ಶಿವಮೊಗ್ಗ: ಪೊಲೀಸರ ಅಚ್ಚುಮೆಚ್ಚಿನ ರಮ್ಯಾ ಇನ್ನಿಲ್ಲ

By Kannadaprabha News  |  First Published Aug 27, 2019, 11:38 AM IST

ಶಿವಮೊಗ್ಗದಲ್ಲಿ 11 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶ್ವಾನ ದಳದ ಹಿರಿಯ ಶ್ವಾನ ರಮ್ಯಾ ಮೃತಪಟ್ಟಿದೆ. ಶಿವಮೊಗ್ಗಕ್ಕೆ ಶ್ವಾನ ದಳದಲ್ಲಿ ಸೇರಿದ ನಂತರ ಒಟ್ಟು 7 ಪ್ರಕರಣಗಳನ್ನು ಭೇದಿಸಿದೆ. ತನ್ನ ಸೇವಾವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಅನೇಕ ಅಪರಾಧ ಪ್ರಕರಣ ಪತ್ತೆ ಹಚ್ಚಿದ ರಮ್ಯಾ ವಯೋ ಸಹಜವಾಗಿ ಮೃತಪಟ್ಟಿದೆ.


ಶಿವಮೊಗ್ಗ(ಆ.27): ಹನ್ನೊಂದು ವರ್ಷಗಳ ಕಾಲ ಇಲ್ಲಿನ ಪೊಲೀಸ್‌ ಇಲಾಖೆಯಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿ, 15 ದಿನಗಳ ಹಿಂದೆಯಷ್ಟೇ ಸೇವೆಯಿಂದ ನಿವೃತ್ತಿ ಪಡೆದಿದ್ದ ಇಲ್ಲಿನ ಪೊಲೀಸ್‌ ಶ್ವಾನದಳದ ಹಿರಿಯ ಸದಸ್ಯ ರಮ್ಯಾ ಹೆಸರಿನ ಶ್ವಾನ ಸೋಮವಾರ ಮೃತಪಟ್ಟಿದೆ.

ತನ್ನ ಸೇವಾವಧಿಯಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ ಅನೇಕ ಅಪರಾಧ ಪ್ರಕರಣ ಪತ್ತೆ ಹಚ್ಚಿದ ರಮ್ಯಾ ವಯೋ ಸಹಜವಾಗಿ ಮೃತಪಟ್ಟಿದೆ ಎಂದು ಶ್ವಾನ ದಳದ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಎಎಸ್‌ಐ ಜಯಾನಾಯ್ಕ್ ತಿಳಿಸಿದ್ದಾರೆ. 2007ರ ಜನವರಿ 10 ರಂದು ಜನಿಸಿದ್ದ, ಈ ನಾಯಿಗೆ ಬೆಂಗಳೂರಿನ ಆಡುಗೋಡಿನಲ್ಲಿ ತರಬೇತಿ ನೀಡಲಾಗಿತ್ತು.

Tap to resize

Latest Videos

ಶಿವಮೊಗ್ಗ ಜಿಲ್ಲಾ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

2008 ಜೂನ್‌ 15 ರಂದು ಶಿವಮೊಗ್ಗಕ್ಕೆ ಇದನ್ನು ಕರೆ ತಂದು ಸೇವೆಗೆ ನಿಯೋಜಿಸಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ 7 ಪ್ರಮುಖ ಅಪರಾಧ ಪ್ರಕರಣಗಳನ್ನು ಭೇದಿಸಿತ್ತು. ಆ. 7 ರಂದು ಇದು ನಿವೃತ್ತಿಯಾಗಿತ್ತು.

'ಯಡಿಯೂರಪ್ಪ ಕಾಲು ಹಿಡಿದು ಕೇಳುತ್ತೇನೆ; ಕಲ್ಲೊಡ್ಡುಹಳ್ಳ ಯೋಜನೆ ಬಿಡಿ'..!

ಇಂದು ಇದರ ಅಂತ್ಯ ಸಂಸ್ಕಾರವನ್ನು ಪೊಲೀಸ್‌ ಸಿಬ್ಬಂದಿ ಗೌರವದೊಂದಿಗೆ ನಡೆಸಿದರು. ಇದರ ಜೊತೆಗೆ ರಾಖಿ ಎಂಬ ಇನ್ನೊಂದು ಶ್ವಾನವೂ ನಿವೃತ್ತಿಯಾಗಿದೆ. ಇದಲ್ಲದೆ, ಇನ್ನೂ ಎರಡು ಶ್ವಾನಗಳು ಸದ್ಯ ಕರ್ತವ್ಯ ನಿರ್ವಹಿಸುತ್ತಿವೆ.

ಸ್ಫೋಟಕ ಪತ್ತೆ​ದಾರಿ ನೈನಾ ಇನ್ನು ನೆನಪು ಮಾತ್ರ, ಭಾವುಕರಾದ ಸಿಬ್ಬಂದಿ

click me!