ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ತಮಿಳುನಾಡು ಮೂಲದವರು ನೀಡಿದ್ದ ಉಡುಗೊರೆ ಉಡುಪಿಗೆ ಬಂದಿದೆ.
ವರದಿ-ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್
ಉಡುಪಿ, (ಸೆಪ್ಟೆಂಬರ್.09): ಪ್ರಧಾನಿ ಮೋದಿ ಅನೇಕ ಮಾದರಿ ನಡೆಗಳ ಮೂಲಕ ಗಮನಸೆಳೆಯುತ್ತಾರೆ. ಪ್ರಧಾನಿ ಎಲ್ಲೇ ಹೋಗಲಿ ಅವರಿಗೆ ಸ್ಮರಣೆಕೆಯಾಗಿ ನೀಡಿದ ವಸ್ತುಗಳನ್ನು ಹರಾಜು ಹಾಕುವ ಮೂಲಕ ಸಂಗ್ರಹವಾದ ಹಣವನ್ನು ಸದ್ವಿನಿಯೋಗ ಮಾಡುವ ಪರಂಪರೆ ನಡೆಸಿಕೊಂಡು ಬಂದಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಯಾದಗಿನಿಂದಲೂ ಇದೇ ಪರಿಪಾಟ ಮುಂದುವರೆದಿದೆ. ಇದೀಗ ಪ್ರಧಾನಿಗೆ ಸಿಕ್ಕ ಸ್ಮರಣಿಕೆಯೊಂದು, ಉಡುಪಿಯಲ್ಲಿ ರಾರಾಜಿಸುತ್ತಿದೆ.
ಹೌದು..ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಕಾರ್ತೀಕೆಯ ದೇವರ ಫೋಟೋವನ್ನು ತಮಿಳುನಾಡು ಮೂಲದವರು ಉಡುಗೊರೆ ರೂಪದಲ್ಲಿ ನೀಡಿದ್ದರು. ಆದರೆ, ಈ ಫೋಟೋ ಈಗ ಉಡುಪಿಯಲ್ಲಿದೆ.
undefined
ಯೆಸ್... ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ರೂಪದಲ್ಲಿ ನೀಡಿದ ದೇವರ ಫೋಟೋವನ್ನು ಉಡುಪಿ ಅಂಬಲಪಾಡಿಯ ನಿವಾಸಿ, ಲೆಕ್ಕಪರಿಶೋಧಕ ಕೆ.ರಂಗನಾಥ್ ಆಚಾರ್ ಹರಾಜಿನಲ್ಲಿ ಖರೀದಿಸಿ, ತಮ್ಮ ಮನೆಯ ದೇವರ ಕೋಣೆಯಲ್ಲಿಟ್ಟು ಪೂಜಿಸುತ್ತಿದ್ದಾರೆ.
PM Modi Traditional Attire ಪಂಚೆ, ಶರ್ಟ್ ಧರಿಸಿ ಕೇರಳಕ್ಕೆ ಆಗಮಿಸಿದ ಪ್ರಧಾನಿ ಮೋದಿ ವಸ್ತ್ರಕ್ಕೆ ಮಾರು ಹೋದ ಜನ!
ಭಾರತದ ಪ್ರಧಾನಿಯವರು ವಿವಿಧೆಡೆ ಭೇಟಿ ನೀಡಿದಾಗ ದೊರಕುವ ಉಡುಗೊರೆ, ಐಷರಾಮಿ ವಸ್ತುಗಳು ಹಾಗು ಇನ್ನಿತರ ಎಲ್ಲಾ ವಸ್ತುಗಳನ್ನು ಹರಾಜು ಹಾಕಿ, ಅದರಿಂದ ಬರುವ ಹಣವನ್ನು ಉತ್ತಮ ಕಾರ್ಯಕ್ಕೆ ವಿನಿಯೋಗಿಸುವುದು ವಾಡಿಕೆ. ಅದರಂತೆ 2021 ರಲ್ಲಿ ಕೇಂದ್ರ ಸರಕಾರ ಪ್ರಧಾನಿಯವರ ಉಡುಗೊರೆಯ ಹರಾಜಿನಿಂದ ಬಂದ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸುತ್ತೇವೆ ಎಂದು ಘೋಷಿಸಿದ್ದರು.
ಪ್ರಧಾನಿ ಕಚೇರಿಯ ಅಧಿಕೃತ ಹರಾಜು ಪ್ರಕ್ರಿಯೆ ನಡೆಯುವ ವೆಬ್ ಸೈಟ್ ನಲ್ಲಿ ಹರಾಜು ನಡೆಯಲಿರುವ ವಸ್ತುಗಳ ಮಾಹಿತಿ ಹಾಕುತ್ತಾರೆ. ಸಾವಿರ ರೂಪಾಯಿನಿಂದ ಕೋಟಿ ರೂಪಾಯಿಯವರೆಗೆ ಹರಾಜು ಪ್ರಕ್ರಿಯೆ ನಡೆದಿದೆ. ಅದರಲ್ಲಿ ಮೋದಿಯವರ ಹುಟ್ಟುಹಬ್ಬಕ್ಕೆ ತಮಿಳುನಾಡು ಮೂಲದವರು ನೀಡಿದ ಕಾರ್ತಿಕೇಯ ದೇವರ ಪೋಟೊವನ್ನು ಉಡುಪಿಯ ರಂಗನಾಥ್ ಆಚಾರ್ ಖರೀಧಿಸಿ ಅಭಿಮಾನ ಮೆರೆದಿದ್ದಾರೆ.
ಉಡುಪಿಯಲ್ಲಿ ಸಿಎಯಾಗಿ ವೃತ್ತಿ ನಡೆಸುತ್ತಿರುವ ರಂಗನಾಥ್ ಆಚಾರ್ ಅವರು ವಿವಿಧ ವೆಬ್ ಸೈಟ್ ಗಳಿಗೆ ಆರ್ಥಿಕತೆಯ ಕುರಿತಾಗಿ ಲೇಖನಗಳನ್ನು ಬರೆಯುತ್ತಾರೆ. ಇವರೊಬ್ಬ ಉತ್ತಮ ಲೇಖಕರು ಆಗಿದ್ದು ,ಪುಸ್ತಕವನ್ನು ಬರೆದಿದ್ದು, ಮುದ್ರಣ ಹಂತದಲ್ಲಿದೆ
ವೆಬ್ ಸೈಟ್ ನಲ್ಲಿ ಬಿಡ್ ಮಾಡಿ ಆನ್ ಲೈನ್ ನಲ್ಲಿ ಹಣ ಕಳುಹಿಸಲಾಗಿತ್ತು. ನಂತರ ಹರಾಜು ಪ್ರಕ್ರಿಯೆಯ ದಿನಾಂಕ ಮುಗಿದ ಮೂರು ವಾರಗಳ ನಂತರ ಕಾರ್ತಿಕೇಯನ ಫೋಟೋ ಜಾಗರೂಕವಾಗಿ, ಸ್ಪೀಡ್ ಪೋಸ್ಟ್ ನಲ್ಲಿ ದೆಹಲಿಯಿಂದ ಉಡುಪಿಗೆ ಬಂದಿದೆ.
ಸ್ಥಳೀಯ ಪತ್ರಿಕೆಯೊಂದರಲ್ಲಿ ಹರಾಜಿನ ಬಗ್ಗೆ ಮಾಹಿತಿ ತಿಳಿದು ನಾನು ಭಾಗವಹಿಸಿದ್ದೆ ರಂಗನಾಥ್ ತಿಳಿಸಿದ್ದಾರೆ. ನನಗೆ ಮೆಚ್ಚುಗೆ ಯಾದ ಸುಬ್ರಹ್ಮಣ್ಯ ದೇವರ ಪೋಟೊವನ್ನು ಖರೀದಿಸಿದ್ದೇನೆ. ಈ ಹಣವನ್ನು ನಮಾಮಿ ಗಂಗಾ ಯೋಜನೆಗೆ ಬಳಸುತ್ತಾರೆ ಎಂದು ತಿಳಿದು ಸಂತೋಷವಾಯಿತು. ಬಾಲ್ಯದಲ್ಲಿ ತಂದೆಯೊಂದಿಗೆ ಗಂಗೋತ್ರಿ, ಘರ್ ಮುಕ್ತೇಶ್ವರ್, ಪ್ರಯಾಗ್ ರಾಜ್, ಕಾನ್ಪುರ, ಪಾಟ್ನಾ, ಕಲ್ಕತ್ತಾ ಭಾಗದಲ್ಲಿ ಪ್ರವಾಸ ಹೋದ ಅನುಭವ ಇದೆ. ಈ ಮಹತ್ ಕಾರ್ಯಕ್ಕೆ ನನ್ನ ಕಿಂಚಿತ್ತು ಸೇವೆ ನೀಡಿದ್ದು ಖುಷಿ ತಂದಿದೆ. ಈ ವರ್ಷವೂ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸುತ್ತೇನೆ ಎಂದು ಹೇಳಿದ್ದಾರೆ.
ಕಳೆದ ವರ್ಷ ನಡೆದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ, ದೇವರ ಪೋಟೊ ಖರೀದಿಸಿದ ರಂಗನಾಥ್ ಆಚಾರ್ ಅವರು ತಮ್ಮ ಅನುಭವವನ್ನು ವ್ಯಾಟ್ಸಾಪ್ ಗ್ರೂಪ್ ಮೂಲಕ ಸ್ನೇಹಿತರೊಂದಿಗೆ ಹಂಚಿಕೊಂಡಿದ್ದಾರೆ. ಈ ವರ್ಷದ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಲು ರಂಗನಾಥ್ ಅವರ ಸ್ನೇಹಿತರ ತಂಡವೂ ಸಿದ್ದವಾಗಿದೆ.
ತಮಿಳುನಾಡಿನಲ್ಲಿ ಕಾರ್ತೀಕೆಯ ಹೆಸರಿನಲ್ಲಿ ಪೂಜಿಸುವ ದೇವರನ್ನು ಕರ್ನಾಟಕದಲ್ಲಿ ಸುಬ್ರಹ್ಮಣ್ಯ ಎಂದು ಪೂಜಿಸುತ್ತಾರೆ. ತಮಿಳುನಾಡಿನ ಅಭಿಮಾನಿಗಳು ಮೋದಿಯವರ ಮೇಲಿನ ಅಪಾರ ಪ್ರೀತಿಯಿಂದ ಉಡುಗೊರೆಯನ್ನು ನೀಡಿದ್ದಾರೆ. ಉಡುಪಿಯ ಅಭಿಮಾನಿ ಮೋದಿಯವರ ಕಾರ್ಯ ವೈಖರಿ ಮತ್ತು ಸದುದ್ದೇಶವನ್ನು ಮೆಚ್ಚಿ ತನ್ನ ಕಿಂಚಿತ್ತು ಸೇವೆ ಇರಲಿ ಎಂಬ ಕಾರಣಕ್ಕೆ ಹರಾಜಿನಲ್ಲಿ ಭಾಗವಹಿಸಿದ್ದಾರೆ, ಮನೆಗೆ ಬರುವ ಅತಿಥಿಗಳಿಗೆ ಇದು ಪ್ರೇರಣೆಯಾಗಲಿ ಎಂದು ರಂಗನಾಥ್ ಆಚಾರ್ ಹೇಳುತ್ತಾರೆ.