* ವಿಜಯಪುರ ನಗರದ ರೇಲ್ವೆ ಸ್ಟೇಷನ್, ಗೋಳಗುಮ್ಮಟ, ಕೀರ್ತಿ ನಗರ ಸೇರಿದಂತೆ ವಿವಿಧೆಡೆ ಭೂಕಂಪನ
* ಮನಗೂಳಿ ಗ್ರಾಮದಲ್ಲಿ ಕಳೆದ ರಾತ್ರಿ 10 ಗಂಟೆ 46 ನಿಮಿಷಕ್ಕೆ ಕಂಪಿಸಿದ ಭೂಮಿ
* ಭೂಕಂಪನವಾಗುತ್ತಿದ್ದಂತೆ ಭಯಭೀತರಾದ ಮನಗೂಳಿ ಗ್ರಾಮದ ಜನತೆ
ವಿಜಯಪುರ(ಜೂ.25): ವಿಜಯಪುರ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ನಿನ್ನೆ(ಶುಕ್ರವಾರ) ರಾತ್ರಿ ಲಘು ಭೂಕಂಪನ ಸಂಭವಿಸಿದೆ. ವಿಜಯಪುರ ನಗರದ ರೇಲ್ವೆ ಸ್ಟೇಷನ್, ಗೋಳಗುಮ್ಮಟ, ಕೀರ್ತಿ ನಗರ ಸೇರಿದಂತೆ ವಿವಿಧೆಡೆ ಭೂಮಿ ಕಂಪಿಸಿದ ಅನುಭವವಾಗಿದೆ ಅಂತ ತಿಳಿದು ಬಂದಿದೆ.
ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದಲ್ಲಿ ಕಳೆದ ರಾತ್ರಿ 10 ಗಂಟೆ 46 ನಿಮಿಷಕ್ಕೆ ಭೂಕಂಪನವಾಗಿದೆ. ರಾತ್ರಿ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೆ ಮನಗೂಳಿ ಗ್ರಾಮದ ಜನತೆ ಭಯಭೀತರಾಗಿದ್ದಾರೆ.
ಅಫ್ಘಾನಿಸ್ತಾನ ಬಳಿಕ ಹಾಸನದಲ್ಲೂ ಭೂಕಂಪನ: ಬೆಚ್ಚಿಬಿದ್ದ ಜನತೆ
ಈ ಹಿಂದೆಯೂ ಹಲವು ಬಾರಿ ಮನಗೂಳಿಯಲ್ಲಿ ಭೂಕಂಪನ ಆಗಿತ್ತು. ಕಳೆದ ಜನೆವರಿ ಹಾಗೂ ಮಾರ್ಚ್ ತಿಂಗಳಲ್ಲೂ ಸಹ ಭೂಮಿ ಕಂಪಿಸಿತ್ತು. ಇದೀಗ ಮೂರು ತಿಂಗಳ ಬಳಿಕ ಮತ್ತೆ ಲಘು ಭೂಕಂಪನ ಸಂಭವಿಸಿದೆ. ಈ ವೇಳೆ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ತಂಡ ಸೇರಿದಂತೆ ಹಲವು ವಿಜ್ಞಾನಿಗಳು ಭೇಟಿ ನೀಡಿದ್ದರು.