ಯಾದಗಿರಿ; ಕೊರೋನಾಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಬಲಿ

Published : Apr 25, 2021, 11:00 PM IST
ಯಾದಗಿರಿ; ಕೊರೋನಾಕ್ಕೆ ಪೊಲೀಸ್ ಕಾನ್ಸ್‌ಟೇಬಲ್ ಬಲಿ

ಸಾರಾಂಶ

ಕೊರೋನ ಸೋಂಕಿನಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವು/ ಯಾದಗಿರಿ ಜಿಲ್ಲೆಯ ಶಹಪುರ ನಗರ ಠಾಣೆಯ ಶರಣಪ್ಪ (28) ಕರೋನದಿಂದ ಸಾವನ್ನಪ್ಪಿದ ಕಾನ್ಸ್‌ಟೇಬಲ್/ ಕಳೆದ ವಾರ ಅನಾರೋಗ್ಯದಿಂದ ಕೆಲಸಕ್ಕೆ ರಜೆ ಹಾಕಿದ್ದರು/ ಮೊದಲಿಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಶರಣಪ್ಪ

ಯಾದಗಿರಿ(ಏ. 25)  ಕೊರೋನ ಸೋಂಕಿನಿಂದ ಪೊಲೀಸ್ ಕಾನ್ಸ್‌ಟೇಬಲ್ ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಶಹಪುರ ನಗರ ಠಾಣೆಯ ಶರಣಪ್ಪ (28) ಕರೋನದಿಂದ ಸಾವನ್ನಪ್ಪಿದ್ದಾರೆ. ಕಳೆದ ವಾರ ಅನಾರೋಗ್ಯದಿಂದ ಕೆಲಸಕ್ಕೆ ರಜೆ ಹಾಕಿದ್ದರು.

ಮೊದಲಿಗೆ ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಶರಣಪ್ಪ ಅವರನ್ನು ನಂತರ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಭಾನುವಾರ ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಶರಣಪ್ಪ ಸಾವು ಕಂಡಿದ್ದಾರೆ. ಶರಣಪ್ಪ ಸಾವು ಯಾದಗಿರಿ ಪೊಲೀಸ್ ಇಲಾಖೆಯಲ್ಲಿ ತೀವ್ರ ಆತ‌ಂಕಕ್ಕೆ ಕಾರಣವಾಗಿದೆ. 

ಕೊರೋನಾ ವಾರಿಯರ್ಸ್‌ಗೆ ಬೆಡ್‌ ಇಲ್ಲ.. ಬೆಂಗಳೂರಲ್ಲಿ ಎಂಥಾ ಸ್ಥಿತಿ

ರೋನಾ ಸುನಾಮಿ ಎರಡನೇ ಅಲೆಗೆ ಜನ ಮತ್ತು ಕೊರೋನಾ ವಾರಿಯರ್ಸ್ ಪರದಾಡುತ್ತಿದ್ದಾರೆ.  ಬೆಡ್ ಸಿಗದೆ ಕೊರೋನಾ ವಾರಿಯರ್ ನರಳಾಡುವ ಪರಿಸ್ಥಿತಿ ಬಂದಿದೆ. ಬೆಂಗಳೂರಿನ ಎಎಸ್‌ಐ ಸತ್ಯನಾರಾಯಣ ಬೆಡ್ ಸಿಗದೆ ಸಂಕಷ್ಟಕ್ಕೆ ಗುರಿಯಾದ ಸುದ್ದಿಯೂ ವರದಿಯಾಗಿತ್ತು. 

PREV
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
Bengaluru Weather: ರಾಜ್ಯಕ್ಕೆ ಈಶಾನ್ಯ ಮಾರುತ- ದಶಕದ ದಾಖಲೆಯ ಚಳಿಗೆ ಸಿದ್ಧರಾಗಿ; ಬೆಂಗಳೂರು ಸ್ಥಿತಿ ಏನು ನೋಡಿ!