ್ರಂತೆ. ವಾಪಾಸ್ ಗದಗ ಮಾರ್ಗವಾಗಿ ವಿಜಯಪುರ, ಸೊಲ್ಲಾಪುರಕ್ಕೆ ಹೊರಟಿದ್ದ ವೇಳೆ ಘಟನೆ ನಡೆದಿದೆ.
ಬಸವ ಜನ್ಮಭೂಮಿಯಲ್ಲಿ Vijayapura DCಯಿಂದ ಸಾರ್ವಜನಿಕ ಅಹವಾಲು ಸ್ವೀಕಾರ!
ಹುಬ್ಬಳ್ಳಿ-ವಿಜಯಪುರ ಪ್ಯಾಸೆಂಜರ್ ರೈಲು ಹಿಡಿದು ಸಾಯಿರಾ ಕುಟುಂಬ ಸೊಲ್ಲಾಪುರಕ್ಕೆ ಹೊರಟಿತ್ತು. ಬಾಯಾರಿಕೆ ಹಿನ್ನೆಲೆ ನೀರು ತುಂಬಿಕೊಳ್ಳು ಗದಗ ನಿಲ್ದಾಣದಲ್ಲಿ ಇಳಿದಿದ್ದ ವೇಳೆ ಘಟನೆ ನಡೆದಿದೆ.. ಏಕಾಏಕಿ ರೈಲು ಮೂವ್ ಆಗಿದ್ದು ಗೊತ್ತಾಗಲಿಲ್ಲ ಅಂತಾ ಸಾಯಿರಾ ಸಹೋದರ ಮಹೀಮ್ ಏಷ್ಯ ನೆಟ್ ಸುವರ್ಣ ನ್ಯೂಸ್ ಗೆ ತಿಳಿಸಿದ್ರು..
ರೈಲು ಹೊರಟದ್ದನ್ನ ಗಮನಿಸಿ ಓಡಿ ಹೋಗಿ ರೈಲು ಹತ್ತಲು ಮುಂದಾಗಿದ್ದ ಮಹಿಳೆ ಸಿಲುಕಿದ್ದಳು. ಚಲಿಸುತ್ತಿದ್ದ ರೈಲು ಆಯತಪ್ಪಿ ಸಿಲುಕಿ ಪರದಾಡುತ್ತಿದ್ದ ಮಹಿಳೆಯನ್ನ ಗಮನಿಸಿದೆ. ಕೂಡ್ಲೆ ಜನರ ಸಹಾಯದಿಂದ ರಕ್ಷಣೆ ಮಾಡಿದ್ದೇನೆ. ಜೀವ ಉಳಿಸಿದ ಸಾರ್ಥಕ ಭಾವ ಮೂಡಿದೆ ಎನ್ನುತ್ತಾರೆ ಅನ್ವರ್. ಅನ್ವರ್ ಕೆಲಸಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ..