ಮಂಗಳೂರಿನಲ್ಲಿನ್ನು 'ಹೆಮ್ಮೆಯ ಬೀಟ್ ಡ್ಯೂಟಿ'

By Kannadaprabha News  |  First Published Aug 14, 2019, 2:57 PM IST

ಪ್ರತಿಯೊಬ್ಬ ಪೊಲೀಸ್ ಬೀಟ್ ಮೈ ಪ್ರೈಡ್ ಆಗಿ ಕಾರ್ಯ ನಿರ್ವಹಿಸಬೇಕೆಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ. ಪಿ.ಎಸ್‌. ಹರ್ಷ ಹೇಳಿದ್ದಾರೆ. ಜನರು ಮತ್ತು ಪೊಲೀಸರ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಬೀಟ್ ವ್ಯವಸ್ಥೆ ಅವಶ್ಯಕವಾಗಿದ್ದು, ಬೀಟ್‌ ಕರ್ತವ್ಯವನ್ನು ಹೆಮ್ಮೆ ಎಂದು ಭಾವಿಸಿ ಕಾರ್ಯನಿರ್ವಹಿಸಬೇಕು ಎಂದಿದ್ದಾರೆ.


ಮಂಗಳೂರು(ಆ.14): ಜನರು ಮತ್ತು ಪೊಲೀಸರ ಮಧ್ಯೆ ಉತ್ತಮ ಬಾಂಧವ್ಯ ವೃದ್ಧಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಸಿಬ್ಬಂದಿ ‘ಬೀಟ್‌ ಮೈ ಪ್ರೈಡ್‌’ ಆಗಿ ಕಾರ್ಯ ನಿರ್ವಹಿಸಬೇಕು ಎಂದು ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಡಾ. ಪಿ.ಎಸ್‌. ಹರ್ಷ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್‌ ಕಮಿಷನರ್‌ ಕಚೇರಿಯಲ್ಲಿ ಮಂಗಳವಾರ ಕಮಿಷನರೇಟ್‌ ವ್ಯಾಪ್ತಿಯ ಇನ್‌ಸ್ಪೆಕ್ಟರ್‌ಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

Tap to resize

Latest Videos

undefined

ಚಾರ್ಮಾಡಿ ಘಾಟಿಯಲ್ಲಿ ಬೃಹತ್‌ ಕಂದಕ

ಪೊಲೀಸ್‌ ಠಾಣೆಯನ್ನು ಮತ್ತಷ್ಟು ಸದೃಢವಾಗಿಸುವಲ್ಲಿ ಎಲ್ಲರೂ ಶ್ರಮಿಸಬೇಕು. ಬೀಟ್‌ ಪೊಲೀಸ್‌ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ಮೂಲಕ ಜನಸ್ನೇಹಿಯಾಗಬೇಕು. ಬೀಟ್‌ ಕರ್ತವ್ಯವನ್ನು ಹೆಮ್ಮೆ ಎಂದು ಭಾವಿಸಿ ಕಾರ್ಯನಿರ್ವಹಿಸಬೇಕು. ಇದರಿಂದಾಗಿ ಪ್ರತಿಯೊಂದು ಪೊಲೀಸ್‌ ಠಾಣೆ ಬಲಿಷ್ಠಗೊಳ್ಳಲು ಸಾಧ್ಯವಾಗಲಿದೆ. ಹಳೆ ಹಾಗೂ ಬಾಕಿ ಪ್ರಕರಣಗಳ ಪಟ್ಟಿಮಾಡಿ ಅವುಗಳ ವಿರುದ್ಧ ಕಾನೂನಾತ್ಮಕ ಕ್ರಮಗಳನ್ನು ಕೈಗೊಳ್ಳಬೇಕು. ಇದರಲ್ಲಿ ಯಾವುದೇ ನಿರ್ದಾಕ್ಷಿಣ್ಯ ತೋರಿಸಬಾರದು ಎಂದರು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಅಡ್ಡಿಪಡಿಸುವ ರೌಡಿ ಶೀಟರ್‌ಗಳು, ಕಿಡಿಗೇಡಿಗಳ ಮೇಲೆ ಸದಾ ಕಣ್ಗಾವಲಿಟ್ಟು ಕಾರ್ಯಾಚರಣೆ ನಡೆಸಬೇಕಾಗಿದೆ. ಅಂತಹವರು ಹಾಗೂ ಅವರ ಸಹಚರರ ಮೇಲೆ ಅನಿರೀಕ್ಷಿತವಾಗಿ ಕಾರ್ಯಾಚರಣೆ ನಡೆಸಿ ಕ್ರಮ ಕೈಗೊಳ್ಳಬೇಕು. ಇದು ಮಾತ್ರವಲ್ಲದೆ ಡ್ರಗ್‌ ಮಾಫಿಯಾ ನಗರದಲ್ಲಿ ದೊಡ್ಡ ಮಟ್ಟದಲ್ಲಿದ್ದು, ಅದನ್ನು ಸಂಪೂರ್ಣ ಮಟ್ಟಹಾಕಲು ತಮ್ಮ ತಮ್ಮ ಠಾಣಾ ವ್ಯಾಪ್ತಿಯಲ್ಲಿ ಕಠಿಣ ಕಾರ್ಯಾಚರಣೆ ನಡೆಸಬೇಕಾಗಿದೆ ಎಂದು ಅವರು ಹೇಳಿದರು. ಡಿಸಿಪಿಗಳಾದ ಅರುಣಾಂಶು ಗಿರಿ, ಲಕ್ಷ್ಮೇಗಣೇಶ್‌ ಇದ್ದರು.

click me!