ಹಳ್ಳದಲ್ಲಿ ಸಿಲುಕಿದ್ದ ಐವರು ರೈತರ ರಕ್ಷಣೆ, ಸ್ವತಃ ತಾವೇ ಬೋಟ್‌ನಲ್ಲಿ ಹೋಗಿ ಕರೆತಂದ ತಹಶೀಲ್ದಾರ್

By Suvarna News  |  First Published Sep 9, 2022, 5:22 PM IST

ಜಮೀನಿಗೆ ಹೋದ ಸಂದರ್ಭದಲ್ಲಿ ದಿಢೀರ್ ಹಳ್ಳದ ನೀರು ಹೆಚ್ಚಾಗಿ ನಡುಗಡ್ಡೆಯಲ್ಲೇ ಸಿಲುಕಿಕೊಂಡಿದ್ದ ಐವರು ರೈತರನ್ನು ರಕ್ಷಣೆ ಮಾಡಲಾಗಿದೆ. ಖುದ್ದು ತಹಸೀಲ್ದಾರ್ ಬೋಟ್‌ನಲ್ಲಿ ಹೋಗಿ ಕರೆದುಕೊಂಡು ಬಂದಿರುವುದು ವಿಶೇಷ.


ವರದಿ-ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್


ಕೊಪ್ಪಳ, (ಸೆಪ್ಟೆಂಬರ್.09): ಅವರೆಲ್ಲ ತಮ್ಮ ಪಂಪಸೆಟ್ ಗಳನ್ನು ಬಿಚ್ಚಿಕೊಂಡು ಬರಲು ಹಳ್ಳಕ್ಕೆ ಇಳಿದಿದ್ದರು. ಆದರೆ ಏಕಾಏಕಿ ಬಂದ ನೀರು ಅವರನ್ನು ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿ ಹಾಕಿಕೊಳ್ಳುವಂತೆ ಮಾಡಿತು.‌ಆದರೆ ಅಗ್ನಿಶಾಮಕ ದಳದ ಸಿಬ್ಬಂದಿಯ ಕಾರ್ಯಾಚರಣೆಯಿಂದಾಗಿ ಅವರೆಲ್ಲ ಸುರಕ್ಷಿತವಾಗಿ ಮರಳಿದ್ದಾರೆ.‌ಅಷ್ಟಕ್ಕೂ ಏನಿದು ರೈತರ ಸಂಕಷ್ಟ ನೋಡೋಣ ಈ ರಿಪೋರ್ಟ್ ನಲ್ಲಿ.

 ಸಾಮಾನ್ಯವಾಗಿ ಹಳ್ಳಕ್ಕೆ ಹೊಂದಿಕೊಂಡಂತೆ ಇರುವ ಗ್ರಾಮಗಳ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಹಳ್ಳದ ನೀರನ್ನು ಅವಲಂಬಿಸಿರುತ್ತಾರೆ. ಹಳ್ಳಕ್ಕೆ ನೀರು ಬಂದಾಗ ರೈತರು ಪಂಪಸೆಟ್ ಗಳನ್ನು ತೆಗೆದುಕೊಂಡು ಬರುತ್ತಾರೆ. ಹೀಗೆಯೇ ಪಂಪಸೆಟ್ ಗಳನ್ನು ತರಲು ಹೋಗಿದ್ದ ರೈತರು ಹಳ್ಳದಲ್ಲಿ ಸಿಲುಕಿ ಹಾಕಿಕೊಂಡು ಸಂಕಷ್ಟ ಅನುಭವಿಸಿದ್ದಾರೆ.

Tap to resize

Latest Videos

undefined

Karnataka Rains: ಬೆಳಿ ನೀರುಪಾಲಾಗೇತ್ರಿ, ನಿರೀಕ್ಷೆ ನುಚ್ಚುನೂರಾಗೇತ್ರಿ, ರೈತರ ಗೋಳು ಕೇಳೋರೇ ಇಲ್ಲ..!

ಕೊಪ್ಪಳ ಜಿಲ್ಲೆ ಸದಾ ಬಿಸಿಲಿಗೆ ಹೆಸರುವಾಸಿಯಾದ ಜಿಲ್ಲೆ.‌ಆದರೆ ಈ ವರ್ಷ ಮಾತ್ರ ಕೊಪ್ಪಳ ಜಿಲ್ಲೆಯ ವಿಪರೀತವಾಗಿ ಮಳೆ ಆಗುತ್ತಿರುವ ಹಿನ್ನಲೆಯಲ್ಲಿ‌ ಮಲೆನಾಡಿನಂತಾಗಿದೆ.‌ ಅದರಲ್ಲಿ ಕಳೆದ‌ ಎರಡು ತಿಂಗಳಿನಿಂದ ಕೊಪ್ಪಳ ತಾಲೂಕಿನ ಹಿರೇಹಳ್ಳ ಜಲಾಶಯದಿಂದ‌ ನಿರಂತರವಾಗಿ ನೀರು ಬಿಡಲಾಗುತ್ತಿದೆ.‌ ಈ ಹಿನ್ನಲೆಯಲ್ಲಿ ಇಂದು ಕೊಪ್ಪಳ ತಾಲೂಕಿನ ಕೊಳೂರು ಗ್ರಾಮದ ಬಳಿ ಇರುವ ಹಿರೇಹಳ್ಳದಲ್ಲಿ   ಇಂದು ಬೆಳಿಗ್ಗೆ ಐವರು ರೈತರು ಸಿಲುಕಿ ಹಾಕಿಕೊಂಡಿದ್ದರು.

ರೈತರು ಹೇಗೆ ಸಿಲುಕಿದ್ದೇಗೆ?

ಇನ್ನು ಕೊಳೂರು ಗ್ರಾಮಸ್ಥರು ಹಳ್ಳದಲ್ಲಿದ್ದ ಪಂಪಸೆಟ್ ಗಳನ್ನು ತರಲು ರೈತರು ಹಳ್ಳಕ್ಕೆ ಹೋಗಿದ್ದರು. ಈ ವೇಳೆಗಲ್ಲಿ ಹಿರೇಹಳ್ಳ ಜಲಾಶಯದಿಂದ 5 ಸಾವಿರ ಕ್ಯೂಸೆಕ್ಸ್ ನೀರು ಹಳ್ಳಕ್ಕೆ ಬಿಟ್ಟಿದ್ದಾರೆ. ಈ ವೇಳೆ ನೀರು ಬಿಟ್ಟಿರುವ ವಿಷಯ ತಿಳಿಯುತ್ತಲೇ ಬಹುತೇಕ ರೈತರು ಮರಳಿ ದಡಕ್ಕೆ ಬಂದಿದ್ದಾರೆ. ಆದರೆ ಮಹಾಂತೇಶ್, ರಮೇಶ್, ಬಸವರಾಜ,ಕೆಂಚಪ್ಪ,ಬಸವರಾಜ ಹುಯಿಲಗೋಳ ಎನ್ನಯವ ರೈತರು ಮಾತ್ರ ಬರಲು ಸಾಧ್ಯವಾಗದೆ ಅಲ್ಲಿಯೇ ಉಳಿದುಬಿಟ್ಟರು. ಹೀಗಾಗಿ ಈ ಎಲ್ಲ ರೈತರು ಹಳ್ಳದಲ್ಲಿ ಸಿಲುಕಿ ಹಾಕಿಕೊಳ್ಳಬೇಕಾಯಿತು.

ಹೇಗಿತ್ತು ರಕ್ಷಣಾ ಕಾರ್ಯಾಚರಣೆ?
ಇನ್ನು ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತಹಶೀಲ್ದಾರ ವಿಠ್ಠಲ್ ಚೌಗಲೆ ಆಗಮಿಸಿ,ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಯಿಸಿದರು. ಅವರು ಹಳ್ಳದ ಕುರಿತು ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು. ಬಳಿಕ ಬೋಟ್ ಸಿದ್ದಪಡಿಸಿಕೊಂಡು ರೈತರು ಇದ್ದ ನಡುಗಡ್ಡೆಗೆ ತೆರಳಿ ಎರಡು ಬ್ಯಾಚ್ ನಲ್ಲಿ ರೈತರನ್ನು ಸುರಕ್ಷಿತವಾಗಿ ದಡಕ್ಕೆ ಕರೆತಂದರು.

Karnataka Rains: ವರುಣನ ಆರ್ಭಟಕ್ಕೆ ಉತ್ತರ ಕರ್ನಾಟಕ ತತ್ತರ: 2 ಬಲಿ

ಸ್ವತಃ ಬೋಟ್ ನಲ್ಲಿ ಹೋದ ತಹಶೀಲ್ದಾರ್

ಇನ್ನು ಸಾಮಾನ್ಯವಾಗಿ ರಕ್ಣಣಾ ಕಾರ್ಯಾಚರಣೆಗಳಲ್ಲಿ ಅಧಿಕಾರಿಗಳು ಸೂಚನೆಗಳನ್ನು ಮಾತ್ರ ನೀಡುತ್ತಾರೆ. ಆದರೆ ಕೊಪ್ಪಳ ತಹಶೀಲ್ದಾರ ವಿಠ್ಠಲ್ ಚೌಗಲೆ ಮಾತ್ರ ಇದಕ್ಕೆ ಅಪವಾದ. ಕೇವಲ ಸೂಚನೆ ನೀಡುವುದಷ್ಟೇ ಅಲ್ಲದೆ ಸ್ವತಃ ತಾವೇ ತಾವೇ ಬೋಟ್ ನಲ್ಲಿ ತೆರಳಿ ನಡುಗಡ್ಡೆಯಲ್ಲಿ ಸಿಲುಕಿದ್ದ ರೈತರನ್ನು ಸುರಕ್ಷಿತವಾಗಿ ಕರೆತರುವಲ್ಲಿ ಯಶಸ್ವಿಯಾದರು.

ಆತಂಕಕ್ಕೆ ಸೃಷ್ಟಿಸಿದ್ದ ಬೋಟ್
ಇನ್ನು ಬೋಟ್ ಮೂಲಕ  ರೈತರನ್ನು ದಡಕ್ಕೆ ತರುವ ವೇಳೆಯಲ್ಲಿ ಬೋಟ್ ಮರಳಿನಲ್ಲಿ ಸಿಲುಕಿ ಹಾಕಿಕೊಂಡಿತ್ತು. ಈ ವೇಳೆಯಲ್ಲಿ ಬೋಟ್ ಮುಂದಕ್ಕೆ,ಹಿಂದಕ್ಕೆ ಚಲಿಸಲಾರದೆ ನಿಂತಲ್ಲೇ ನಿಂತಿತು.‌ಇದರಿಂದಾಗಿ ದಡದಲ್ಲಿದ್ದವರಿಗೆ ಕೆಲಕಾಲ ಆತಂಕ ಸೃಷ್ಟಿ ಮಾಡಿತ್ತು. ‌ಆದರೆ ಕೊನೆಗೂ ಅಗ್ನಿಶಾಮಕ ದಳದ ಸಿಬ್ಬಂದಿ ಆ ಎಲ್ಲ‌ ಅಡೆತಡೆಗಳನ್ನು ಸರಿಪಡಿಸಿಕೊಂಡು ದಡಕ್ಕೆ ಬರುವಲ್ಲಿ ಯಶಸ್ವಿಯಾದರು.

ಇನ್ನು ಹಳ್ಳದ ನಡುಗಡ್ಡೆಯಲ್ಲಿ ಸಿಲುಕಿ ಹಾಕಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಕೆಲ ಗಂಟೆಗಳ ಕಾಲ ಆತಂಕಕ್ಕೆ ಒಳಗಾಗಿದ್ದರು. ಆದರೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ತಹಶೀಲ್ದಾರ ವಿಠ್ಠಲ್ ಚೌಗಲೆ ಕಾರ್ಯಾಚರಣೆ ಮಾಡುವ ಮೂಲಕ ರೈತರನ್ನು ಸುರಕ್ಷಿತವಾಗಿ ದಡಕ್ಕೆ ತಂದರು.‌ಇದರಿಂದ ಸ್ಥಳೀಯರು ನೆಮ್ಮದಿಯ ನಿಟ್ಟುಸಿರು ಬಿಟ್ಟರು.‌ಇನ್ನಾದರೂ ರೈತರು ಮಳೆಗಾಲದಲ್ಲಿ ಹಳ್ಳಕ್ಕೆ‌ ಇಳಿಯ ಬೇಕಾದರೆ ಜಾಗರೂಕತೆಯಿಂದ ಇರುವುದು ಒಳಿತು.

click me!