ಬೆಂಗ್ಳೂರಿನ ತ್ಯಾಜ್ಯ ನೀರು ಶುದ್ಧೀಕರಿಸಿ 4 ಜಿಲ್ಲೆಯ 70 ಕೆರೆಗೆ ಸರಬರಾಜು

By Kannadaprabha NewsFirst Published Jun 16, 2023, 8:28 AM IST
Highlights

ಈ ಯೋಜನೆಯನ್ನು ಪರಿಷ್ಕರಣೆ ಮಾಡಿ ನಿತ್ಯ 243 ದಶಲಕ್ಷ ಲೀಟರ್‌ ನೀರನ್ನು ಸಂಸ್ಕರಿಸಿ ಮೊದಲ ಹಂತದಲ್ಲಿ 70 ಕೆರೆ ತುಂಬಿಸಲು 1,081 ಕೋಟಿ ರು. ಮೊತ್ತದ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಲಿಫ್ಟ್‌-1 ಅಡಿ 21 ಕೆರೆ, ಲಿಫ್ಟ್‌-2 ಅಡಿ 49 ಕೆರೆ, ಲಿಫ್ಟ್‌-3 ಅಡಿ 12 ಕೆರೆಗಳಿಗೆ ನೀರು ಹರಿಸಲಾಗುವುದು. 

ಬೆಂಗಳೂರು(ಜೂ.16):  ಬೆಂಗಳೂರಿನ ವೃಷಭಾವತಿ ವ್ಯಾಲಿಯಿಂದ 243 ಎಂಎಲ್‌ಡಿ ಶುದ್ಧೀಕರಿಸಿದ ತ್ಯಾಜ್ಯ ನೀರನ್ನು ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ತುಮಕೂರು ಜಿಲ್ಲೆಯ 70 ಕೆರೆಗಳಿಗೆ ತುಂಬಿಸಲು 1,081 ಕೋಟಿ ರು. ವೆಚ್ಚದ ಪರಿಷ್ಕೃತ ಯೋಜನೆ ಕೈಗೊಳ್ಳುವುದು ಸೇರಿದಂತೆ ವಿವಿಧ ಪ್ರಸ್ತಾವನೆಗಳಿಗೆ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. 2022ರಲ್ಲಿ ಹಿಂದಿನ ಸರ್ಕಾರವು 82 ಕೆರೆಗಳಿಗೆ ನೀರು ತುಂಬಿಸಲು 865 ಕೋಟಿ ರು. ವೆಚ್ಚದಲ್ಲಿ ಸಮಗ್ರ ಯೋಜನಾ ವರದಿ ಸಿದ್ಧಪಡಿಸಿ ಆಡಳಿತಾತ್ಮಕ ಒಪ್ಪಿಗೆ ಪಡೆದಿತ್ತು.

ಈ ಯೋಜನೆಯನ್ನು ಪರಿಷ್ಕರಣೆ ಮಾಡಿ ನಿತ್ಯ 243 ದಶಲಕ್ಷ ಲೀಟರ್‌ ನೀರನ್ನು ಸಂಸ್ಕರಿಸಿ ಮೊದಲ ಹಂತದಲ್ಲಿ 70 ಕೆರೆ ತುಂಬಿಸಲು 1,081 ಕೋಟಿ ರು. ಮೊತ್ತದ ಪರಿಷ್ಕೃತ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಲಿಫ್ಟ್‌-1 ಅಡಿ 21 ಕೆರೆ, ಲಿಫ್ಟ್‌-2 ಅಡಿ 49 ಕೆರೆ, ಲಿಫ್ಟ್‌-3 ಅಡಿ 12 ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಸಚಿವ ಎಚ್‌.ಕೆ. ಪಾಟೀಲ್‌ ಮಾಹಿತಿ ನೀಡಿದರು.

Latest Videos

ಕೆ.ಸಿ.ವ್ಯಾಲಿ ನೀರಾವರಿ ಯೋಜನೆ ಇದ್ರೂ, ಕೋಲಾರ ಜನತೆ ಉಪಯೋಗಕ್ಕಿಲ್ಲ ಸರ್ಕಾರಿ ನೀರಿನ ಫಿಲ್ಟರ್‌ಗಳು!

ಸಚಿವ ಸಂಪುಟ ಉಪಸಮಿತಿ ರಚನೆ:

ಇನ್ನು ರಾಜ್ಯದಲ್ಲಿ ಪ್ರಕೃತಿ ವಿಕೋಪಗಳಿಂದ ಆಗುವ ಅನಾಹುತ ತಡೆಗೆ ಅಗತ್ಯ ನೀತಿ ರಚನೆಗೆ ಸಚಿವ ಸಂಪುಟ ಉಪ ಸಮಿತಿ ರಚನೆಗೆ ನಿರ್ಧಾರ ಮಾಡಲಾಗಿದೆ. ಜತೆಗೆ ಕರ್ನಾಟಕ ಹೈಕೋರ್ಚ್‌ನÜ ಆಡಳಿತ ವೆಚ್ಚ ಹೆಚ್ಚಳ ಮಾಡಲು ಮುಖ್ಯ ನ್ಯಾಯಮೂರ್ತಿಗಳಿಗೆ ಅಧಿಕಾರ ನೀಡಲು ಹಾಗೂ ಕೆಪಿಎಸ್ಸಿಯಲ್ಲಿ ಖಾಲಿ ಇರುವ ಮೂರು ಅಧಿಕಾರಿ ಸದಸ್ಯರ ಹುದ್ದೆಗಳ ಭರ್ತಿಗೆ ಸಹ ಸಮ್ಮತಿ ಸೂಚಿಸಲಾಗಿದೆ.

ಐಟಿ-ಬಿಟಿ ಇಲಾಖೆಯಡಿ ಟೆಕ್‌ ಸಮ್ಮಿಟ್‌ ಫ್ಲ್ಯಾಗ್‌ಶಿಪ್‌ ಕಾರ್ಯಕ್ರಮ ಮಾಡಲು ಎಸಿಎಂಎ ಖಾಸಗಿ ಕಂಪನಿಗೆ 17.98 ಕೋಟಿ ರು. ಹಣ ನಿಗದಿ ಮಾಡಲಾಗಿದೆ. ಅದರ ದಿನಾಂಕ ಮತ್ತಿತರ ವಿವರಗಳನ್ನು ಇಲಾಖೆ ನಿರ್ಧರಿಸಲಿದೆ ಎಂದು ಎಚ್‌.ಕೆ. ಪಾಟೀಲ್‌ ತಿಳಿಸಿದರು.

click me!