ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರಕ್ಕೆ ಪೊಲೀಸರೇ ನೇರ ಕಾರಣ ಎಂದು ಎಂಎಲ್‌ಸಿ ಹರೀಶ್ ಕುಮಾರ್ ಆರೋಪಿಸಿದ್ದಾರೆ. ಖಾದರ್ ಮೇಲೆ ಆರೋಪ ಹಾಕೋ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಂಗಳೂರು(ಡಿ.20): ಮಂಗಳೂರಿನಲ್ಲಿ ಗುರುವಾರ ನಡೆದ ಹಿಂಸಾಚಾರಕ್ಕೆ ಪೊಲೀಸರೇ ನೇರ ಕಾರಣ ಎಂದು ಎಂಎಲ್‌ಸಿ ಹರೀಶ್ ಕುಮಾರ್ ಆರೋಪಿಸಿದ್ದಾರೆ. ಖಾದರ್ ಮೇಲೆ ಆರೋಪ ಹಾಕೋ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಘಟನೆಗೆ ಪೊಲೀಸರೇ ನೇರ ಕಾರಣ. ಪ್ರಥಮವಾಗಿ ಜಿಲ್ಲೆಯ ಜನ ಶಾಂತಿ ಕಾಪಾಡಬೇಕು. ನಿನ್ನೆ ನಡೆದ ಘಟನೆಗೆ ನೇರವಾಗಿ ಪೊಲೀಸರೇ ಕಾರಣ. ಒಂದು ಸಾವಿರ ಮಕ್ಕಳು ಬಂದು ಪ್ರತಿಭಟನೆಗೆ ಮುಂದಾದರು, ಸ್ಲೋಗನ್ ಕೂಡ ಹಾಕಿರಲಿಲ್ಲ ಎಂದು ಅವರು ಹೇಳಿದ್ದಾರೆ.
undefined
ಕಾಂಗ್ರೆಸ್ ನಿಯೋಗದ ಮಂಗಳೂರು ಟಿಕೆಟ್ ಬುಕ್
ಪೊಲೀಸ್ ಸಿಬ್ಬಂದಿ 12 ಗಂಟೆಯಿಂದ ಗನ್ ಹಿಡಿದು ಕಾಯುತ್ತಿದ್ದರು. ನಮಗೆ ಇದರಲ್ಲಿ ಒಂದು ದೊಡ್ಡ ಅನುಮಾನವಿದೆ. ಕೇರಳದಿಂದ ಜನರನ್ನ ತಂದು ತಯಾರಾಗಿದ್ದಾರೆ ಎಂದು ಗೃಹಸಚಿವರು ಹೇಳಿದ್ದಾರೆ. ಹೀಗಾಗಿ ಪೊಲೀಸರೇ ಪೂರ್ವಯೋಜಿತವಾಗಿ ತಯಾರಾಗಿ ಈ ಘಟನೆ ಮಾಡಿದ್ದಾರೆ. ದೇಶಾದ್ಯಂತ ಗಲಭೆ ಆದ್ರೂ ಮಂಗಳೂರಲ್ಲಿ ಮಾತ್ರ ಗೋಲಿಬಾರ್ ಆಗಿದೆ ಎಂದು ಅವರು ಆರೋಪಿಸಿದ್ದಾರೆ.
ಜನರಿಗೆ ನೋವಾದರೆ ಪ್ರತಿಭಟನೆ ಮಾಡದೇ ಮನೆಯಲ್ಲಿ ಇರಬೇಕಾ? ಅದರಲ್ಲೂ ಅವರು ಪಕ್ಷ, ಸಂಘಟನೆಯವಲ್ಲ, ಮಕ್ಕಳು ಪ್ರತಿಭಟಿಸಿದ್ದು. ಬಂದರು ಪೊಲೀಸ್ ಠಾಣೆಯಲ್ಲಿ ಸಿಸಿ ಟಿವಿ ಇದೆ. ಹೀಗಾಗಿ ಪೊಲೀಸ್ ಡಿಜಿ ಆ ಸಿಸಿ ಟಿವಿ ವಿಡಿಯೋವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಿ. ಅಲ್ಲಿ ಯಾರಾದರೂ ಬೆಂಕಿ ಕೊಡೋಕೆ ಬಂದಿದ್ದೇ ಆದಲ್ಲಿ ನಾವು ಮಾತನಾಡುವುದಿಲ್ಲ ಎಂದಿದ್ದಾರೆ.
ಮಂಗಳೂರು: ಮಾಧ್ಯಮದ ಹೆಸರಲ್ಲಿ ಕೇರಳದಿಂದ ಬಂದವರ ಬಂಧನ
ಆದರೆ ಪ್ರತಿಭಟನಾಕಾರರು ಬೆಂಕಿ ಕೊಡೋಕು ಬಂದಿಲ್ಲ, ಏನೂ ಮಾಡಿಲ್ಲ. ಪೊಲೀಸರು ಆಸ್ಪತ್ರೆಗೆ ಹೋಗಿ ಲಾಠಿಚಾರ್ಜ್ ಮಾಡಿದ್ದಾರೆ. ಟಿಯರ್ ಗ್ಯಾಸ್ ಬಿಡ್ತಾರೆ ಅಂದ್ರೆ ಏನು..? ಇದೇನು ಪೊಲೀಸ್ ರಾಜ್ಯವಾ? ಮನುಷ್ಯತ್ವ ಇಲ್ವಾ? ಎಂದು ಅವರು ಪ್ರಶ್ನಿಸಿದ್ದಾರೆ.
ರಾಜಕಾರಣಿಗಳು ಯಾರೂ ಬೆಂಕಿ ಕೊಡಿ ಅಂತ ಹೇಳಿಲ್ಲ. ಅದು ಹೇಳಿದ್ದು ಬಿಜೆಪಿಯ ನಳಿನ್ ಕುಮಾರ್ ಕಟೀಲ್. ಖಾದರ್ ಮೇಲೆ ಆರೋಪ ಹಾಕೋ ವ್ಯವಸ್ಥೆ ಮಾಡ್ತಾ ಇದ್ದಾರೆ ಎಂದು ಹೇಳಿದ್ದಾರೆ.
ಮಂಗಳೂರು: ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಗೆ ಕರ್ಫ್ಯೂ ವಿಸ್ತರಣೆ