* ಸೈಲೆನ್ಸರ್‌ಗಳನ್ನು ಸೈಲೆಂಟ್ ಮಾಡಿಸಿದ ಪೊಲೀಸರು
* ಒಂದು ವಾರ ಕಾರ್ಯಾಚರಣೆ ನಡೆಸಿ ಸೈಲೆನ್ಸರ್ ಸಂಗ್ರಹ
* ಸಂಗ್ರಹಿಸಿದ ಸೈಲೆನ್ಸರ್‌ಗಳನ್ನು ರೋಡ್ ರೋಲರ್‌ನಿಂದ ನಾಶ
ವರದಿ: ಜಗನ್ನಾಥ ಪೂಜಾರ್, ಏಷ್ಯಾನೆಟ್ ಸುವರ್ಣನ್ಯೂಸ್, ರಾಯಚೂರು
ರಾಯಚೂರು(ಜೂ.25): ರಾಯಚೂರು ಜಿಲ್ಲೆಯಾದ್ಯಂತ ಕರ್ಕಶ ಶಬ್ದ ಮತ್ತು ಭಾರೀ ಹೊಗೆಬಿಡುವ ವಾಹನಗಳ ಓಡಾಟ ಹೆಚ್ಚಾಗಿತ್ತು. ಯಾರ ಬೇಕಾದರೂ ತಮ್ಮ ವಾಹನಗಳಿಗೆ ಮನಬಂದಂತೆ ಮಾಡಿಪೈ ಮಾಡಿಕೊಂಡು ಹೊತ್ತಿಲ್ಲದ ಹೊತ್ತಿನಲ್ಲಿ ಓಡಾಟ ಮಾಡಿ ಸಾರ್ವಜನಿಕರಿಗೆ ಕಿರಿಕಿರಿ ಆಗುವ ರೀತಿಯಲ್ಲಿ ಶಬ್ದ ಮಾಡುತ್ತಾ ತಿರುಗಾಟ ಮಾಡುವರ ಸಂಖ್ಯೆ ಹೆಚ್ಚಾಗಿತ್ತು. ಇದನ್ನು ಗಮನಿಸಿ ಪೊಲೀಸರು ಕೈಗೆ ಸಿಕ್ಕಾಗ ದಂಡ ಹಾಕಿ ವಾಹನಗಳನ್ನು ಬಿಟ್ಟು ಕಳುಹಿಸುತ್ತಿದ್ರು. ಆದ್ರೂ ಎಚ್ಚತ್ತುಕೊಳ್ಳದ ವಾಹನ ಸವಾರರು ಮತ್ತೆ ತಮ್ಮ ಹಳೆಚಾಳಿ ಮುಂದುವರೆಸಿದ್ರು.
undefined
ಜಿಲ್ಲೆಯಾದ್ಯಂತ ಒಂದು ವಾರ ಪೊಲೀಸರ ಕಾರ್ಯಾಚರಣೆ:
ಕರ್ಕಶ ವಾಹನ ಓಡಾಟ ಹೆಚ್ಚಾಗಿರುವ ಬಗ್ಗೆ ಸಾರ್ವಜನಿಕರಿಂದ ಹತ್ತಾರು ದೂರುಗಳು ಬಂದಿದ್ದವು, ಸಾರ್ವಜನಿಕರ ದೂರುಗಳನ್ನು ಆಧರಿಸಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದರು. ಜಿಲ್ಲೆಯಲ್ಲಿ ಬೈಕ್ ಮತ್ತು ವಾಹನಗಳಿಂದ ಅತೀ ಹೆಚ್ಚು ಹೊಗೆ ಸೋಸುವ ವಾಹನಗಳು, ಅತೀ ಹೆಚ್ಚು ಶಬ್ದ ಮಾಡುವ ಬೈಕ್ ಗಳನ್ನು ಟಾರ್ಗೆಟ್ ಮಾಡಿ ಬೈಕ್ ಗಳನ್ನು ಹಿಡಿದು ಅವುಗಳ ಸೈಲೆನ್ಸರ್ ಗಳನ್ನು ಕಿತ್ತುಕೊಂಡು ವಾಹನ ಸವಾರರಿಗೆ ದಂಡ ಹಾಕಿದವರು.
ರಾಯಚೂರಿಗೆ ಜವಳಿ ಆಯ್ತು, ಈಗ ಡ್ರಗ್ ಪಾರ್ಕ್: ಮುರುಗೇಶ್ ನಿರಾಣಿ
ದಂಡನೂ ಬಿತ್ತು, ಬೈಕ್‌ನ ಸೈಲೆನ್ಸರ್‌ನೂ ಹೋಯ್ತು:
ಇತ್ತೀಚೆಗೆ ಶಾಲಾ- ಕಾಲೇಜುಗಳ ಮುಂದೆ ಕರ್ಕಶ ಶಬ್ದ ಮಾಡುತ್ತಾ ಓಡಾಟ ಮಾಡುವ ಬೈಕ್ ಗಳ ಕಿರಿಕಿರಿ ಹೆಚ್ಚಾಗಿತ್ತು. ವಿದ್ಯಾರ್ಥಿಗಳು ತರಗತಿಯಲ್ಲಿ ಕುಳಿತ ಪಾಠ ಕೇಳುವ ವೇಳೆ ಕಿಡಿಗೇಡಿಗಳು ಕಾಲೇಜಿನ ಹೊರಭಾಗದಲ್ಲಿ ಬಂದು ಮನಬಂದಂತೆ ಶಬ್ದ ಮಾಡುವುದು ಕಾಮಾನ್ ಆಗಿತ್ತು. ಹೀಗಾಗಿ ಪೊಲೀಸರು ಕರ್ಕಶ ಶಬ್ದ ಮಾಡುವ ಬೈಕ್ ಗಳನ್ನು ವಶಕ್ಕೆ ಪಡೆದು ಬೈಕ್ ಗಳಿಗೆ ಕರ್ಕಶ ಶಬ್ದ ಮಾಡಲು ಅಳವಡಿಕೆ ಮಾಡಿದ ಸೈಲೆನ್ಸರ್ ಗಳನ್ನು ಕಿತ್ತುಕೊಂಡು ಬೈಕ್ ಗೆ ದಂಡ ಹಾಕಿ ವಾಹನ ಸವಾರರ ವಿರುದ್ಧ ಕೇಸ್ ಕೂಡ ಬುಕ್ ಮಾಡಿದ್ರು.
ಬೈಕ್ ಜೊತೆಗೆ ಲಘು ವಾಹನಗಳಿಗೂ ದಂಡ:
ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಸಮ್ಮುಖದಲ್ಲಿ ಒಂದು ವಾರಗಳ ಕಾಲ ಸತತ ಕಾರ್ಯಾಚರಣೆ ನಡೆಸಿದರು. ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ಬೈಕ್ ಸವಾರರಿಗೆ ಹಾಗೂ ಲಘು ವಾಹನಗ ಮಾಲೀಕರಿಗೂ ಪೊಲೀಸರು ದಂಡ ಹಾಕಿದರು. ಭಾರತೀಯ ಮೋಟಾರು ವಾಹನ (ಐಎಂವಿ) ಕಾಯ್ದೆಯಡಿ ಒಟ್ಟು 197 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಬೈಕ್ ಮಾಲೀಕರಿಗೆ 1,500 ರೂ. ಮತ್ತು ಲಘು ವಾಹನಗಳಿಗೆ 3 ಸಾವಿರ ದಂಡ ವಿಧಿಸಲಾಗಿದ್ದು, ಒಟ್ಟು 2,95,500 ದಂಡ ಸಂಗ್ರಹಿಸಲಾಗಿದೆ.
ಸಂಗ್ರಹಿಸಿದ ಸೈಲೆನ್ಸರ್‌ಗಳನ್ನು ರೋಡ್ ರೋಲರ್‌ನಿಂದ ನಾಶ
ರಾಯಚೂರು ಪೊಲೀಸ್ ಮೈದಾನದಲ್ಲಿ ಇರುವ ಡಿಆರ್ ರಸ್ತೆಯಲ್ಲಿ ಪೊಲೀಸರು ಜಪ್ತಿ ಮಾಡಿದ ಸೈಲೆನ್ಸರ್ ಗಳನ್ನು ಸಾಲಾಗಿ ಇಟ್ಟು ಜೋಡಿಸಲಾಗಿತ್ತು.ಆ ಬಳಿಕ ಜಿಲ್ಲೆಯ ಎಲ್ಲಾ ಪೊಲೀಸರ ಸಮ್ಮುಖದಲ್ಲಿ ಅದರ ಮೇಲೆ ರೋಡ್ ರೋಲರ್ಓ ಡಿಸಿ ಎಲ್ಲಾ ಸೈಲೆನ್ಸರ್‌ಗಳನ್ನು ನಾಶಪಡಿಸಲಾಯ್ತು. ಒಟ್ಟಿನಲ್ಲಿ ಟ್ರಾಫಿಕ್ ರೂಲ್ಸ್ ಗಳನ್ನು ಮರೆತು ಮನಬಂದಂತೆ ಓಡಾಟ ಮಾಡುವ ಕಿಡಿಗೇಡಿಗಳ ವಾಹನಗಳ ಸೈಲೆನ್ಸರ್ ಗಳನ್ನು ಕಿತ್ತುಕೊಂಡು ನಾಶ ಮಾಡಿ ಸದ್ಯಕ್ಕೆ ಬ್ರೇಕ್ ಹಾಕಿದ್ದಾರೆ.