ಬೀದರ್‌: ಆಕಸ್ಮಿಕ ಬೆಂಕಿ, ಸುಟ್ಟು ಕರಕಲಾದ ಬಸ್‌

Kannadaprabha News   | Asianet News
Published : Sep 03, 2020, 10:15 AM IST
ಬೀದರ್‌: ಆಕಸ್ಮಿಕ ಬೆಂಕಿ, ಸುಟ್ಟು ಕರಕಲಾದ ಬಸ್‌

ಸಾರಾಂಶ

ಭವಾನಿ ಟ್ರಾವೆಲ್ಸ್‌ ಬಸ್‌ಗೆ ಆಕಸ್ಮಿಕ ಬೆಂಕಿ| ಬೀದರ್‌ನಿಂದ ಬೆಂಗಳೂರಿಗೆ ಹೊರಟಿದ್ದ ಖಾಸಗಿ ಬಸ್‌| ಪ್ರಯಾಣಿಕರು ಪಾರು| ಗ್ರಾಮಸ್ಥರ ಸಹಾಯದಿಂದ ಬಸ್‌ನಿಂದ ಇಳಿಯುವಲ್ಲಿ ಯಶಸ್ವಿಯಾದ ಪ್ರಯಾಣಿಕರು| 

ಬೀದರ್‌(ಸೆ.03): ಬೀದರ್‌ನಿಂದ ಬೆಂಗಳೂರಿಗೆ ಹೊರಟಿದ್ದ ಭವಾನಿ ಟ್ರಾವೆಲ್ಸ್‌ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಬಸ್‌ ಸುಟ್ಟು ಕರಕಲಾಗಿರುವ ಘಟನೆ ಹುಮನಾಬಾದ್‌ನ ಕನಕಟ್ಟಾ ಗ್ರಾಮದ ಬಳಿ ಬುಧವಾರ ರಾತ್ರಿ ನಡೆದಿದೆ. 

ಅದೃಷ್ಟವಶಾತ್‌ ಬಸ್‌ನಲ್ಲಿದ್ದ 36 ಪ್ರಯಾಣಿಕರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ರಾತ್ರಿ 10ರ ಸುಮಾರಿಗೆ ಧುಮ್ಮನಸೂರ್‌ ಕನಕಟ್ಟಾ ಗ್ರಾಮದ ತಿರುವಿನ ಬಳಿ ಬರುವ ರಸ್ತೆ ಉಬ್ಬಿನ ಮೇಲೆ ಬಸ್‌ ವೇಗವಾಗಿ ಸಾಗುತ್ತಿದ್ದಂತೆ ಬಸ್‌ನ ತಳಭಾಗ ಬಡಿದು ಅದರ ಒಳಗಿದ್ದ ವೈರ್‌ಗಳಿಗೆ ಬೆಂಕಿ ಹೊತ್ತಿಕೊಂಡಿದ್ದು ಅರಿವಿಗೆ ಬಂದಿದೆ. 

ಬೀದರ್‌: ಮಳೆಗೆ ಹಾಳಾಯ್ತು 2 ಕೋಟಿ ರು. ವೆಚ್ಚದ ಕಾಮಗಾರಿ, ಸಚಿವ ಪ್ರಭು ಚವ್ಹಾಣ

ತಕ್ಷಣವೇ ಗ್ರಾಮಸ್ಥರ ಸಹಾಯದಿಂದ ಪ್ರಯಾಣಿಕರು ಬಸ್‌ನಿಂದ ಇಳಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಯಾಣಿಕರು ಸಾಮಾನು, ಸರಂಜಾಮುಗಳೆಲ್ಲವೂ ಬೆಂಕಿಗೆ ಆಹುತಿಯಾಗಿದೆ. ಅಗ್ನಿಶಾಮಕ ದಳದವರು ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 
 

PREV
click me!

Recommended Stories

ಡಿಜಿಪಿಯಾಗಿ ಅಲೋಕ್‌ ಕುಮಾರ್ ಮುಂಬಡ್ತಿ, ಸರ್ಕಾರದ ವಿರುದ್ಧ 8 ತಿಂಗಳ ಕಾನೂನು ಹೋರಾಟಕ್ಕೆ ಜಯ!
ರಾಮನಗರ: ರಸ್ತೆಗೆ ಕುರಿಗಳು ಅಡ್ಡಿ, ಹಾರ್ನ್ ಮಾಡಿದ್ದಕ್ಕೆ ಬಸ್ ಚಾಲಕನ ಮೇಲೆ ಗ್ರಾಮಸ್ಥರಿಂದ ಹಲ್ಲೆ!