ಹಾವು ಬದುಕಿಸಲು ಹೋಗಿ ಇಬ್ಬರ ಜೀವ ತೆಗೆದ ಸರ್ಕಾರಿ ಬಸ್

By Web Desk  |  First Published Nov 29, 2019, 11:00 AM IST

ಬೈಕ್ ಗೆ ಡಿಕ್ಕಿ ಹೊಡೆದ ಈಶಾನ್ಯ ಸಾರಿಗೆ ಬಸ್| ಸ್ಥಳದಲ್ಲೇ ಇಬ್ಬರ ದುರ್ಮರಣ| ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಬಳಿ ನಡೆದ ಘಟನೆ| ಹಾವು ಬದುಕಿಸಲು ಹೋಗಿ ಬೈಕ್ ಗೆ ಡಿಕ್ಕಿ ಹೊಡೆದ ಬಸ್|


ಕೊಪ್ಪಳ[ನ.29]: ಸರ್ಕಾರಿ ಬಸ್ ವೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಶಿಕ್ಷಕರು ಮೃತಪಟ್ಟ ಜಿಲ್ಲೆಯ ಗಂಗಾವತಿ ತಾಲೂಕಿನ ಸಂಗಾಪುರ ಗ್ರಾಮದ ಬಳಿ ಘಟನೆ ಗುರುವಾರ ತಡರಾತ್ರಿ ನಡೆದಿದೆ. ಮೃತರನ್ನು ಪತಿ ಮಹಮ್ಮದ್ ಸಲಾವೂದ್ದೀನ್ (30) ಪತ್ನಿ ಲಿಖಹತ್ (28) ಎಂದು ಗುರುತಿಸಲಾಗಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

Tap to resize

Latest Videos

ರಸ್ತೆ ಅಡ್ಡಲಾಗಿ ಬಂದ ಹಾವು ಬದುಕಿಸಲು ಹೋಗಿದ್ದ ಈಶಾನ್ಯ ಸಾರಿಗೆ ಬಸ್  ಬೈಕ್ ಗೆ  ಬಸ್ ಡಿಕ್ಕಿ ಹೊಡೆದಿದ್ದರಿಂದ ಈ ದುರ್ಘನೆ ಸಂಭವಿಸಿದೆ. ಬಸ್ ಬೈಕ್ ಗೆ ಡಿಕ್ಕಿ ಹೊಡೆದ ಸ್ಥಳದಲ್ಲೇ ದಂಪತಿ ಸಾವನ್ನಪ್ಪಿದ್ದಾರೆ.

ಈ ಸಂಬಂಧ ಗಂಗಾವತಿ ಗ್ರಾಮೀಣ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

click me!