ಲಾಕ್‌ಡೌನ್‌ ಉಲ್ಲಂಘಿಸಿದ ಯೋಧರು; ವಿಡಿಯೋ ವೈರಲ್‌

By Kannadaprabha News  |  First Published Apr 30, 2020, 7:32 AM IST

ಉಡುಪಿ ಜಿಲ್ಲೆಯಲ್ಲಿ 144 ಸೆಕ್ಷನ್‌ ಉಲ್ಲಂಘಿಸಿ ಆದಿಉಡುಪಿ ಮೈದಾನದಲ್ಲಿ ಕೆಲವು ಯೋಧರು ಆಟ ಆಡುತಿದ್ದರು, ಆಗ ಅಲ್ಲಿಗೆ ಆಗಮಿಸಿದ ಉಡುಪಿ ಸಿಪಿಐ ಮಂಜುನಾಥ್‌ ಮತ್ತು ಯೋಧರ ನಡುವೆ ಮಾತಿನ ಚಕಮಕಿ ನಡೆಯಿತು ಎಂಬ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.


ಉಡುಪಿ(ಏ.30): ಜಿಲ್ಲೆಯಲ್ಲಿ 144 ಸೆಕ್ಷನ್‌ ಉಲ್ಲಂಘಿಸಿ ಆದಿಉಡುಪಿ ಮೈದಾನದಲ್ಲಿ ಕೆಲವು ಯೋಧರು ಆಟ ಆಡುತಿದ್ದರು, ಆಗ ಅಲ್ಲಿಗೆ ಆಗಮಿಸಿದ ಉಡುಪಿ ಸಿಪಿಐ ಮಂಜುನಾಥ್‌ ಮತ್ತು ಯೋಧರ ನಡುವೆ ಮಾತಿನ ಚಕಮಕಿ ನಡೆಯಿತು ಎಂಬ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ.

ಆದರೆ ಇದು ಸುಮಾರು ಒಂದು ತಿಂಗಳ ಹಿಂದಿನ ವಿಡಿಯೋ ಎಂದು ಮಂಜುನಾಥ್‌ ಸ್ಪಷ್ಟಪಡಿಸಿದ್ದಾರೆ. ಆದಿಉಡುಪಿ ಹೆಲಿಪ್ಯಾಡ್‌ನಲ್ಲಿರುವ ಆರ್ಮಿ ಕ್ಯಾಂಪ್‌ನಲ್ಲಿ ಕೆಲವು ಯೋಧರು ಸಿವಿಲ್‌ ಉಡುಪಿನಲ್ಲಿ ಆಡುತಿದ್ದರು.

Tap to resize

Latest Videos

ವರದಿಗಾರನಿಗೆ ಕೊರೋನಾ: ಕಾಸರಗೋಡು ಡಿಸಿಗೆ ಕ್ವಾರೆಂಟೈನ್..!

ಆಗ ಸ್ಥಳೀಯರ ದೂರಿನ ಮೇರೆಗೆ ಅಲ್ಲಿಗೆ ಬಂದ ಮಂಜುನಾಥ್‌, ಲಾಕ್‌ಡೌನ್‌ ಜಾರಿಯಲ್ಲಿದೆ, ಆದ್ದರಿಂದ ಮನೆಯೊಳಗೆ ಇರುವಂತೆ ಆಡುತಿದ್ದವರಿಗೆ ಸೂಚಿಸಿದ್ದಾರೆ. ಆಗ ಅವರಲ್ಲೊಬ್ಬ ತಾವು ಸೈನಿಕರು, ಫಿಸಿಕಲ್‌ ಫಿಟ್‌ನೆಸ್‌ಗಾಗಿ ಆಡುತಿದ್ದೇವೆ ಎಂದರು.

ಕೊರೋನಾ ಹೋರಾಟಕ್ಕೆ ಸಾಗರದ ಹಿರಿಯ ಜೀವ ನೀಡಿದ ದೇಣಿಗೆ ಕೋಟಿ ರೂ.ಗೂ ಕಡಿಮೆ ಇಲ್ಲ!

ಅದಕ್ಕೆ ಮಂಜುನಾಥ್‌ ದೇಶದ ಕಾನೂನ ಎಲ್ಲಿರಿಗೂ ಒಂದೇ ಎಂದಾಗ, ಯೋಧರು ನಾವು ಎಸ್ಪಿ ಜೊತೆ ಮಾತನಾಡುತ್ತೇವೆ ಎಂದು ಹೇಳುತ್ತಾರೆ. ನಂತರ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯುತ್ತದೆ. ಕೊನೆಗೆ ಯೋಧರು ಕ್ಯಾಂಪಿನೊಳಗೆ ಹೋಗುತ್ತಾರೆ.

click me!