ಯಾವ ಖಡಕ್ ಪೊಲೀಸ್ ಅಧಿಕಾರಿಗೂ ಈಕೆ ಕಡಿಮೆ ಇರಲಿಲ್ಲ. ತಲೆನೋವಾಗಿದ್ದ ಅನೇಕ ಪ್ರಕರಣಗಳನ್ನು ಪತ್ತೆ ಮಾಡಿದ್ದ ಖ್ಯಾತಿ ಸಲ್ಲುತ್ತದೆ. ಪತ್ತೆದಾರಿ ಶ್ವಾನವೊಂದು ಕೊನೆ ಉಸಿರು ಎಳೆದಿದ್ದು ಸಕಲ ಸರ್ಕಾರಿ ಗೌರವಗಳೊಂದಿಗೆ ಮಣ್ಣಾಗಿದೆ.
ಚಿಕ್ಕಮಗಳೂರು[ನ.12] ಏಳು ವರ್ಷದಲ್ಲಿ ಎಂಟು ಮರ್ಡರ್, 15 ಕಳ್ಳತನ, 30 ಅದ್ಭುತ ಸುಳಿವು ಸೇರಿದಂತೆ 105 ಪ್ರಕರಣಗಳನ್ನ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಚಿಕ್ಕಮಗಳೂರಿನ ಪೊಲೀಸ್ ಡಾಗ್ ಡೈಸಿ ಅನಾರೋಗ್ಯದಿಂದ ಸಾವನ್ನಪ್ಪಿದೆ.
ಕಳೆದ ಮೂರು ತಿಂಗಳಿಂದ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಡೈಸಿಗೆ ಸಾಕಷ್ಟು ಚಿಕಿತ್ಸೆ ಕೊಡಿಸಿದ್ರು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದೆ. ಚಿಕ್ಕಮಗಳೂರು ಪೊಲೀಸರ ನೆಚ್ಚಿನ ಶ್ವಾನವಾಗಿದ್ದ ಡೈಸಿಗೆ ಇಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸಾಕುಪ್ರಾಣಿಗಳಿಗೆಂದೇ ಇದೆ ವಿಶಿಷ್ಟ ರೆಸಾರ್ಟ್
ಶ್ವಾನದ ಅಂತಿಮ ದರ್ಶನ ಪಡೆಯುವಾಗ ಅಧಿಕಾರಿಗಳ ಕಣ್ಣಂಚಿನಲ್ಲೂ ಒಂದೆರಡು ಹನಿ ನೀರಿತ್ತು. ಅನೇಕ ಪ್ರಕರಣಗಳಲ್ಲಿ ಜತೆಯಾಗಿದ್ದ ಜತೆಗಾರನ ಕಳೆದುಕೊಂಡ ನೋವಿತ್ತು.