ಹಾಸನ; ಮಾಸ್ಕ್ ಧರಿಸದ ಮದುಮಗಳಿಗೆ ಸ್ಥಳದಲ್ಲೇ ದಂಡ

By Suvarna NewsFirst Published Apr 25, 2021, 8:49 PM IST
Highlights

ಮಾಸ್ಕ್‌ ಧರಿಸದ‌ ಮಧು ಮಗಳಿಗೆ ದಂಡ/ ಮದುವೆ ಮುಗಿಸಿ ಹೊರಡೋ ವೇಳೆ ಮಾಸ್ಕ್ ಹಾಕದೆ ಇದ್ದ ವಧು/ ಈ ವೇಳೆ‌ ಸ್ಥಳಕ್ಕೆ ಬಂದ ತಹಸಿಲ್ದಾರ್ ರೇಣುಕುಮಾರ್/ ಕೂಡಲೆ ಮಧು ಮಗಳಿಗೆ ನೂರು ರೂ ದಂಡ ವಿಧಿಸಿ ರಶೀದಿ ನೀಡಿದ ಅಧಿಕಾರಿ/ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥ ಪುರ ಗ್ರಾಮದಲ್ಲಿ ಘಟನೆ

ಹಾಸನ(ಏ. 25)  ಮಾಸ್ಕ್‌ ಧರಿಸದ‌ ಮಧು ಮಗಳಿಗೆ ದಂಡ ವಿಧಿಸಲಾಗಿದೆ.  ಮದುವೆ ಮುಗಿಸಿ ಹೊರಡೋ ವೇಳೆ ಮಾಸ್ಕ್ ಹಾಕದೆ ಇದ್ದ ವಧುವನ್ನು ಗಮನಿಸಿದ ಅಧಿಕಾರಿಗಳು ದಂಡ ಹಾಕಿದ್ದಾರೆ.

ಮದುವೆ ಮುಗಿಸಿ ತೆರಳುತ್ತಿದ್ದ ವೇಳೆ‌ ಸ್ಥಳಕ್ಕೆ ಬಂದ ತಹಸಿಲ್ದಾರ್ ರೇಣುಕುಮಾರ್ ನೂರು ರೂ ದಂಡ ವಿಧಿಸಿ ರಶೀದಿ ನೀಡಿದ್ದಾರೆ ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ರಾಮನಾಥ ಪುರ ಗ್ರಾಮದಲ್ಲಿ ಘಟನೆ ನಡೆದಿದೆ

.ಮದುವೆಗೆ ಐವತ್ತು ಜನರಿಗೆ ಮಾತ್ರ ಅವಕಾಶ ಇದೆ. ಸರ್ಕಾರ ಸ್ಪಷ್ಟವಾಗಿ ನಿಯಮಾವಳಿಯಲ್ಲಿ ಹೇಳಿದೆ. ಇದರ ಜತೆಗೆ ಮದುವೆಗೆ ಅನುಮತಿ ಪಡೆದುಕೊಳ್ಳುವುದು ಮುಖ್ಯ ಎಂದು ತಿಳಿಸಲಾಗಿದೆ.

ಕೊರೋನಾ ವಾರಿಯರ್ಸ್ ಗೆ ಬೆಡ್ ಇಲ್ಲ, ಬೆಂಗಳೂರಲ್ಲಿ ಎಂಥಾ ಸ್ಥಿತಿ

ಮಾಸ್ಕ್ ಶರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಮೇಲಿಂದ ಮೇಲೆ ಹೇಳುತ್ತಲೇ ಬರಲಾಗಿದೆ. ಕರ್ನಾಟಕದಲ್ಲಿ ಕೊರೋನಾ ಅಬ್ಬರ ಮುಂದುವರಿದಿದ್ದು ದಿನವೊಂದಕ್ಕೆ 30  ಸಾವಿರ ಹತ್ತಿರ ಪ್ರಕರಣ ದಾಖಲಾಗಿ ಆತಂಕ ಮೂಡಿಸಿದೆ. 

 

click me!