ಮಾಸ್ಕ್‌ ಧರಿಸದವರಿಗೆ ರಸ್ತೆಯಲ್ಲೇ ದಂಡ ವಿಧಿಸಿದ ಇನ್ಸ್‌ಪೆಕ್ಟರ್‌..!

By Kannadaprabha News  |  First Published Jul 7, 2020, 12:19 PM IST

ಕೋಲಾರದಲ್ಲಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಾಸ್ಕ್‌ ಧರಿಸದೇ, ಅನವಶ್ಯಕವಾಗಿ ಓಡಾಡುವವರಿಗೆ ಸ್ಥಳೀಯ ಪ.ಪಂ. ಅಧಿಕಾರಿಗಳೊಂದಿಗೆ ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ್ ದಂಡ ವಿಧಿಸಿದ್ದಾರೆ.


ಕೋಲಾರ(ಜು.07): ಪೋಲಿಸರು ಹಾಗೂ ಅಧಿಕಾರಿಗಳ ಭಯದಿಂದ ಮಾಸ್ಕ್‌ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವ ಬದಲು ತಮ್ಮ ಪ್ರಾಣ ಕಾಪಾಡಲು ಹಾಗೂ ತಮ್ಮ ಮನೆಯವರ ಆರೋಗ್ಯಕ್ಕಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಆರಕ್ಷಕ ವೃತ್ತ ನಿರೀಕ್ಷಕ ಮಂಜುನಾಥ್‌ ತಿಳಿಸಿದರು.

ಗುಡಿಬಂಡೆ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮಾಸ್ಕ್‌ ಧರಿಸದೇ, ಅನವಶ್ಯಕವಾಗಿ ಓಡಾಡುವವರಿಗೆ ಸ್ಥಳೀಯ ಪ.ಪಂ. ಅಧಿಕಾರಿಗಳೊಂದಿಗೆ ದಂಡ ವಿಧಿಸುವುದರ ಜೊತೆಗೆ ಹೋಟೆಲ್‌ಗಳಲ್ಲಿನ ಸುಚಿತ್ವವನ್ನು ಪರಿಶೀಲನೆ ಮಾಡಿ ಮಾತನಾಡಿದ ಅವರು, ಸರ್ಕಾರ ಕೊರೋನಾ ವೈರಸ್‌ ಹರಡದಂತೆ ಸೂಚನೆ ನೀಡಿರುವ ಎಲ್ಲಾ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಆದರೆ ಸಾರ್ವಜನಿಕರು ಯಾವುದೇ ಭಯವಿಲ್ಲದೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರುತ್ತಿರುವುದು ವಿಷಾದನೀಯವಾದ ಸಂಗತಿ ಎಂದರು.

Latest Videos

undefined

ಹೋಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿ

ಪಟ್ಟಣದಲ್ಲಿ ಹೋಟೆಲ್‌ಗಳಲ್ಲಿನ ಸ್ವಚ್ಛತೆಯನ್ನು ಕಾಪಾಡಬೇಕು. ಟೀ, ಹಾಗೂ ಉಪಹಾರ ನೀಡಲು ಪುನಃ ಬಳಕೆಯಾಗದಂತಹ ತಟ್ಟೆಗಳನ್ನು ಬಳಸಬೇಕು ಹಾಗೂ ಪಾತ್ರೆಗಳನ್ನು ತೊಳೆಯಲು ಬಿಸಿ ನೀರನ್ನು ಬಳಸಬೇಕು. ಗ್ರಾಹಕರ ರಕ್ಷಣೆಯ ಹಿತದೃಷ್ಟಿಯಿಂದ ತಾವು ಈ ಎಲ್ಲಾ ಅಗತ್ಯ ಕ್ರಮಗಳನ್ನು ತಪ್ಪದೇ ತೆಗೆದುಕೊಳ್ಳಬೇಕೆಂದು ಹೋಟೆಲ್‌ ಮಾಲೀಕರಿಗೆ ಸೂಚನೆ ನೀಡಿದರು.

ಕೊರೋನಾ ಭೀತಿ: ಪ್ರವಾಸಿಗರು ಬಾರದಂತೆ ಬಸ್‌ ತಡೆದ ಗ್ರಾಮಸ್ಥರು

ಈ ವೇಳೆ 25 ಕ್ಕೂ ಹೆಚ್ಚು ಜನರಿಗೆ ದಂಡ ವಿಧಿಸಿದ್ದು, ಸುಮಾರು 3600 ರಷ್ಟುದಂಡ ವಸೂಲಿಯಾಗಿದೆ ಎಂದು ಪ.ಪಂ. ಆರೋಗ್ಯ ನಿರೀಕ್ಷಕ ಶಿವಣ್ಣ ತಿಳಿಸಿದರು. ಈ ವೇಳೆ ಪ.ಪಂ. ಸಿಬ್ಬಂದಿ ಹಾಗೂ ಪೊಲೀಸ್‌ ಸಿಬ್ಬಂದಿ ಹಾಜರಿದ್ದರು.

click me!