ಹುಬ್ಬಳ್ಳಿ: ಪೊಲೀಸ್‌ ಅಧಿಕಾರಿಯಿಂದ ಮಹಿಳೆಗೆ ಕಿರುಕುಳ?

Kannadaprabha News   | Asianet News
Published : Sep 03, 2020, 10:32 AM IST
ಹುಬ್ಬಳ್ಳಿ: ಪೊಲೀಸ್‌ ಅಧಿಕಾರಿಯಿಂದ ಮಹಿಳೆಗೆ ಕಿರುಕುಳ?

ಸಾರಾಂಶ

ಮಹಿಳೆಗೆ ಕಿರುಕುಳ ನೀಡಿದ ಪೊಲೀಸ್‌ ಅಧಿಕಾರಿ|  ಉನ್ನತ ಮಟ್ಟದ ಅಧಿಕಾರಿಗಳಿಗೆ ದೂರು ನೀಡಿದ ಮಹಿಳೆ| ಯಾವುದೇ ಬಗೆಯ ಆರೋಪ ಕೇಳಿ ಬಂದಿಲ್ಲ. ಆದರೆ, ಆರೋಪ ಬಂದರೆ ತನಿಖೆ ನಡೆಸಲಾಗುವುದು ಎಂದ ಡಿಜಿಪಿ ಪ್ರವೀಣ ಸೂದ್‌| 

ಹುಬ್ಬಳ್ಳಿ(ಸೆ.03): ಹುಬ್ಬಳ್ಳಿ-ಧಾರವಾಡ ಕಮೀಷನರೇಟ್‌ ವ್ಯಾಪ್ತಿಯಲ್ಲಿನ ಹಿರಿಯ ಪೊಲೀಸ್‌ ಅಧಿಕಾರಿಯೋರ್ವರು ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ್ದಾರೆಂಬ ಗುಲ್ಲು ಇಲಾಖೆಯಲ್ಲಿ ಹಬ್ಬಿದೆ. ಈ ಕುರಿತು ಉನ್ನತ ಮಟ್ಟದ ಅಧಿಕಾರಿಗಳಿಗೆ ಆ ಮಹಿಳೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. 

ಆದರೆ, ಈ ಬಗ್ಗೆ ಕೇಳಿದರೆ ಡಿಜಿಪಿ ಪ್ರವೀಣ ಸೂದ್‌ ಅವರು ಬುಧವಾರ ಸಭೆ ನಡೆಸಿದ ಮೇಲೆ ಮಾತನಾಡಿ, ಆ ರೀತಿ ಯಾವುದೇ ಬಗೆಯ ಆರೋಪ ಕೇಳಿ ಬಂದಿಲ್ಲ. ಆದರೆ, ಆರೋಪ ಬಂದರೆ ತನಿಖೆ ನಡೆಸಲಾಗುವುದು ಎಂದು ಹೇಳಿದ್ದಾರೆ.

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಅತಿಥಿ ಕುಲಪತಿಗಳೇ ಗತಿ! 

ಪೊಲೀಸ್‌ ಮಹಾನಿರ್ದೇಶಕರು ಯಾವುದೇ ಬಗೆಯ ಆರೋಪ ಕೇಳಿ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದರೂ ಇಲಾಖೆಯಲ್ಲಿ ಮಾತ್ರ ಗುಲ್ಲು ಬಲು ಜೋರಾಗಿ ಹಬ್ಬಿದೆ. 
 

PREV
click me!

Recommended Stories

ಎಚ್‌ಎಎಲ್ ನಿರ್ಮಿತ ನಾಗರಿಕ ಬಳಕೆಯ ಧ್ರುವ ಹೆಲಿಕಾಪ್ಟರ್ ಹಾರಾಟ ಯಶಸ್ವಿ; ಏನಿದರ ವಿಶೇಷತೆ?
ಜ.4ಕ್ಕೆ ಪ್ರಕೃತಿ ಪ್ರತಿಬಂಬಿಸುವ 23ನೇ ಚಿತ್ರಸಂತೆ