ಮಂಗಳೂರು ಗಲಭೆ ನಡೆದ ನಂತರ ಇದೀಗ ಪೊಲೀಸ್ ಅಧಿಕಾರಿ ಹಾಗೂ ಕುಟುಂಬಕ್ಕೆ ಭಾರೀ ಬೆದರಿಕೆ ಒಡ್ಡಲಾಗಿದೆ. ಅಧಿಕಾರಿಗಳ ಮಕ್ಕಳು ಕಲಿಯುವ ಶಾಲೆ, ಅವರ ಪತ್ನಿ ಕುಟುಂಬಸ್ಥರ ಫೋಟೋಗಳನ್ನು ವೈರಲ್ ಮಾಡಲಾಗಿದೆ.
ಮಂಗಳೂರು(ಡಿ.24): ಮಂಗಳೂರಿನಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಗಲಭೆಗೆ ಸಂಬಂಧಿಸಿ ಇದೀಗ ಪೊಲೀಸರ ಕುಟುಂಬಕ್ಕೆ ಬೆದರಿಕೆ ಉಂಟಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಐಪಿಎಸ್ ಹರ್ಷ ಹೇಳಿದ್ದಾರೆ.
undefined
ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್ ಐಪಿಎಸ್ ಹರ್ಷ ಮಾತನಾಡಿ, ಕದ್ರಿ ಇನ್ಸ್ಪೆಕ್ಟರ್ ಶಾಂತರಾಂ ಮತ್ತು ಅವರ ಕುಟುಂಬಕ್ಕೆ ಭಾರೀ ಬೆದರಿಕೆ ಬಂದಿದೆ. ಅವರ ಹೆಂಡತಿ ಮತ್ತು ಮಕ್ಕಳ ಫೋಟೋ ವೈರಲ್ ಮಾಡಿದ್ದಾರೆ. ಮಕ್ಕಳು ಕಲಿಯೋ ಶಾಲೆ, ಪತ್ನಿಯ ಮನೆ ಎಲ್ಲವನ್ನೂ ಅವರು ನೋಟ್ ಮಾಡಿದ್ದಾರೆ. ಹೀಗಾಗಿ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಾಂತರಾಮ್ ಅವರನ್ನು ಪೊಲೀಸ್ ಠಾಣೆಯಿಂದ ಸದ್ಯ ಹೊರಗೆ ಕಳುಹಿಸಿದ್ದೇವೆ ಎಂದಿದ್ದಾರೆ.
ಕಮಿಷನರ್ ಮನವಿಗೆ ಮಾಸ್ ರಿಪ್ಲೈ: ಮಂಗಳೂರು ಗಲಭೆಯ 1000ಕ್ಕೂ ಹೆಚ್ಚು ವಿಡಿಯೋ ಲಭ್ಯ
ಸದ್ಯ ಆ ಠಾಣೆಗೆ ಗಿರೀಶ್ ಎಂಬ ಅಧಿಕಾರಿಯನ್ನ ನೇಮಿಸಲಾಗಿದೆ. ಸಿಎಂ ಯಡಿಯೂರಪ್ಪಗೆ ನಾನು ಯಾವುದೇ ವರದಿ ಕೊಟ್ಟಿಲ್ಲ. ಅವರಿಗೆ ಮೌಖಿಕವಾಗಿ ಮಾತ್ರ ವರದಿ ಒಪ್ಪಿಸಿದ್ದೇನೆ ಎಂದು ಹರ್ಷಾ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದ ಮಂಗಳೂರು ಗಲಭೆಯ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ
24 ಪ್ರಕರಣ ದಾಖಲು:
ಮಂಗಳೂರು ಗಲಭೆ ಸಂಬಂಧ ಈವರೆಗೆ ಒಟ್ಟು 24 ಪ್ರಕರಣ ದಾಖಲಾಗಿದೆ. ಬಂದರು ಠಾಣೆಯಲ್ಲಿ 10, ಪಾಂಡೇಶ್ವರ 10 ಮತ್ತು ಗ್ರಾಮಾಂತರ ಠಾಣೆ 01 ಪ್ರಕರಣ ದಾಖಲಾಗಿದೆ. ಪೊಲೀಸರಿಗೆ ಬಂದಿರೋ ಬೆದರಿಕೆಗಳನ್ನ ತನಿಖೆ ಮಾಡಲು ವಿಶೇಷ ಸೈಬರ್ ಕ್ರೈಂ ಟೀಂ ರೆಡಿ ಮಾಡಿದ್ದೇವೆ ಎಂದು ಅವರು ಹೇಳಿದ್ದಾರೆ.
ಮಂಗಳೂರು ಗಲಭೆ: ಪೊಲೀಸ್ ಪ್ರವೇಶ ಸಮರ್ಥಿಸಿಕೊಂಡ ಹೈಲೆಂಡ್ ಆಸ್ಪತ್ರೆ