ಹಾವೇರಿಯ ರಾಣೆಬೆನ್ನೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಪ್ರಚಾರ ಕಾರ್ಯಕ್ಕೆ ಪೊಲೀಸರಿಂದ ಬ್ರೇಕ್ ಬಿದ್ದಿದೆ.
ಹಾವೇರಿ (ನ.29): ರಾಜ್ಯದಲ್ಲಿ ಉಪ ಚುನಾವಣಾ ಅಖಾಡ ರಂಗೇರಿದೆ. 15 ಕ್ಷೇತ್ರಗಳಲ್ಲಿ ನಾಯಕರು ಬಿರುಸಿನ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಇತ್ತ ರಾಣೆಬೆನ್ನೂರಿನಲ್ಲಿ ಪ್ರಚಾರ ಕಾರ್ಯಕ್ಕೆ ಖಾಕಿ ಪಡೆಯಿಂದ ಬ್ರೇಕ್ ಬಿದ್ದಿದೆ.
ರಾಣೇಬೆನ್ನೂರು ಕ್ಷೇತ್ರದಲ್ಲಿ ನಡೆಯುತ್ತಿರುವ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಅರುಣ್ ಕುಮಾರ್ ಪೂಜಾರ್ ಕಣಕ್ಕೆ ಇಳಿದಿದ್ದು, ಇವರ ಪರವಾಗಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರಚಾರಕ್ಕೆ ಆಗಮಿಸಿದ್ದು ಈ ನಿಟ್ಟಿನಲ್ಲಿ ನಡೆಯಬೇಕಿದ್ದ ಬೈಕ್ ರ‍್ಯಾಲಿಗೆ ಖಾಕಿ ಪಡೆ ತಡೆ ಒಡ್ಡಿದೆ.
undefined
BSY ಪ್ಯಾಂಟ್, ಶರ್ಟನ್ನು ವಿಶ್ವನಾಥ್ ಹರಿದು ಹಾಕ್ತಾರೆ: ಡಿಕೆಶಿ...
ರಾಣೇಬೆನ್ನೂರು ತಾಲೂಕಿನ ತುಮ್ಮಿನಕಟ್ಟೆಯಲ್ಲಿ ನಡೆಯಬೇಕಿದ್ದ ರ‍್ಯಾಲಿಗೆ ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಇಲ್ಲಿನ ಹೆಲಿಪ್ಯಾಡ್ ನಿಂದ ವೇದಿಕೆವರೆಗೂ ಕೂಡ ರ‍್ಯಾಲಿ ನಡೆಸಲು ಕಾರ್ಯಕರ್ತರು ಸಜ್ಜಾಗಿದ್ದರು. ಆದರೆ ಇದಕ್ಕೆ ತಡೆ ಒಡ್ಡಲಾಯಿತು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಸ್ಥಳಕ್ಕೆ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಭದ್ರತಾ ದೃಷ್ಟಿಯಿಂದ ಅವಕಾಶ ನಿರಾಕರಿಸಿದ್ದು, ಕಾರ್ಯಕರ್ತರಿಗೆ ತಣ್ಣೀರು ಎರಚಿದ್ದಾರೆ.
ಡಿಸೆಂಬರ್ 5 ರಂದು ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.