ಬಿಜೆಪಿ ಅಭ್ಯರ್ಥಿ ಕುಮಟಳ್ಳಿಗೆ ಸ್ವ ಗ್ರಾಮದಲ್ಲಿಯೇ ಶಾಕ್ !

By Web DeskFirst Published Nov 29, 2019, 10:45 AM IST
Highlights

ರಾಜ್ಯದಲ್ಲಿ ಇದೇ ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯುತ್ತಿದ್ದು, ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಹೇಶ್ ಕುಮಟಳ್ಳಿಗೆ ಸ್ವಗ್ರಾಮದಲ್ಲಿಯೇ ಶಾಕ್ ಎದುರಾಗಿದೆ.

ಅಥಣಿ [ನ.29] : ಅಥಣಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿರುವ ಮಹೇಶ್ ಕುಮಟಳ್ಳಿಗೆ ಸ್ವಗ್ರಾಮದಲ್ಲಿಯೇ ಶಾಕ್ ಎದುರಾಗಿದೆ. 

ಇದೇ ಡಿಸೆಂಬರ್ 5 ರಂದು ರಾಜ್ಯದ 15 ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯುತ್ತಿದ್ದು,  ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಯುತ್ತಿದೆ. 

ನಾಯಕರು, ಅಭ್ಯರ್ಥಿಗಳು ಕೆಲ ದಿನಗಳು ಇರುವ ಈ ಸಂದರ್ಭದಲ್ಲಿ ನಿರಂತರ ಗೆಲುವಿಗಾಗಿ ಶ್ರಮಿಸುತ್ತಿದ್ದು, ಇದೀಗ ಸ್ವಗ್ರಾಮದಲ್ಲಿಯೇ ಅಥಣಿ ಕ್ಷೇತ್ರದ ಸ್ಪರ್ಧಿ ಮಹೇಶ್ ಕುಮಟಳ್ಳಿಗೆ ಅವರ ಸ್ವಗ್ರಾಮ ತೆಲಸಂಗದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ. 

ಶಾಸಕ ಕುಮಟಳ್ಳಿ ವಿರುದ್ಧ ಗ್ರಾಮಸ್ಥರು ಬೃಹತ್ ಬ್ಯಾನರ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನರ್ಹರಿಗೆ ನಮ್ಮ ಗ್ರಾಮಕ್ಕೆ ಪ್ರವೇಶ ಇಲ್ಲ ಎಂದು ಬ್ಯಾನರ್ ಮೂಲಕ ತಿಳಿಸಲಾಗಿದೆ. 

'ಅನರ್ಹ ಶಾಸಕ ಕುಮಟಳ್ಳಿ ಆಕಳ ಮುಖ, ಹೋರಿ ಗುಣ ಇರೋ ವ್ಯಕ್ತಿ'...

ಸಂಪೂರ್ಣ ಗ್ರಾಮದಲ್ಲಿ ಬ್ಯಾನರ್ಗಳು ರಾರಾಜಿಸುತ್ತಿವೆ. ಶಿವಯೋಗಿಗಳ ಪುಣ್ಯಕ್ಷೇತ್ರವಿದು. ಇಲ್ಲಿ ಹಣಕ್ಕಾಗಿ ತಮ್ಮನ್ನು ಮಾರಿಕೊಂಡವರಿಗೆ ಪ್ರವೇಶ ಇಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. 

ಪಕ್ಷಾಂತರ ಮಾಡಿದ ಅನರ್ಹ ಶಾಸಕರನ್ನು ತಮಿಳುನಾಡು, ಮಹಾರಾಷ್ಟ್ರ, ಗುಜರಾತಿನ ಜನ ಸೋಲಿಸಿದ್ದಾರೆ. ಕರ್ನಾಟಕದಲ್ಲಿ ಒಬ್ಬನೇ ಒಬ್ಬ ಅನರ್ಹ ಶಾಸಕ ಗೆದ್ದರೂ ಆ ಕ್ಷೇತ್ರದ ಮತದಾರ ತಮ್ಮನ್ನು ಮಾರಿಕೊಂಡಂತೆ ಎಂದು ನ್ಯಾ. ಸಂತೋಷ್ ಹೆಗ್ಡೆ ಅವರ ಹೇಳಿಕೆಗಳನ್ನು ಬ್ಯಾನರ್ ಮೂಲಕ ಅಳವಡಿಸಿದ್ದಾರೆ. 

ನನ್ನನ್ನು ಸೆಳೆಯಲು BJP ಯತ್ನಿಸಿತ್ತು: ಲಕ್ಷ್ಮೀ ಹೆಬ್ಬಾಳ್ಕರ್...

ಇದೇ ಡಿಸೆಂಬರ್ 5 ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು ಡಿಸೆಂಬರ್ 9 ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

click me!