ಕೃಷಿಯಲ್ಲಿ ತೊಡಗಲು ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗೆ ರಾಜೀನಾಮೆ!

Kannadaprabha News   | Kannada Prabha
Published : Mar 01, 2026, 07:25 AM IST
Farmer

ಸಾರಾಂಶ

ಕೊಡಗಿನ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯದಲ್ಲಿದ್ದ ತೇಜಸ್ವಿ (32) ಅವರು ತಮ್ಮ ಹುಟ್ಟೂರಲ್ಲಿ ಕೃಷಿ ಮಾಡುವ ಆಸಕ್ತಿಯಿಂದ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದಾರೆ.

ಕುಶಾಲನಗರ : ಕೊಡಗಿನ ಕುಶಾಲನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯದಲ್ಲಿದ್ದ ತೇಜಸ್ವಿ (32) ಅವರು ತಮ್ಮ ಹುಟ್ಟೂರಲ್ಲಿ ಕೃಷಿ ಮಾಡುವ ಆಸಕ್ತಿಯಿಂದ ಸರ್ಕಾರಿ ನೌಕರಿಗೆ ರಾಜೀನಾಮೆ ನೀಡಿದ್ದಾರೆ.

ಅವರಿಗೆ ಸ್ವಂತ ಊರು ಶಿವಮೊಗ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಪಿತ್ರಾರ್ಜಿತ ಜಮೀನು

ಅವರಿಗೆ ಸ್ವಂತ ಊರು ಶಿವಮೊಗ್ಗ ಜಿಲ್ಲೆಯ ಸಿರಿಗೆರೆಯಲ್ಲಿ ಪಿತ್ರಾರ್ಜಿತ ಜಮೀನು ಇದೆ. ಅವರು ವಿವಾಹಿತರಾಗಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಆರು ವರ್ಷಗಳಿಂದ ಕೊಡಗಿನಲ್ಲಿ ಕರ್ತವ್ಯ

ತೇಜಸ್ವಿ ಕಳೆದ ಆರು ವರ್ಷಗಳಿಂದ ಕೊಡಗಿನ ಸುಂಟಿಕೊಪ್ಪ ಮತ್ತು ಕುಶಾಲನಗರ ಠಾಣೆಯಲ್ಲಿ ಸಿವಿಲ್‌ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಊರಲ್ಲಿ ಸುಮಾರು 10 ಎಕರೆ ಕೃಷಿ ಭೂಮಿ ಹೊಂದಿರುವ ತೇಜಸ್ವಿ, ತಂದೆ- ತಾಯಿ ಮೇಲ್ವಿಚಾರಣೆಯಲ್ಲಿ ಕಾರ್ಮಿಕರನ್ನು ಇರಿಸಿ ಕೃಷಿ ಚಟುವಟಿಕೆ ನಡೆಸುತ್ತಿದ್ದರು. ಈ ಹಿನ್ನೆಲೆಯಲ್ಲಿ ತಾವು ಕೃಷಿಯತ್ತ ಒಲವು ತೋರಿದ್ದು, ಫೆ.28 ರಿಂದ ಅನ್ವಯವಾಗುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಬೇಕೆಂದು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಅವರು ಮನವಿ ಸಲ್ಲಿಸಿದ್ದಾರೆ.

ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರು ತೇಜಸ್ವಿ ಅವರ ಮನವಿ ಪರಿಶೀಲಿಸಿ, ರಾಜೀನಾಮೆ ಅಂಗೀಕರಿಸಿ, ಕರ್ತವ್ಯದಿಂದ ಬಿಡುಗಡೆಗೆ ಅನುಮತಿ ನೀಡಿದ್ದಾರೆ.

PREV
Read more Articles on
click me!

Recommended Stories

ಮೈಸೂರು ರೇಷ್ಮೆ ಕಾರ್ಖಾನೆ ಉಳಿಸಿ, ಕ್ರೀಡಾಂಗಣ ವಿರೋಧಿಸಿ ಹೋರಾಟ: ಸರ್ಕಾರಕ್ಕೆ ಮಾರ್ಚ್ 6ರ ಗಡುವು ಕೊಟ್ಟ ಆರ್. ಅಶೋಕ್!
ಯುವಜನರ ಭವಿಷ್ಯಕ್ಕಾಗಿ 'ಕರ್ನಾಟಕ ಯುವ ಆಯೋಗ' ಅಗತ್ಯವಿದೆ: ಸಿದ್ದರಾಮಯ್ಯ ಸರ್ಕಾರಕ್ಕೆ ಡಾ.ನಸೀಮ್ ಅಹ್ಮದ್ ಮನವಿ