ಲಾಕ್‌ಡೌನ್‌: ಪರವಾನಗಿ ಇದ್ರೂ ಡ್ರೈವರ್‌ಗೆ ಮನಬಂದಂತೆ ಪೊಲೀಸರಿಂದ ಥಳಿತ

By Kannadaprabha News  |  First Published Apr 30, 2020, 7:38 AM IST

ಜಾಫರ್‌ ಎಂಬಾತನಿಗೆ ಲಾಠಿಯಿಂದ ಥಳಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿದ ಪೊಲೀಸರು| ಸಮೀರ್‌ ಕೈ ಬಾವು ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ|  ಉಪನಗರ ಪೊಲೀಸ್‌ ಸಿಬ್ಬಂದಿ ಪಾಸ್‌ ಇದ್ದರೂ ಮಾತನಾಡುವ ಮುನ್ನವೆ ಥಳಿಸಿದ ಪೊಲೀಸರು|


ಹುಬ್ಬಳ್ಳಿ(ಏ.30): ಪರವಾನಗಿ, ಗುರುತಿನ ಚೀಟಿ ಇದ್ದರೂ ಮಹಾನಗರ ಪಾಲಿಕೆ ಸಿಬ್ಬಂದಿಗೆ ಪೊಲೀಸರು ಥಳಿಸಿದ ಘಟನೆ ಮಾಸುವ ಮುನ್ನವೆ ಹುಬ್ಬಳ್ಳಿ ರೈಲ್ವೇ ಗೂಡ್ಸ್‌ ಶೆಡ್‌ ಲಾರಿ ಚಾಲಕರಿಗೆ ಪೊಲೀಸರು ಇಲ್ಲಿನ ವಿವೇಕಾನಂದ ಹಾಸ್ಪಿಟಲ್‌ ಬಳಿ ಥಳಿಸಿದ ಘಟನೆ ಬುಧವಾರ ನಡೆದಿದ್ದು, ಇದನ್ನು ಖಂಡಿಸಿರುವ ಲಾರಿ ಮಾಲೀಕರ ಸಂಘ ಪ್ರಕರಣ ಇತ್ಯರ್ಥ ಪಡಿಸಿ ನ್ಯಾಯ ಒದಗಿಸುವವರೆಗೆ ಲಾರಿಗಳ ಸೇವೆಯನ್ನು ಸಂಪೂರ್ಣ ಬಂದ್‌ ಮಾಡಲು ನಿರ್ಧರಿಸಿದೆ.

ಬುಧವಾರ ಸಂಜೆ ಜಾಫರ್‌ ಮತ್ತು ಸಮೀರ್‌ ತಮ್ಮ ಮನೆಯಿಂದ ಟ್ರ್ಯಾಕ್ಸ್‌ ಮೂಲಕ ರೈಲ್ವೇ ಗೂಡ್ಸ್‌ ಶೆಡ್‌ಗೆ ತೆರಳುವ ವೇಳೆ ಘಟನೆ ನಡೆದಿದೆ. ಇವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಇವರನ್ನು ತಡೆದ ಉಪನಗರ ಪೊಲೀಸ್‌ ಸಿಬ್ಬಂದಿ ಪಾಸ್‌ ಇದ್ದರೂ ಮಾತನಾಡುವ ಮುನ್ನವೆ ಥಳಿಸಿದ್ದಾರೆ ಎಂದು ಸಂಘಟನೆ ದೂರಿದೆ.

Tap to resize

Latest Videos

ಲಾಕ್‌ಡೌನ್‌ ಎಫೆಕ್ಟ್‌: BRTS ಬೊಕ್ಕಸಕ್ಕೆ ಕೋಟಿ ಕೋಟಿ ನಷ್ಟ..!

ಜಾಫರ್‌ ಎಂಬಾತನಿಗೆ ಪೊಲೀಸರು ಲಾಠಿಯಿಂದ ಮನಬಂದಂತೆ ಥಳಿಸಿದ್ದು, ಮತ್ತು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಸಮೀರ್‌ ಕೈ ಬಾವು ಬಂದಿದೆ. ಈ ಕುರಿತು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದ್ದು, ಅವರು ಮಹಾನಗರ ಪೊಲೀಸ್‌ ಆಯುಕ್ತರನ್ನು ಭೇಟಿಯಾಗಲು ತಿಳಿಸಿದರು. ಆದರೆ ಆಯುಕ್ತರು ನಮ್ಮನ್ನು ಭೇಟಿಯಾಗಿಲ್ಲ ಎಂದು ಗೂಡ್ಸ್‌ ಶೇಡ್‌ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಗೈಬುಸಾಬ್‌ ಹೊನ್ಯಾಳ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಕರಣವನ್ನು ಇತ್ಯರ್ಥಪಡಿಸಿ ಲಾರಿ ಚಾಲಕರಿಗೆ ನ್ಯಾಯ ನೀಡುವವರೆಗೆ ನಾವು ಗೂಡ್ಸ್‌ ಶೇಡ್‌ ಲಾರಿಗಳ ಸೇವೆಯನ್ನು ಸಂಪೂರ್ಣ ಬಂದ್‌ ಮಾಡಲಿದ್ದೇವೆ ಎಂದು ಜಿಲ್ಲಾಧಿಕಾರಿಗೆ ತಳಿಸಿದ್ದೇವೆ ಎಂದು ಅವರು ಹೇಳಿದ್ದಾರೆ.
 

click me!