ಕರ್ತವ್ಯದ ಮೇಲೆ ತೆರಳಿದ್ದ ಪೊಲೀಸ್ ಕಾನ್‌ಸ್ಟೇಬಲ್ ಮಯೂರ ಅವರು ಟ್ರಾಕ್ಟರ್ ತಡೆಯಲು ಹೋಗಿದ್ದಾರೆ. ಈ ವೇಳೆ ಮಯೂರ ಅವರ ಮೇಲೆ ಟ್ರಾಕ್ಟರ್ ಹತ್ತಿಸಲಾಗಿದೆ. ಹೀಗಾಗಿ ಟಯರನಡಿ ಸಿಲುಕಿ ಪೇದೆ ಮಯೂರ ಸಾವನ್ನಪ್ಪಿದ್ದಾರೆ.
ಕಲಬುರಗಿ(ಜೂ.16): ಅಕ್ರಮ ಮರಳು ಸಾಗಣಿಕೆಗೆ ಕಾನ್‌ಸ್ಟೇಬಲ್‌ವೊಬ್ಬರು ಬಲಿಯಾದ ಘಟನೆ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನಾರಾಯಣಪೂರ ಬಳಿ ನಡೆದಿದೆ. ನೆಲೋಗಿ ಪೊಲೀಸ್ ಠಾಣೆಯ ಪೊಲೀಸ್ ಕಾನ್‌ಸ್ಟೇಬಲ್ ಮಯೂರ (50) ಮೃತ ದುರ್ದೈವಿಯಾಗಿದ್ದಾರೆ.
ಕರ್ತವ್ಯದ ಮೇಲೆ ತೆರಳಿದ್ದ ಪೊಲೀಸ್ ಕಾನ್‌ಸ್ಟೇಬಲ್ ಮಯೂರ ಅವರು ಟ್ರಾಕ್ಟರ್ ತಡೆಯಲು ಹೋಗಿದ್ದಾರೆ. ಈ ವೇಳೆ ಮಯೂರ ಅವರ ಮೇಲೆ ಟ್ರಾಕ್ಟರ್ ಹತ್ತಿಸಲಾಗಿದೆ. ಹೀಗಾಗಿ ಟಯರನಡಿ ಸಿಲುಕಿ ಪೇದೆ ಮಯೂರ ಸಾವನ್ನಪ್ಪಿದ್ದಾರೆ.
undefined
ಮಣಿಪುರ ಗಲಾಟೆಗೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯವೇ ಕಾರಣ: ಮಲ್ಲಿಕಾರ್ಜುನ ಖರ್ಗೆ
ಇದು ಆಕಸ್ಮಿಕ ಅಪಘಾತವೋ ಇಲ್ಲವೇ ಮರಳು ಲೂಟಿಕೋರರಿಂದ ಉದ್ದೇಶ ಪೂರ್ವಕವಾಗಿ ನಡೆದ ಹತ್ಯೆಯೋ ಎನ್ನುವುದು ಮಾತ್ರ ಇನ್ನೂ ನಿಗೂಢವಾಗಿದೆ. ಪೊಲೀಸರ ತನಿಖೆಯಿಂದಷ್ಟೇ ಪೊಲೀಸ್ ಕಾನ್‌ಸ್ಟೇಬಲ್ ಸಾವಿಗೆ ಕಾರಣ ತಿಳಿದು ಬರಬೇಕಿದೆ. ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.