ಅಪರಾಧ ಚುಟವಟಿಕೆಯಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟರ್ ತೆಗೆಯುತ್ತಾರೆ, ಆದರೆ ಕೇವಲ ಒಂದೇ ಪೊಲೀಸ್ ಕೇಸ್ ಇರುವ ಹಿಂದು ಪರ ಕಾರ್ಯಕರ್ತ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಏಕಾಏಕಿ ರೌಡಶೀಟ್ ತೆರೆದಿರೋದು ಇಲ್ಲಿನ ಮಠಾಧೀಶರು, ಹಿಂದು ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಕಲಬುರಗಿ(ಜ.05): ಹಿಂದೂ ಜಗೃತಿ ಸೇನೆ ಜಿಲ್ಲಾಧ್ಯಕ್ಷ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಇಲ್ಲಿನ ರಾಘವೇಂದ್ರ ನಗರ ಠಾಣೆಯಲ್ಲಿ ಪೊಲೀಸರು ಕಳೆದ ಡಿ.24ರಂದು ರೌಡಿ ಶೀಟ್ ತೆರೆದಿದ್ದಾರೆ. ಅಪರಾಧ ಚುಟವಟಿಕೆಯಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟರ್ ತೆಗೆಯುತ್ತಾರೆ, ಆದರೆ ಕೇವಲ ಒಂದೇ ಪೊಲೀಸ್ ಕೇಸ್ ಇರುವ ಹಿಂದು ಪರ ಕಾರ್ಯಕರ್ತ ಲಕ್ಷ್ಮೀಕಾಂತ ಸ್ವಾದಿ ವಿರುದ್ಧ ಏಕಾಏಕಿ ರೌಡಶೀಟ್ ತೆರೆದಿರೋದು ಇಲ್ಲಿನ ಮಠಾಧೀಶರು, ಹಿಂದು ಸಂಘಟನೆಗಳ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ.
ಕ್ರಿಸ್ಮಸ್ ಹಬ್ಬದಂದು ಭಾಷಣ ಮಾಡಿ ಅಶಾಂತಿ ಉಂಟು ಮಾಡಬಹುದು ಎಂದು ಆರ್‌ಜಿ ನಗರ ಪೊಲೀಸರು ಈ ಕಾರಣ ಒಡ್ಡಿ ಡಿ.24ರಂದೇ ಲಕ್ಷ್ಮೀಕಾಂತ ಸ್ವಾಮಿ ವಿರುದ್ಧ ರೌಡಿಶೀಟ್ ಆರಂಭಿಸಿದ್ದಾರೆ. ಲಕ್ಷ್ಮೀಕಾಂತ ಸ್ವಾಮಿ ಹಿಂದೂಪರ ಸಂಘಟನೆಯ ಪ್ರಮುಖ ಕಾರ್ಯಕರ್ತ. ಎಂದಿಗೂ ಯಾವ ಧರ್ಮದ ವಿರುದ್ಧ ಮಾತನಾಡಿ ಅಶಾಂತಿ ಉಂಟು ಮಾಡಿಲ್ಲ. ಪೊಲೀಸರು ಇದನ್ನೆಲ್ಲ ಕಲ್ಪಿಸಿಕೊಂಡು ರೌಡಿಶೀಟ್ ತೆರೆದಿರೋದು ಸರಿಯಲ್ಲವೆಂದು ಜಿಲ್ಲೆಯ ಕೇದಾರ ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಪೊಲೀಸರ ಈ ಕ್ರಮವನ್ನು ಹಿಂದು ವಿರೋಧಿ ಎಂದು ಖಂಡಿಸಿದ್ದಾರೆ.
undefined
ಕಲಬುರಗಿ: ವಸತಿ ಶಾಲೆ, ಅಂಗನವಾಡಿ ಹುಳುಕು ಬಹಿರಂಗ..!
ಹಿಂದುಪರ ಕಾರ್ಯಕರ್ತನಾಗಿ ಲಕ್ಷ್ಮೀಕಾಂತ ಸ್ವಾಮಿ ಳೆದ 10 ವರ್ಷದಿಂದ ಕ್ರಿಯಾಶೀಲನಾಗಿದ್ದವ, ಪಠಾಣ ಚಿತ್ರದ ಪ್ರದರ್ಶನ ವಿರೋಧಿಸಿ ನಗರದ ಚಿತ್ರ ಮಂದಿರ ಮುಂದೆ ಧರಣಿ ನಡೆಸಿದ್ದಲ್ಲದೆ ಕಲ್ಲೆಸೆದಿದ್ದ, ಈ ಪ್ರಕರಣದಲ್ಲಿ 15 ದಿನ ಜೈಲುವಾಸ ಕೂಡಾ ಆಗಿತ್ತು. ಇದೊಂದೇ ಕೇಸ್ ಸ್ವಾಮಿ ಮೇಲೆ ಇರೋದು. ಇದೊಂದೇ ಕೇಸ್ ಇದ್ದರೂ ಕೂಡಾ ರಾಜಕೀಯವಾಗಿ ಪ್ರೇರಿತರಾಗಿ, ರೈಜಕೀಯ ವ್ಯಕ್ತಿಗಳ ಕೈಗೊಂಬೆಯಾಗಿ ಪೊಲೀಸರು ಇವರ ವಿರುದದ್ಧ ರೌಡಿಶೀಟ್ ತೆರೆದಿರೋದು ನಾವೆಲ್ಲರೂ ಖಂಡಿಸುತ್ತೇವೆಂದು ಕೇದಾರ ಶ್ರೀಗಳು ಹೇಳಿದ್ದಾರೆ.
ಕಲಬುರಗಿ: ವರ್ಕ್ ಫ್ರಮ್ ಹೋಮ್ ಹೆಸರಲ್ಲಿ 89 ಲಕ್ಷ ವಂಚನೆ, ಕಂಗಾಲಾದ ಮಹಿಳೆ..!
ಕುಟುಂಬ ಸಮೇತ ಕಮೀಶ್ನರ್ ಕಚೇರಿ ಮುಂದೆ ಧರಣಿ: ಲಕ್ಷ್ಮೀಕಾಂತ
ಏತನ್ಮಧ್ಯೆ ತಮ್ಮ ಮೇಲಿನ ರೌಡಿ ಶೀಟ್ ತೆರೆದಿರೋದಕ್ಕೆ ಪ್ರತಿಕ್ರಿಯೆ ನೀಡಿರುವ ಲಕ್ಷ್ಮೀಕಾಂತ ಸ್ವಾಮಿ ತಾವು ಈಗಾಗಲೇ ಈ ವಿಷಯವಾಗಿಯೇ ನಗರ ಪೊಲೀಸ್ ಕಮೀಶ್ನರ್ ಚೇತನ್ ಅವರನ್ನು ಭೇಟಿ ಮಾಡಿದ್ದಾಗಿ ಹೇಳಿದ್ದಾರೆ. ತಮ್ಮ ವಿರುದ್ಧ ಅಶಾಂತಿಯನ್ನು ಹುಟ್ಟುಹಾಕಿದ್ದಾರೆಂಬ ಆರೋಪ ಮಾಡಲಾಗಿದೆ. ಒಂದೇ ಒಂದು ಸಾಕ್ಷಿ ಈ ವಿಷಯವಾಗಿ ಪೊಲೀಸರು ನೀಡಲಿ, ನಾನು ಅವರಿಗೆ ಶರಣಾಗುವೆ. ಯಾವುದೇ ಇಂತಹ ಅಶಾಂತಿಯಲ್ಲಿ ತಾವು ಪಾತ್ರ ವಹಿಸಿಲ್ಲವಾದರೂ ತಮ್ಮ ವಿರುದ್ಧ ರೌಡಿ ಶೀಟ್ ತೆರೆದಿರೋದು ಪೊಲೀಸರ ಪಕ್ಷಪಾತಿ ಧೋರಣೆಗೆ ಸಾಕ್ಷಿ ಎಂಗದು ಸ್ವಾದಿ ಕಿಡಿ ಕಾರಿದ್ದಾರೆ. ವಾರದೊಳಗೆ ತಮ್ಮ ವಿರುದ್ಧ ತೆರೆದಿರುವ ರೌಡಿಶೀಟ್ ಮುಕ್ತಾಯಗೊಳಿಸಬೇಕು, ಇಲ್ಲದೆ ಹೋದಲ್ಲಿ ನ್ಯಾಯಕ್ಕಾಗಿ ಕೋರಿ ಕುಟುಂಬ ಸಮೇತರಾಗಿ ಕಮೀಶ್ನರ್ ಕಚೇರಿ ಮುಂದೆ ಧರಣಿ ಕೂಡೋದಾಗಿ ಸ್ವಾದಿ ಎಚ್ಚರಿಸಿದ್ದಾರೆ.
ರೌಡಿ ಶೀಟ್ ತೆರಯುವ ಮುನ್ನ ಸಂಬಂಧಿಸಿದ ವ್ಯಕ್ತಿಗೆ ನೋಟಿಸ್ ಜಾರಿ ಮಾಡಿ ಆ ಬಗ್ಗೆ ಮಾಹಿತಿ ನೀಡಬೇಕು. ರೌಡಿ ಶೀಟ್ ಹಾಕದಂತೆ ಮನವಿ ಸಲ್ಲಿಸಲು ಆ ವ್ಯಕ್ತಿಗೆ ಅವಕಾಶ ನೀಡಬೇಕು ಹಾಗೂ ರೌಡಿ ಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ ನೀಡಬೇಕು ಎಂಬ ನಿಯಗಳಿದ್ದರೂ ಸಹ ಆರ್‌ಜಿ ನಗರ ಠಾಣೆ ಪೊಲೀಸರು ಲಕ್ಷ್ಮೀಕಾಂತ ಸ್ವಾದಿ ಪ್ರಕರಣದಲ್ಲಿ ಇವುಗಳನ್ನು ಪಾಲಿಸಿಲ್ಲವೆಂದು ಹಂದುಪರ ಸಂಘಟನೆಯ ಪ್ರಮುಖರು ದೂರಿದ್ದು ಪೊಲೀಸರ ಕ್ರಮವನ್ನು ಖಂಡಿಸಿದ್ದಾರೆ.