ಮಂಗಳೂರಿನ ಪೌರತ್ವ ಪ್ರತಿಭಟನೆಯ ಬಿಸಿ ಇದೀಗ ಮಲೆನಾಡಿಗೂ ತಟ್ಟಿದ್ದು, ಇದೀಗ ಇಲ್ಲಿಯೂ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ.
ಚಿಕ್ಕಮಗಳೂರು [ಡಿ.20]: ದೇಶದಲ್ಲಿ ಪೌರತ್ವ ಕಾಯ್ದೆ ಕಿಚ್ಚು ಹೆಚ್ಚಾಗಿದ್ದು ಎಲ್ಲೆಡೆ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಪೊಲೀಸ್ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಯಾವುದೇ ರೀತಿಯ ಗಲಭೆಗೆ ಪ್ರಚೋದನೆ ನೀಡುವ ಸಂದೇಶಗಳು ಹಬ್ಬದಂತೆ ಇಂಟರ್ನೆಟ್ ಸೇವೆ ಸ್ಥಗಿತ ಮಾಡಲಾಗಿದೆ.
ಮಂಗಳೂರು ಬಳಿಕ ಇದೀಗ ಕಾಫಿನಾಡು ಚಿಕ್ಕಮಗಳೂರಿನಲ್ಲಿಯೂ ಕೂಡ ಇಂಟರ್ನೆಟ್ ಸೇವೆ ಸ್ಥಗಿತ ಮಾಡಲಾಗಿದೆ. ಈ ಬಗ್ಗೆ ಎಲ್ಲರ ಮೊಬೈಲ್ ಗಳಿಗೆ ಇದೀಗ ಸಂದೇಶ ರವಾನಿಸಲಾಗುತ್ತಿದೆ.
ಕೊಪ್ಪ ತಾಲೂಕಿನ ಹಲವರು ಇಂಟರ್ನೆಟ್ ಸ್ಥಗಿತದ ಬಗ್ಗೆ ಸಂದೇಶ ಸ್ವೀಕರಿಸಿದ್ದಾರೆ. ಮಂಗಳೂರು ಪೌರತ್ವದ ಗಲಾಟೆಯ ಬಿಸಿ ಚಿಕ್ಕಮಗಳೂರಿಗೆ ತಟ್ಟಿದ್ದು, ಯಾವುದೇ ಗಲಭೆ ನಡೆಯದಂತೆ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ.
ಮಂಗಳೂರಲ್ಲಿ 48 ತಾಸು ಇಂಟರ್ನೆಟ್ ಬಂದ್..
ದೇಶದ ಹಲವೆಡೆ ಪೌರತ್ವ ಕಾಯ್ದೆ ವಿರೋಧಿಸಿ ತೀವ್ರ ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆ ಹಿಂಸಾರೂಪವನ್ನು ಪಡೆದಿತ್ತು. ಹಲವೆಡೆ ಭಾರೀ ಹಿಂಸಾಚಾರ ನಡೆದಿದ್ದು, ಎಲ್ಲೆಡೆ ನಿಷೇಧಾಜ್ಞೆಯನ್ನೂ ಜಾರಿಗೊಳಿಸಲಾಗಿತ್ತು.